ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಫೋನ್ ಗಳ ರಕ್ಷಕ ಕ್ವಿಕ್ ಹೀಲ್

By Mahesh
|
Google Oneindia Kannada News

Quick Heal launches world's first mobile virus scan
ತಿರುವನಂತಪುರಂ, ಆ.13: ದೇಶದ ಪ್ರಮುಖ ಆಂಟಿ ವೈರಸ್ ಸೊಲುಷನ್ ತಯಾರಕರಾದ ಕ್ವಿಕ್ ಹೀಲ್ ಗುರುವಾರ ವಿಶ್ವದ ಮೊದಲ ಮೊಬೈಲ್ ಫೋನ್ ವೈರಸ್ ಸ್ಕ್ಯಾನ್ ನ್ನು ಕೇರಳದಲ್ಲಿ ಬಿಡುಗಡೆ ಮಾಡಿದೆ.

ಬಹುರಾಷ್ಟ್ರೀಯ ಕಂಪೆನಿಗಳು ಕೆಲ ಆಂಟಿ ವೈರಸ್ ಗಳನ್ನು ಬಿಡುಗಡೆಗೊಳಿಸಿದ್ದರೂ ಇವು ದುಬಾರಿ ಮೊಬೈಲ್ ಗಳಿಗೆ ಮಾತ್ರ ಸೂಕ್ತವಾಗಿವೆ. ಕಂಪೆನಿಯ ಪಿಸಿ2ಬೈಲ್ ಸ್ಕ್ಯಾನ್ ತಂತ್ರಜ್ಞಾನದ ಮೂಲಕ ಯಾವುದೇ ಮೊಬೈಲ್ ಫೋನ್ ನಲ್ಲಿ ವೈರಸ್ ನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಕ್ವಿಕ್ ಹೀಲ್ ನ ನಿರ್ದೇಶಕ ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿ ಸಂಜಯ್ ಕಾಟ್ಕರ್ ಅವರು ಹೇಳಿದರು.

ಕ್ವಿಕ್ ಹೀಲ್ ಟೋಟಲ್ ಸೆಕ್ಯುರಿಟಿ 2010 ತಂತ್ರಾಂಶವನ್ನು ಯಾವುದೇ ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಅಳವಡಿಸಿಕೊಂಡರೆ ಯುಎಸ್ ಬಿ ಕೇಬಲ್ ಮೂಲಕ ಮೊಬೈಲ್ ನ್ನು ಸ್ಕ್ಯಾನ್ ಮಾಡಬಹುದಾಗಿದೆ. ಕಂಪ್ಯೂಟರ್ ನಲ್ಲಿ ಬ್ಲೂ ಟೂಥ್ ಹಾಗೂ ಮೊಬೈಲ್ ನಲ್ಲಿ ಬ್ಲೂ ಟೂಥ್ ಇದ್ದರೆ ಇದರ ಮುಖಾಂತರವೂ ಸ್ಕ್ಯಾನ್ ಮಾಡಬಹುದಾಗಿದೆ.

ಕ್ವಿಕ್ ಹೀಲ್ ದೇಶದ ಆಂಟಿ ವೈರಸ್ ಮಾರುಕಟ್ಟೆಯಲ್ಲಿ ಶೇ.30ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಇದೀಗ ಹ್ಯಾಕರ್ ಗಳು ಸೈಬರ್ ಕ್ರಿಮಿನಲ್ ಗಳು ಮೊಬೈಲ್ ದೂರವಾಣಿ ಮೂಲಕ ಪ್ರಮುಖ ಕಂಪೆನಿಗಳ, ವ್ಯಕ್ತಿಗಳ ದಾಖಲೆಗಳನ್ನು ಕದಿಯುತ್ತಿದ್ದು, ಇದರಿಂದ ರಕ್ಷಣೆ ಸಿಗಲಿದೆ ಎಂದು ಸಂಜಯ್ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X