ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಟ್ ವರ್ಕ್ ಬದಲಾದರೂ ನಂಬರ್ ಬದಲಾಗದು

By Mahesh
|
Google Oneindia Kannada News

Mobile Number Portability To Be Rolled Out From Oct 31
ಬೆಂಗಳೂರು, ಆ.13: ಬಹುನಿರೀಕ್ಷಿತ ಮೊಬೈಲ್ ನಂಬರ್ ಪೋರ್ಟಬಿಲಿಟಿ(MNP) ಸೇವೆಯನ್ನು ದೇಶದಾದ್ಯಂತ ಅ.31ರೊಳಗೆ ಅಳವಡಿಸಲಾಗುವುದು ಎಂದು ಟ್ರಾಯ್(TRAI) ಪ್ರಕಟಿಸಿದೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೋಲ್ಕತ್ತಾ ನಗರದಲ್ಲಿ ಮೊದಲು ಈ ಸೇವೆ ಕಲ್ಪಿಸಲಾಗುವುದು. ಮೊದಲು ಡಿ.31,2009ರೊಳಗೆ ಈವ್ಯವಸ್ಥೆ ಜಾರಿಗೊಳ್ಳಲಿದೆ ಎಂದಿದ್ದ ಟ್ರಾಯ್ ನಂತರ ಮಾರ್ಚ್ 31,2010 ಅಂತಿಮ ಗಡುವು ಎಂದಿತ್ತು. ನಂತರ ಜೂನ್ 30 ಕ್ಕೆ ಚಾಲನೆ ಎಂದಿದ್ದರೂ ಮೊಬೈಲ್ ಸೇವಾದಾರರು ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲರಾಗಿದ್ದು ವಿಳಂಬಕ್ಕೆ ಕಾರಣ ಎನ್ನಲಾಗಿತ್ತು.

ಆದರೆ, ಈ ಬಾರಿ ನಿಗದಿತ ಅವಧಿಯಲ್ಲಿ MNP ಅಳವಡಿಸಲು ಸೇವಾದಾರರು ವಿಫಲರಾದರೆ, ಸೇವಾದಾರರ ಮುಂಬರವ ವಾಣಿಜ್ಯ ಉದ್ದೇಶಿತ ಸೌಲಭ್ಯಗಳಿಗೆ ಕಡಿವಾಣ ಹಾಕಲಾಗುವುದು ಎಂದು ದೂರ ಸಂಪರ್ಕ ಇಲಾಖೆ (DoT) ಹೇಳಿದೆ.

ಈ ಬಗ್ಗೆ ಈಗಾಗಲೇ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಪ್ರಮುಖ ಸೇವಾದಾರರಾದ ಭಾರ್ತಿ ಏರ್ ಟೆಲ್, ರಿಲೆಯನ್ಸ್, ವೋಡಾಫೋನ್ ಎಸ್ಸಾರ್, ಟಾಟಾ ಟೆಲಿ, ಐಡಿಯಾ, ಎಸ್ ಟೆಲ್ ಹಾಗೂ ಏರ್ ಸೆಲ್, 3ಜಿ ಸೇವೆ ಆರಂಭಿಸಲು ಉತ್ಸುಕರಾಗಿದ್ದಾರೆ.

ನಂಬರ್ ಪೋರ್ಟೆಬಿಲಿಟಿ ಅಂದರೆ, ಮೊಬೈಲ್ ಕಂಪನಿ ಬದಲಾದರೆ, ಸೆಲ್ ಫೋನ್ ಸಂಖ್ಯೆ ಬದಲಾಗುವ ಆತಂಕವಿಲ್ಲ. ಯಾವುದೇ ಕಂಪನಿಯ ಸಿಮ್ ಕಾರ್ಡ್ ಹೊಂದಿದ್ದರೂ ಮೊದಲಿದ್ದ ಸಂಖ್ಯೆಯೇ ಉಳಿಯಲಿದೆ.

ಮೊಬೈಲ್ ನಂಬರ್ ಪೋರ್ಟಬಿಲಿಟಿ ಸೌಲಭ್ಯ ಒದಗಿಸಲು ಟೆಲ್ಕಾರ್ಡಿಯಾ ಟೆಕ್ನಾಲಜೀಸ್ ಸಂಸ್ಥೆಯ ಅಂಗ ಸಂಸ್ಥೆ ಎಂ ಎನ್ ಪಿ ಗೆ ಕೇಂದ್ರ ದೂರ ಸಂಪರ್ಕ ಇಲಾಖೆ ಈಗಾಗಲೇ ಅನುಮತಿ ನೀಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X