ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಸ್ಲಿಮಾ ವೀಸಾ ಒಂದು ವರ್ಷ ವಿಸ್ತರಣೆ

By Mahesh
|
Google Oneindia Kannada News

Taslima Nasrin
ನವದೆಹಲಿ, ಆ.13: ವಿವಾದಿತ ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸ್ರೀನ್ ಅವರ ವೀಸಾ ವಿಚಾರದಲ್ಲಿ ತನ್ನ ಈ ಮೊದಲಿನ ನಿಲುವನ್ನು ಬದಲಿಸಿರುವ ಸರಕಾರ ವೀಸಾ ಅವಧಿಯನ್ನು ಈ ವರ್ಷದ ಆಗಸ್ಟ್‌ನಿಂದ ಇನ್ನೂ ಒಂದು ವರ್ಷ ವಿಸ್ತರಿಸಿದೆ. ಈ ಮೊದಲು ಸರಕಾರವು ತಸ್ಲಿಮಾ ಅವರಿಗೆ ದೇಶವನ್ನು ತೊರೆಯುವಂತೆ ಮತ್ತು ದೇಶದಲ್ಲಿ ನೆಲೆಸಲು ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.

ಅವರ ವೀಸಾ ಅವಧಿ ಆ.16ಕ್ಕೆ ಮುಗಿಯುತ್ತಿದ್ದು ಅದನ್ನೀಗ ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಭಾರತದಲ್ಲಿ ಖಾಯಂ ವಾಸಕ್ಕಾಗಿ ಅವರು ಸಲ್ಲಿಸಿರುವ ಅರ್ಜಿ ಅನೇಕ ವರ್ಷಗಳಿಂದ ತೂಗುಯ್ಯಾಲೆಯಲ್ಲಿದೆ.

ಲೇಖಕಿಯಾಗಿ ಪರಿವರ್ತಿತರಾದ 47ರ ಹರೆಯದ ವೈದ್ಯೆ ತಸ್ಲಿಮಾ ಅವರು ಆ.25ರಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಭಾರತದಲ್ಲಿ ಖಾಯಂ ವಾಸದ ಅವಕಾಶಕ್ಕಾಗಿ ಕೂಡಾ ಪ್ರಯತ್ನ ನಡೆಸುತ್ತಿದ್ದಾರೆ.

ಸ್ವಿಡೀಷ್ ಪಾಸ್ ಪೋರ್ಟ್ ಹೊಂದಿರುವ ತಸ್ಲೀಮಾ, ವೀಸಾ ಅವಧಿಯನ್ನು 2005 ರಿಂದ ವಿಸ್ತರಿಸುತ್ತಾ ಬಂದಿರುವ ಭಾರತ ಸರ್ಕಾರ, ಐದು ವರ್ಷಗಳಿಗೂ ಅಧಿಕ ಕಾಲ ವಿಸ್ತರಣೆ ಮಾಡುವಂತಿಲ್ಲ. ಬೇರೊಂದು ದೇಶದಿಂದ ಹೊಸ ವೀಸಾ ಪಡೆಯಲು ಆಕೆ ಪ್ರಯತ್ನಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X