ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಗ್ಯಲಕ್ಷ್ಮಿ ಜೊತೆ ಸೀರೆ ಉಚಿತ

By Mrutyunjaya Kalmat
|
Google Oneindia Kannada News

MP Narendraswamy
ಬೆಂಗಳೂರು, ಆ. 13 : ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ತಾಯಂದಿರಿಗೆ ಇನ್ನು ಮುಂದೆ ಸೀರೆ ಭಾಗ್ಯ. ಇದು ರಾಜ್ಯ ಸರಕಾರದ ವಿನೂತನ ಯೋಜನೆ. ರಾಜ್ಯದಲ್ಲಿ ಇದುವರೆಗೆ ಭಾಗ್ಯಲಕ್ಷ್ಮಿ ಯೋಜನೆಯ ಲಾಭ 9 ಲಕ್ಷ ಹೆಣ್ಣುಮಕ್ಕಳಿಗೆ ದೊರಕಿದೆ. ಈ ಹೆಣ್ಣುಮಕ್ಕಳ ಅಮ್ಮಂದಿರಿಗೆ ಒಂದು ಜೊತೆ ಉತ್ತಮ ಗುಣಮಟ್ಟದ ಸೀರೆಯನ್ನು ಉಚಿತವಾಗಿ ನೀಡಲು ಸರಕಾರ ನಿರ್ಧರಿಸಿದೆ.

ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವ ಎಂ ಪಿ ನರೇಂದ್ರಸ್ವಾಮಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ತಲಾ 300 ರುಪಾಯಿ ಬೆಲೆಯ ಸೀರೆಯನ್ನು 9 ಲಕ್ಷ ತಾಯಂದಿರಿಗೆ ವಿತರಿಸಲಾಗುವುದು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಇವುಗಳನ್ನು ಪೂರೈಸಲಾಗುವುದು. ಈ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ 30 ಕೋಟಿ ರುಪಾಯಿ ಒದಗಿಸಿದ್ದಾರೆ ಎಂದು ನರೇಂದ್ರಸ್ವಾಮಿ ಹೇಳಿದರು.

ಈ ತಿಂಗಳ 16ರ ನಂತರ ಎಲ್ಲಾ ಜಿಲ್ಲೆಗಳಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಮಾವೇಶ ಆಯೋಜಿಸಿ, ತಾಯಂದಿರು ಮತ್ತು ಫಲಾನುಭವಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಅವರು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X