ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಸಾ ಶುಲ್ಕ ಹೆಚ್ಚಳ ಕಂಪೆನಿಗಳಿಗೆ ನುಂಗಲಾರದ ತುತ್ತು

By Mahesh
|
Google Oneindia Kannada News

US visa move to hit Indian IT firms
ಬೆಂಗಳೂರು, ಆ.12: ಅಮೆರಿಕ ಸರ್ಕಾರ ಹೆಚ್ 1 ಬಿ ವೀಸಾ ಅರ್ಜಿ ಶುಲ್ಕಗಳನ್ನು ಏರಿಸಿರುವದರಿಂದ ದೇಶದ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಹೊರಗುತ್ತಿಗೆ ವಹಿವಾಟಿಗೆ ಭಾಗಶಃ ತೊಂದರೆಯಾಗಲಿದೆ ಎಂದು ಐಟಿ ತಜ್ಞರು ಹೇಳುತ್ತಾರೆ.

ಭಾರತೀಯ ಕಂಪೆನಿಗಳ ಆದಾಯದಲ್ಲಿ ವೀಸಾ ಶುಲ್ಕ ಏರಿಕೆಯಿಂದ ಶೇ 0.5 ರಿಂದ ಶೇ 0.75 ರಷ್ಟು ಪ್ರಭಾವ ಆಗಲಿದೆ ಎನ್ನಲಾಗಿದ್ದು ಇದರಿಂದ ಕಂಪೆನಿಗಳು ಅಮೆರಿಕಾದಲ್ಲೇ ಹೆಚ್ಚು ನೌಕರರನ್ನು ನೇಮಿಸಿಕೊಳ್ಳಬೇಕಾಗಲಿದೆ.

ಇನ್ಫೋಸಿಸ್, ಟಿಸಿಎಸ್ ಹಾಗೂ ವಿಪ್ರೋ ಕಂಪೆನಿಗಳು ಅತೀ ಹೆಚ್ಚು ಹೆಚ್ 1 ವೀಸಾಗಳನ್ನು ಬಳಸಿಕೊಳ್ಳುತ್ತಿದ್ದು, ದೇಶದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಈ ವೀಸಾದ ಶೇ 12 ರಷ್ಟು ಪಾಲನ್ನು ಪಡೆದಿವೆ.

ಅಮೆರಿಕಾದ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ 2009 ರಲ್ಲಿ ಅಮೇರಿಕಾದ ಕೆಲಸಗಾರರಲ್ಲಿ ಶೇ 0.06 ರಷ್ಟು ಕೆಲಸಗಾರರು ಮಾತ್ರ ಹೆಚ್ 1 ಬಿ ವೀಸಾ ಪಡೆದಿದ್ದಾರೆ. ಜಾಗತಿಕ ಸಂಪರ್ಕ ಸಂಸ್ಥೆ ಎವರೆಸ್ಟ್ ನ ತಜ್ಞ ಅಮೀತ್ ಸಿಂಗ್ ಪ್ರಕಾರ ಹೊರಗುತ್ತಿಗೆ ವಹಿವಾಟಿಗೆ ಹೆಚ್ಚು ಹಾನಿ ಆಗದಿದ್ದರೂ, ಇದು ಕಂಪೆನಿಗಳ ಆಪರೇಟಿಂಗ್ ಲಾಭದ ಮೇಲೆ ಪರಿಣಾಮ ಬೀರಲಿದೆ.

ಭಾರತೀಯ ಕಂಪೆನಿಗಳು ಹೆಚ್1 ವೀಸಾದ ಬಳಕೆ ಗಣನೀಯವಾಗಿ ಕುಸಿದಿದೆ. ಉದಾಹರಣೆಗೆ 2008 ರಲ್ಲಿ ಇನ್ಫೋಸಿಸ್ 559 ಹೆಚ್ 1 ಬಿ ವೀಸಾಗಳನ್ನು ಪಡೆದಿದ್ದರೆ ಈ ಸಂಖ್ಯೆ 2009 ರಲ್ಲಿ ಕೇವಲ 440ಕ್ಕೆ ಕುಸಿದಿದೆ. 2008 ರಲ್ಲಿ ವಿಪ್ರೋ ಅತೀ ಹೆಚ್ಚು ಹೆಚ್1ಬಿ ವೀಸಾಗಳನ್ನು ಪಡೆದಿದ್ದು 2009 ರಲ್ಲಿ ಈ ಸಂಖ್ಯೆ 2678 ರಿಂದ 1964 ಕ್ಕೆ ಕುಸಿದಿದೆ .

ಈ ವೀಸಾಗಳನ್ನು ಅಮೆರಿಕಾ ಏಪ್ರಿಲ್ 1 ರಿಂದ ಅಕ್ಟೋಬರ್ 31 ರವರೆಗೆ ನೀಡುತ್ತಿದ್ದು, ಮೊದಲ ದಿನವೇ ಅರ್ಜಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ದಾಖಲಾಗಿದೆ. 2007ರಲ್ಲಿ ಅತೀ ಹೆಚ್ಚು ವೀಸಾ ಅರ್ಜಿಗಳನ್ನು ನೀಡಲಾಗಿತ್ತು. ಈ ವರ್ಷ 85,000 ವೀಸಾ ಅರ್ಜಿಗಳಲ್ಲಿ 28,000 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ.

ಇನ್ಫೋಸಿಸ್ ಉತ್ತರ ಅಮೆರಿಕಾದಲ್ಲಿ 12,000 ನೌಕರರನ್ನು ಹೊಂದಿದ್ದು ಇದರಲ್ಲಿ 1300 ಅಮೆರಿಕಾದ ನಾಗರಿಕರಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಕಂಪೆನಿ 1000 ನೌಕರರನ್ನು ಅಲ್ಲಿಂದಲೇ ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ.

ಭಾರತೀಯ ಕಂಪೆನಿಗಳು ಅಮೆರಿಕಾದಲ್ಲಿ ನೇಮಕಾತಿಯನ್ನು ಹೆಚ್ಚಿಸತೊಡಗಿದ್ದು, ಹೊರಗುತ್ತಿಗೆ ಕಂಪೆನಿ ಏಜೀಸ್ ಅಮೆರಿಕಾದಲ್ಲಿ 4500 ನೌಕರರನ್ನು ಹೊಂದಿದ್ದು ಕಳೆದ ಎರಡು- ಮೂರು ವರ್ಷಗಳಲ್ಲಿ ಅಮೆರಿಕಾದ ನೌಕರರ ಸಂಖ್ಯೆ 7 ಪಟ್ಟು ಹೆಚ್ಚಾಗಿದೆ ಎಂದು ಕಂಪೆನಿ ಮುಖ್ಯಸ್ಥ ಅಪರೂಪ್ ಸೇನ್ ಗುಪ್ತಾ ಹೇಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X