ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಸಾ ಶುಲ್ಕ ಹೆಚ್ಚಳಕ್ಕೆ ಅಮೆರಿಕ ಸಂಸದರ ವಿರೋಧ

By Mahesh
|
Google Oneindia Kannada News

US Visa fare hike
ವಾಷಿಂಗ್ಟನ್, ಆ.12: ನೂತನ ಕ್ರಮಗಳಿಗೆ ಸಂಪನ್ಮೂಲ ಸಂಗ್ರಹಿಸಲು ಎಚ್-1ಬಿ ಮತ್ತು ಎಲ್-1 ವೀಸಾ ಶುಲ್ಕಗಳನ್ನು ತೀವ್ರವಾಗಿ ಹೆಚ್ಚಿಸುವ ಪ್ರಮುಖ ಗಡಿ ಭದ್ರತಾ ವಿಧೇಯಕವನ್ನು ಅಮೆರಿಕದ ಪ್ರಮುಖ ಸಂಸದ ಜೆರ್ರಿ ಲೂಯಿಸ್ ಅವರು ಬಲವಾಗಿ ವಿರೋಧಿಸಿದ್ದಾರೆ.

ವೀಸಾ ವೆಚ್ಚಕ್ಕಾಗಿ ವಾರ್ಷಿಕ 250 ಮಿಲಿಯ ಡಾಲರ್‌ಗಳನ್ನು ತೆರಬೇಕಾದ ಸಂಕಷ್ಟಕ್ಕೆ ಗುರಿಯಾಗಲಿರುವ ಭಾರತೀಯ ಐಟಿ ಕಂಪೆನಿಗಳೂ ಈ ವಿಧೇಯಕಕ್ಕೆ ಅಸಮಾಧಾನ ವ್ಯಕ್ತಪಡಿಸಿವೆ. ಇವೆಲ್ಲ ಸಮಸ್ಯೆಗಳು ನಮ್ಮ ವಾರ್ಷಿಕ ವಿನಿಯೋಜನ ಪ್ರಕ್ರಿಯೆಯಲ್ಲಿ ಬಗೆಹರಿಯಬೇಕು.

ಆದರೆ ಈ ವಿಧೇಯಕವು ಈ ಪ್ರಕ್ರಿಯೆಯ ಅಣಕವಾಗಿದೆ ಎಂದು ವಿನಿಯೋಜನ ಕುರಿತು ಸದನ ಸಮಿತಿಯಲ್ಲಿ ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಯಾಗಿರುವ ಲೂಯಿಸ್ ಹೇಳಿದರು. ಪ್ರತಿನಿಧಿ ಸಭೆಯು ಮಂಗಳವಾರ ತುರ್ತು ಗಡಿಭದ್ರತೆ ಪೂರಕ ವಿನಿಯೋಜನೆ ಕಾಯ್ದೆಯನ್ನು ಧ್ವನಿಮತದಿಂದ ಅಂಗೀಕರಿಸಿತ್ತು.

ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲು 650 ಮಿ.ಡಾ.ಗಳನ್ನು ನಿಗದಿಗೊಳಿಸಲಾಗಿದ್ದು, ಈ ಪೈಕಿ 550 ಮಿ.ಡಾ.ಗಳು ಮುಂದಿನ ಐದು ವರ್ಷಗಳ ಅವಧಿಯಲ್ಲಿ ವೀಸಾ ಶುಲ್ಕ ಹೆಚ್ಚಳದಿಂದ ಬರಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X