ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ರೈತರಿಗೆ ಆಫ್ರಿಕಾದಲ್ಲಿ ಭೋಗ್ಯಕ್ಕೆ ಭೂಮಿ

By Mahesh
|
Google Oneindia Kannada News

African nations offering land for free to Indian farmers
ನವದೆಹಲಿ, ಆ.11: ಕೆಲವು ಆಫ್ರಿಕಾದ ದೇಶಗಳು ವಿದೇಶೀ ರೈತರಿಗೆ ಉಚಿತವಾಗಿ 99 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಲು ಮುಂದೆ ಬಂದಿವೆ ಎಂದು ಉದ್ಯಮ ಒಕ್ಕೂಟ ಆಸೋಚಾಮ್ ಹೇಳಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುವ ಆಸೋಚಾಮ್ ಈ ಅವಕಾಶವನ್ನು ದೇಶದ ರೈತರು ಸದುಪಯೋಗ ಪಡಿಸಿಕೊಳ್ಳಲು ಸಂಪರ್ಕ ಕೊಂಡಿಯಾಗಿ ಸಹಾಯ ಮಾಡುವಂತೆ ಕೋರಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆಸೋಚಾಮ್ ಕಾರ್ಯದರ್ಶಿ ಡಿಎಸ್ ರಾವತ್ ಅವರು ಆಫ್ರಿಕಾದ ದೇಶಗಳಲ್ಲಿ ಆಹಾರ ಧಾನ್ಯದ ಕೊರತೆ ಎದುರಾಗಿದ್ದು ಉತ್ಪಾದನೆ ಹೆಚ್ಚಿಸಲು ದೇಶಗಳು ಭೂಮಿಯನ್ನು ಉಚಿತವಾಗಿ 99 ವರ್ಷಗಳ ಅವಧಿಗೆ ರೈತರಿಗೆ ಬೆಳೆ ಬೆಳೆಯಲು ನೀಡುತ್ತಿವೆ ಎಂದರು.

ಭೋಗ್ಯಕ್ಕೆ ಪಡೆದುಕೊಳ್ಳಲಾದ ಭೂಮಿಯಲ್ಲಿ ತಮಗೆ ಇಷ್ಟವಾದ ಯಾವುದೇ ಬೆಳೆ ಬೆಳೆಯಲು ಸ್ವತಂತ್ರರಿದ್ದು ಇದನ್ನು ಅಲ್ಲಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದ್ದು ಅಥವಾ ರಫ್ತು ಮಾಡಲೂ ಅವಕಾಶವಿದೆ ಎಂದು ಹೇಳಿದರು.

ಇದರಿಂದ ದೇಶದ ರೈತರು ಹಾಗೂ ಆಫ್ರಿಕಾದ ಸರ್ಕಾರಕ್ಕೂ ಲಾಭವಿದೆ ಎಂದು ಆಸೋಚಾಮ್ ಹೇಳಿದೆ. 99 ವರ್ಷಗಳ ಗುತ್ತಿಗೆಯಿಂದ ರೈತರ ಮೂರು ತಲೆಮಾರುಗಳು ಲಾಭ ಪಡೆಯಬಹುದಾಗಿದೆ ಎಂದೂ ಹೇಳಲಾಗಿದೆ.

ಸುಡಾನ್ ಹಾಗೂ ಇಥಿಯೋಪಿಯಾ ವಿದೇಶೀ ರೈತರನ್ನು ಸೆಳೆಯಲು ತುದಿಗಾಲಲ್ಲಿ ನಿಂತಿವೆ. ಕೆಲ ಚೀನಾದ ರೈತರು ಈಗಾಗಲೇ ಭೂಮಿಯನ್ನು ಪಡೆದುಕೊಂಡಿದ್ದು ವ್ಯವಸಾಯ ಮಾಡುತ್ತಿದ್ದಾರೆ ಎಂದೂ ಆಸೋಚಾಮ್ ಹೇಳಿದೆ.

ಪಂಜಾಬ್ ನ ಅನೇಕ ರೈತರೂ ಈಗಾಗಲೇ ಆಫಿಕಾಗೆ ವಲಸೆ ಹೋಗಿದ್ದು ಕೃಷಿಯಲ್ಲಿ ತೊಡಗಿದ್ದಾರೆ ಎಂದು ಆಸೋಚಾಮ್ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X