ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುರ್ತು ಸಂಖ್ಯೆ: ಅಮೆರಿಕಕ್ಕೆ 911; ಭಾರತಕ್ಕೆ 2611

By Mahesh
|
Google Oneindia Kannada News

National Emergency Telephone Number 2611
ಮುಂಬೈ, ಆ.10:ಅಮೆರಿಕದಲ್ಲಿ ಯಾವುದೇ ತುರ್ತು ಸಂದರ್ಭ ಒದಗಿದಾಗ ಸಹಾಯಕ್ಕಾಗಿ ಅಲ್ಲಿನ ನಾಗರೀಕರು 911 ಗೆ ಡಯಲ್ ಮಾಡುವಂತೆ, ಭಾರತಕ್ಕೂ ಒಂದು ರಾಷ್ಟ್ರೀಯ ತುರ್ತು ಸೇವಾ ಸಂಖ್ಯೆ ಯ ಅಗತ್ಯವಿದೆ ಎಂದು ಟೆಲಿಕಾಂ ಇಂಜಿನಿಯರ್ ದಿನ್ ಕರ್ ಬೋರ್ಡೆ ಕೇಂದ್ರ ಗೃಹಸಚಿವಾಲಯಕ್ಕೆ ಪ್ರಸ್ತಾಪನೆ ಸಲ್ಲಿಸಿದ್ದಾರೆ. 2611 ಸಂಖ್ಯೆಯನ್ನು ರಾಷ್ಟ್ರೀಯ ತುರ್ತು ಸೇವಾ ಸಂಖ್ಯೆಯಾಗಿ ಘೋಷಿಸುವಂತೆ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ತುರ್ತು ಸೇವಾ ದೂರವಾಣಿ ಸಂಖ್ಯೆ ವ್ಯವಸ್ಥೆ(NETNS) ಇರುವ ಕೇಂದ್ರವನ್ನು ಸ್ಥಾಪಿಸಿ, ತುರ್ತು ಸಹಾಯ ಕೇಳಿ ದೇಶದ ಯಾವುದೇ ಮೂಲೆಯ ಜನ, ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಅವರಿಗೆ ಸ್ಪಂದಿಸುವ ವ್ಯವಸ್ಥೆಯನ್ನು ರೂಪಿಸಲಾಗುವುದು.

ಭಾರತದಲ್ಲೇ ಈಗಾಗಲೇ ಚಾಲ್ತಿಯಲ್ಲಿರುವ ಅನೇಕ ತುರ್ತು ಸಹಾಯವಾಣಿಗಳನ್ನು ಒಗ್ಗೂಡಿಸಿ, 2611 ಸಂಖ್ಯೆ ಬದಲಾಯಿಸಲಾಗುವುದು. ಹಲವು ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟ. ಒಂದೇ ಒಂದು ವಿಶಿಷ್ಟ ಸಂಖ್ಯೆ ಇದ್ದರೆ ನಾಗರಿಕರಿಗೆ ಅನುಕೂಲ ಎಂದು ಬೋರ್ಡೆ ಹೇಳುತ್ತಾರೆ.

ಒಂದು ಸಂಖ್ಯೆ, ಒಂದು ದೇಶ ಒನ್ ಇಂಡಿಯ:
ಈಗ ಸ್ಥಳೀಯ ಸಹಾಯವಾಣಿಗಳಾದ ಪೊಲೀಸ್ 100, ಅಗ್ನಿಶಾಮಕ ದಳ 101, ಅಂಬ್ಯುಲನ್ಸ್103 ಮತ್ತು ಮಕ್ಕಳು, ಮಹಿಳೆ ಹಾಗೂ ಹಿರಿಯ ನಾಗರಿಕರ ರಕ್ಷಣೆಗಾಗಿರುವ 108 ಮುಂತಾದವುಗಳನ್ನು ಒಗ್ಗೂಡಿಸಿ 2611 ಸಂಖ್ಯೆಯನ್ನು ಮಾತ್ರ ಬಳಸುವಂತೆ ಮಾಡಬೇಕಿದೆ.

ಕೇವಲ ನಾಗರಿಕರ ಸೌಲಭ್ಯಕ್ಕಾಗಿ ಅಲ್ಲದೆ, ಉಗ್ರರ ದಾಳಿ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ(NSG) ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಈ ಸಂಖ್ಯೆ ಅನುಕೂಲಕರವಾಗಿ ಪರಿಣಮಿಸಲಿದೆ.

ಕೇಂದ್ರ ಗೃಹ ಸಚಿವಾಲಯದ ತರಬೇತಿ ಹೊಂದಿದ ಅಧಿಕಾರಿಗಳು ಮಾತ್ರ ಈ ಸಂಖ್ಯೆಗೆ ಒಳ ಬರುವ ಹಾಗೂ ಹೊರ ಹೋಗುವ ಕರೆಗಳ ಮಾಹಿತಿಯನ್ನು ಪಡೆಯುವುದರಿಂದ ಇಡೀ ವ್ಯವಸ್ಥೆ ಗೃಹ ಕಚೇರಿಯ ಅಧೀನದಲ್ಲಿದ್ದು, ಸುರಕ್ಷಿತವಾಗಿರುತ್ತದೆ.

ಡಯಲ್ 2611 ಸಂಖ್ಯೆಯನ್ನು GPS ವ್ಯವಸ್ಥೆಗೆ ಹೋಲಿಸಿದ ಬೋರ್ಡೆ, ಮಾನವ, ಯಂತ್ರ ಹಾಗೂ ಅತ್ಯಾಧುನಿಕ ಮುಂದಿನ ಪೀಳಿಗೆಯ ಟೆಲಿಕಾಂ ಸಾಧನಗಳ ಸಮೀಕೃತ ವ್ಯವಸ್ಥೆ ಎನ್ನುತ್ತಾರೆ.GIS, ಉಪಗ್ರಹ, ಮೊಬೈಲ್, ಐಟಿ ಹಾಗೂ ಇನ್ನಿತರ ಟೆಲಿಕಾಂ ಜಾಲಗಳ ಸಂಪರ್ಕದ ಸಹಾಯದಿಂದ ಸ್ಥಳೀಯ ಆಧಾರಿತ ಸೇವೆಯನ್ನು ತುರ್ತಾಗಿ ನೀಡಬಹುದಾಗಿದೆ ಎಂದಿದ್ದಾರೆ.

ಇದಲ್ಲದೆ, ಅಮೆರಿಕದ 911 ಗಿಂತ ಅಥವಾ ಇನ್ಯಾವುದೇ ತುರ್ತು ಸೇವಾ ಸಂಖ್ಯೆಗಿಂತ ಭಾರತದ 2611 ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲದು ಎನ್ನುತ್ತಾರೆ ಬೋರ್ಡೆ. ವಿವಿಧ ಭಾಷೆ, ಉನ್ನತ ತಂತ್ರಜ್ಞಾನ, ಹೇಳಿ ಮಾಡಿಸಿದಂತಹ ವಿನ್ಯಾಸ ಇತ್ಯಾದಿಗಳ ಸಹಾಯದಿಂದ ಎಲ್ಲವೂ ಸಾಧ್ಯ ಎಂಬುದು ದಿನ್ ಕರ್ ಬೋರ್ಡೆ ನಂಬಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X