ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ಯಾಕ್ಸ್ ಕಟ್ಬಿಡಿ ಸುಮ್ನೆ ಪ್ರಾಬ್ಲಂ ಏಕೆ...

By Mrutyunjaya Kalmat
|
Google Oneindia Kannada News

BBMP
ಬೆಂಗಳೂರು, ಆ. 10 : ರಾಜಧಾನಿಯಲ್ಲಿರುವ ಎಲ್ಲ ಆಸ್ತಿದಾರರಿಂದಲೂ ತೆರಿಗೆ ಸಂಗ್ರಹಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿರುವ ಬಿಬಿಎಂಪಿ ಆಗಸ್ಟ್ 16 ರಿಂದ ವಿಶೇಷ ಅಭಿಯಾನ ಆರಂಭಿಸಲಿದೆ. ಸುಮಾರು 1000 ಕ್ಕೂ ಹೆಚ್ಚು ಸಿಬ್ಬಂದಿಗಳು ನಗರದ ಪ್ರತಿಯೊಂದು ರಸ್ತೆಗಳಿಗೂ ತೆರಳಿ ತೆರಿಗೆ ವಂಚಿಸಿದವರನ್ನು ಪತ್ತೆ ಹಚ್ಚಲಿದ್ದಾರೆ.

ನಗರದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಆಸ್ತಿಗಳಿವೆ ಎಂದು ಅಂದಾಜು ಮಾಡಲಾಗಿದೆ. ಆದರೆ, ಈವರೆಗೆ 9 ಲಕ್ಷ ಆಸ್ತಿದಾರರು ಮಾತ್ರ ತೆರಿಗೆ ಕಟ್ಟಿದ್ದಾರೆ. ಉಳಿದ 6 ಲಕ್ಷ ಮಂದಿ ತೆರಿಗೆ ಕಟ್ಟಿಲ್ಲ. ಇದರಲ್ಲಿ ವಾಸದ ಮನೆಗಳು, ಸಾಕಷ್ಟು ಕೈಗಾರಿಕೆಗಳು ಸಹ ಸೇರಿವೆ ಎಂಬುದು ಗಮನಾರ್ಹ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕೃತ ಕೈಗಾರಿಕಾ ವಲಯಗಳಲ್ಲಿ ಶೇ.40ರಷ್ಟು ಉದ್ದಿಮೆದಾರರು ಈವರೆಗೆ ತೆರಿಗೆ ಪಾವತಿಸಿಲ್ಲ. ಹಾಗಾಗಿ ದೊಡ್ಡ ಮೊತ್ತದ ಆದಾಯ ಪಾಲಿಕೆಯ ಕೈತಪ್ಪಿದೆ.

ನಗರದಲ್ಲಿ ಸೌಲಭ್ಯ ಪಡೆಯುವ ಪ್ರತಿಯೊಬ್ಬ ಆಸ್ತಿದಾರರು ತೆರಿಗೆ ಪಾವತಿಸಬೇಕು. ಸುಮಾರು ಆರು ಲಕ್ಷ ತೆರಿಗೆದಾರರನ್ನು ಪತ್ತೆ ಹಚ್ಚುವ ಸಲುವಾಗಿ ಮೂರು ತಿಂಗಳ ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ತೆರಿಗೆ ವಂಚನೆಗೆ ಅವಕಾಶ ನೀಡುವುದಿಲ್ಲ. ತೆರಿಗೆ ವಂಚಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X