ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇನ್ಫೋಸಿಸ್ ಕಳ್ಳ ಗುಜರಿ ಅಂಗಡಿ
ಇನ್ಫೋಸಿಸ್ ಕಳ್ಳ ಗುಜರಿ ಅಂಗಡಿ ಎಂದು ಟೀಕಿಸಿದವರು ಅಮೆರಿಕದ ಡೆಮಾಕ್ರಟಿಕ್ ಕಂಪನಿಯ ಸೆನೆಟರ್ ಚಾರ್ಲ್ಸ್ ಶುಮರ್. ಬಾರ್ಡರ್ ಸೆಕ್ಯೂರಿಟಿ ಬಿಲ್ ಮೇಲಿನ ಚರ್ಚೆಯ ವೇಳೆ ಶುಮರ್ ಇನ್ಫೋಸಿಸ್ ವಿರುದ್ಧ ದಾಳಿ ನಡೆಸಿದ್ದಾರೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಇನ್ಫೋಸಿಸ್ ನ ವಕ್ತಾರರು, ಅಮೆರಿಕದ ಸೆನೆಟರ್ ಹೇಳಿಕೆ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಅಮೆರಿಕದ ಟೀಕೆಗೆ ಪ್ರಮುಖ ಕಾರಣ ನಿರುದ್ಯೋಗ ಎಂದು ಹೇಳಲಾಗಿದೆ. ಭಾರತದ ಐಟಿ ಕಂಪನಿಗಳ ಹೊರಗುತ್ತಿಗೆ ವಹಿವಾಟಿನಿಂದ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಹೀಗಾಗಿ ಅಮೆರಿಕ ಸೆನೆಟ್ 2752 ಕೋಟಿ ರುಪಾಯಿಗಳ (60ಕೋಟಿ ಡಾಲರ್) ಬಾರ್ಡರ್ ಸೆಕ್ಯೂರಿಟಿ ಬಿಲ್ ಗೆ ಒಪ್ಪಿಗೆ ನೀಡಿದೆ. ಇದರಿಂದ ಎಚ್-1 ಮತ್ತು ಎಲ್-1 ವೀಸಾ ಅರ್ಜಿಗಳ ಶುಲ್ಕದಲ್ಲಿ ಗಣನೀಯ ಹೆಚ್ಚಳವಾಗಲಿದೆ. ಕನಿಷ್ಟ 2,000 ಡಾಲರ್ ವರೆಗೂ ಶುಲ್ಕ ಹೆಚ್ಚಾಗಲಿದೆ. ವಿಶೇಷವೆಂದರೆ ಭಾರತದ ಐಟಿ ಉದ್ಯೋಗಿಗಳು ಈ ಅರ್ಜಿಗಳನ್ನು ಪಡೆಯುತ್ತಾರೆ.
Comments
ಇನ್ಫೋಸಿಸ್ ಹೊರಗುತ್ತಿಗೆ ಸಾಫ್ಟ್ ವೇರ್ ಅಮೆರಿಕ ಉದ್ಯೋಗ ಎನ್ ಆರ್ ನಾರಾಯಣಮೂರ್ತಿ infosys bpo software services america jobs nr narayana murthy
Story first published: Monday, August 9, 2010, 11:34 [IST]