ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣಿಗಳ ಆಯ್ಕೆ ಚೇಂಜ್ ಆಗ್ಬೇಕು : ನೀರಜ್

By Mrutyunjaya Kalmat
|
Google Oneindia Kannada News

Neeraj Patil
ಬೆಂಗಳೂರು, ಆ. 8 : ರಾಜಕಾರಣಿಗಳ ಆಯ್ಕೆಯಲ್ಲಿ ಬದಲಾವಣೆಯಾಗಬೇಕು. ಚುನಾವಣಾ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ರಾಜಕೀಯ ಪಕ್ಷಗಳ ನೀತಿ ನಿಯಮಗಳಲ್ಲಿ ಬದಲಾವಣೆ ತರಬೇಕೆಂದು ಲಂಡನ್ ನ ಲ್ಯಾಂಬೆತ್ ಮೇಯರ್ ಕನ್ನಡಿಗ ಡಾ ನೀರಜ್ ಪಾಟೀಲ್ ಅಬಿಪ್ರಾಯಪಟ್ಟಿದ್ದಾರೆ.

ಬ್ರಿಟನ್ ನ ಲ್ಯಾಂಬೆತ್ ನಲ್ಲಿ ಲೇಬರ್ ಪಾರ್ಟಿಯಿಂದ ಮೇಯರ್ ಆಗಿ ಆಯ್ಕೆಯಾಗಿರುವ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಅವರನ್ನು ಅಮೃತಾ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್ ಮೆಂಟ್ ಕಾಲೇಜ್ ವತಿಯಿಂದ ನಗರದಲ್ಲಿ ಸನ್ಮಾನಿಸಲಾಯಿತು. ಪ್ರತಿ ದೇಶದಲ್ಲಿ ಒಳ್ಳೇ ಮತ್ತು ಕೆಟ್ಟ ರಾಜಕಾರಣಿಗಳು ಇದ್ದೇ ಇರುತ್ತಾರೆ. ಪಕ್ಷ ಪದ್ಧತಿ ರಾಜಕೀಯ ವ್ಯವಸ್ಥೆಯನ್ನು ಕುಲಗೆಡಿಸಿದೆ. ಇಲ್ಲಿನ ವ್ಯವಸ್ಥೆಯನ್ನೂ ಹೇಗೆ ವರ್ಣಿಸಬೇಕು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಒಬ್ಬ ವ್ಯಕ್ತಿ ದೇಶದ ಬಗ್ಗೆ ಚಿಂತನೆ ನಡೆಸಬೇಕು. ಆಗ ಆತ ಮತ್ತು ಅವರ ಪಕ್ಷ ಜಯಶಾಲಿಯಾಗುತ್ತದೆ. ನಮ್ಮ ಸಂದೇಶ, ಸಂದೇಶ ನೀಡುವ ವ್ಯಕ್ತಿ. ಅದನ್ನು ತಲುಪಿಸಬೇಕಾದ ಮಾಧ್ಯಮ ಚೆನ್ನಾಗಿರಬೇಕು. ಇವು ಬ್ರಿಟನ್ ಮತ್ತು ಅಮೆರಿಕದಲ್ಲಿವೆ. ಹಾಗಾಗಿ ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿ ಜನಪ್ರತಿನಿಧಿಯಾಗುತ್ತಾರೆ.

ನಾನು ಮತ್ತು ನನ್ನ ಬಗ್ಗೆ ನನ್ನಲ್ಲಿದ್ದ ವಿಶ್ವಾಸ, ಪ್ರಾಮಾಣಿಕತೆಯಿಂದ ಮೇಯರ್ ಆಗಿದ್ದೇನೆ. ಸ್ಪರ್ಧಿಸುವ ಮೊದಲು ಅಲ್ಲಿನ ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ನಿರಂತರ ಅಧ್ಯಯನ ಮಾಡಿದ್ದೇನೆ ಎಂದು ನೀರಜ್ ಪಾಟೀಲ್ ತಮ್ಮ ವಿಜಯದ ಗುಟ್ಟನ್ನು ಬಿಡಿಸಿಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X