ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್ ಬಾಗ್ ನಲ್ಲಿ ಕಣ್ಮನ ತಣಿಸುವ ಹೂ ರಾಶಿ

By Rajendra
|
Google Oneindia Kannada News

Lalbagh flower show begins
ಬೆಂಗಳೂರು, ಆ.7: ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘ ಲಾಲ್‌ಬಾಗ್‌ನಲ್ಲಿ ಆಗಸ್ಟ್ 6 ರಿಂದ 15 ರವರೆಗೆ ಏರ್ಪಡಿಸಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವ ಉಮೇಶ್ ವಿ. ಕತ್ತಿ ಅವರು ಉದ್ಘಾಟಿಸಿದರು. ಬಳಿಕ ಗಾಜಿನ ಮನೆಯಲ್ಲಿ ಎರಡೂವರೆ ಲಕ್ಷ ವರ್ಣಮಯ ಗುಲಾಬಿ ಹೂಗಳಿಂದ ನಿರ್ಮಾಣಗೊಂಡಿರುವ ಇಂಡಿಯಾ ಗೇಟ್ ಮಧ್ಯೆ ಇದ್ದ ಅಮರಜ್ಯೋತಿಗೆ ತಮ್ಮ ನಮನ ಸಲ್ಲಿಸಿದರು.

ಫಲಪುಷ್ಪ ಪ್ರದರ್ಶನದ ಉದ್ಘಾಟನೆಯ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ ನಡೆದ ಫಲಪುಷ್ಪ ಪ್ರದರ್ಶನದಿಂದ ರು.80 ಲಕ್ಷ ಆದಾಯಗಳಿಸಲಾಗಿತ್ತು. ಈ ವರ್ಷ ಆದಾಯ ಮತ್ತಷ್ಟು ಹೆಚ್ಚುವುದೆಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದರು.

ಬೆಂಗಳೂರು ಕೆಂಪು ತೋಟದಲ್ಲಿ ಸುಂದರಿಯರು ; ಗ್ಯಾಲರಿ

ಲಾಲ್‌ಬಾಗ್‌ಗೆ ಭೇಟಿ ನೀಡುವ ವಾಯುವಿಹಾರಗಳಿಗೆ ಹಾಗೂ ನೋಡುಗರಿಗೆ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಕ್ ಗಾರ್ಡನ್, ಫುಡ್ ಕೊರ್ಟ್ ಮತ್ತು ಸಂಗೀತ ಕಾರಂಜಿಗಳನ್ನು ಸ್ಥಾಪಿಸಲು ಸಾರ್ವಜನಿಕರ ವಿರೋಧವಿದೆ. ಶೀಘ್ರವೇ ಸಾರ್ವಜನಿಕರ ಸಭೆಯನ್ನು ಕರೆದು ಈ ಬಗ್ಗೆ ಚರ್ಚಿಸಲಾಗುವುದೆಂದು ಅವರು ತಿಳಿಸಿದರು.

ರಾಜ್ಯಾದ್ಯಂತ 16 ಸಾವಿರ ಹೆಕ್ಟೆರ್‌ನಲ್ಲಿ ತೋಟಗಾರಿಕೆ ಕ್ಷೇತ್ರಗಳಿವೆ. ಖಾಸಗಿ ಸಹಭಾಗಿತ್ವದಲ್ಲಿ ಕೆಲವು ಕ್ಷೇತ್ರಗಳ ನಿರ್ವಹಣೆ ಮಾಡಲು ಈಗಾಗಲೇ ಟೆಂಡರ್‌ಗಳನ್ನು ಕರೆಯಲಾಗಿದೆ. ಇದರಿಂದಾಗಿ ರೈತರಿಗೆ ಉತ್ತಮ ಹಾಗೂ ಹೊಸ ತಳಿಗಳನ್ನು ಒದಗಿಸಲು ಅನುವಾಗುವುದೆಂದರು.

ರಾಕ್ ಗಾರ್ಡನ್ ತಪ್ಪು ತಿಳುವಳಿಕೆ ಬೇಡ : ಮುಖ್ಯ ಆತಿಥಿಯಾಗಿ ಭಾಗವಹಿಸಿದ್ದ ಸಾರಿಗೆ ಸಚಿವ ಆರ್ ಅಶೋಕ್ ಅವರು ಮಾತನಾಡಿ, ಲಾಲ್‌ಬಾಗ್ ಒಂದು ಬಟಾನಿಕಲ್ ಗಾರ್ಡನ್. ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಇಚ್ಛೆ ಸರ್ಕಾರಕ್ಕಿಲ್ಲ. ಇಲ್ಲಿ ಬರಲಿರುವ ರಾಕ್ ಗಾರ್ಡನ್ ಬಗ್ಗೆ ತಪ್ಪು ತಿಳುವಳಿಕೆ ಬೇಡ.

ಯಾವುದೇ ಮರ ಗಿಡಗಳನ್ನು ನಾಶಗೊಳಿಸದೆ ಇರುವ ಕಲ್ಲುಗಳ ನಡುವೆಯ ಮತ್ತಷ್ಟು ಮರಗಿಡಗಳನ್ನು ನೆಡಲಾಗುವುದು. ಧ್ವನಿ-ಬೆಳಕು ಕಾರ್ಯಕ್ರಮಗಳಿಂದ ಪಕ್ಷಿಗಳಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಯಾವುದಕ್ಕೂ ಸಾರ್ವಜನಿಕರ ಅಭಿಪ್ರಾಯದಂತೆ ಮುಂದಿನ ಹೆಜ್ಜೆ ಇಡಲಾಗುವುದೆಂದು ಅವರು ತಿಳಿಸಿದರು.

ಸಸ್ಯಕಾಶಿಯಲ್ಲಿ ಹೂ ರಾಶಿ : ಗಾಜಿನ ಮನೆಯಲ್ಲಿನ ಇಂಡಿಯಾ ಗೇಟನ್ನು 2 ಲಕ್ಷಕ್ಕೂ ಹೆಚ್ಚು ಕೆಂಪು, ಕಿತ್ತಲೆ, ಬಿಳಿ ಹಳದಿ ಗುಲಾಬಿ ಹೂಗಳಿಂದ ಶೃಂಗರಿಸಲಾಗಿದೆ. ಇದರ ಸುತ್ತಲೂ ತೈವಾನ್ ದೇಶದ ಹಲವು ವರ್ಣದ ಅರ್ಕಿಡ್ಸ್, ಅಂಥೋರಿಯಂ, ವಿಂಕಾ, ಬೋಗನ್ವಿಲ್ಲಾ, ಇಂಪೇಷನ್ಸ್, ಹೈಬ್ರಿಡ್ ಮೆರಿಗೊಲ್ಡ್, ಕಾಕ್ಸ್‌ಕೂಂಬ್, ಡಾಲಿಯ, ಸೆಲೆಷಿಯ, ಜ್ಹಿನಿಯ, ಸಾಲ್ವಿಯ, ಗ್ಲಾಡಿಯೋಲ, ಸ್ವೀಟ್ ಪಿ, ಅಗ್ನೋಲಿಯ, ಕಾರ್ನ್ ಫ್ಲವರ್, ಟ್ಯೂಬ್ ರೊಸ್ ಸೇರಿದಂತೆ ಹಲವು ಬಣ್ಣ-ಬಣ್ಣದ ಹೂಗಳ ವಿನ್ಯಾಸದ ಜೋಡಣೆಯ ಮತ್ತು ವೈವಿಧ್ಯಮಯ ವಾರ್ಷಿಕ ಅಲಂಕಾರಿಕ ಹೂಗಿಡಗಳನ್ನು ಪ್ರದರ್ಶಿಸಲಾಗಿದೆ.

ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X