ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚ್ಛೇದನ : ಚೇತನ್ ಗೆ ಟಾಟಾ ಹೇಳಿದ ಜ್ವಾಲಾ

By Mrutyunjaya Kalmat
|
Google Oneindia Kannada News

Chetan Anand-Jwala Gutta
ಹೈದರಾಬಾದ್, ಆ. 6 : ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರೊಂದಿಗಿನ ಪ್ರೇಮ ಪ್ರಕರಣ ಬಹಿರಂಗಗೊಂಡ ಬೆನ್ನಲ್ಲೇ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಪತಿ ಬ್ಯಾಡ್ಮಿಂಟನ್ ಪಟು 13 ನೇ ಶ್ರೇಯಾಂಕದ ಚೇತನ್ ಆನಂದ ಅವರೊಂದಿಗಿನ ಸಂಬಂಧ ಕಡಿದುಕೊಳ್ಳಲು ಗುಟ್ಟಾ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಹೌದು ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ನಿಜ. ಆದರೆ, ನಾನು ವಿವಾಹ ಬಂಧನದಿಂದ ಬೇರ್ಪಡಲು ಇತ್ತೀಚೆಗೆ ಹಬ್ಬಿರುವ ಗಾಳಿ ಸುದ್ದಿಯಿಂದಲ್ಲ. ಕ್ರಿಕೆಟಿಗ ಅಜರುದ್ದೀನ್ ಮತ್ತು ತಮ್ಮ ಮಧ್ಯೆ ಯಾವುದೇ ಸಂಬಂಧವಿಲ್ಲ. ನಾವಿಬ್ಬರು ಸ್ನೇಹಿತರು ಮಾತ್ರ ಎಂದು ಗುಟ್ಟಾ ಮೌನ ಮುರಿದಿದ್ದಾಳೆ.

ಅಜರುದ್ದೀನ್ ಮತ್ತು ನನ್ನ ಮಧ್ಯೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಎಲ್ಲ ಸುದ್ದಿಗಳು ಶುದ್ಧ ಸುಳ್ಳು. ಆ ಬಗ್ಗೆ ನಾನು ಏನನ್ನೂ ಹೇಳಲಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ಜೊತೆಗೆ ನನ್ನ ಜೀವನದಲ್ಲಿ ಅಲ್ಲೋಕಲ್ಲೋಲ ಉಂಟಾಗಿದೆ ಎಂದು ಜ್ವಾಲಾ ಹೇಳಿದ್ದಾರೆ. ಬ್ಯಾಡ್ಮಿಂಟನ್ ಪಟು ಚೇತನ್ ಆನಂದ ಅವರಿಗೆ ವಿಚ್ಛೇದನ ನೀಡುವ ಕಾರಣವನ್ನು ನಂತರ ಮಾಧ್ಯಮಗಳಿಗೆ ವಿವರಿಸುವುದಾಗಿ ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್ ನ ಕಾಂಗ್ರೆಸ್ ಸಂಸದ ಆಗಿರುವ ಮೊಹಮ್ಮದ್ ಅಜರುದ್ದೀನ್ ಮತ್ತು ಬಾಲಿವುಡ್ ನಟಿ ಹಾಗೂ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಸಂಗೀತಾ ಬಿಜಲಾನಿ ಅವರ 14 ವರ್ಷಗಳ ವೈವಾಹಿಕ ಜೀವನ ಅಂತ್ಯ ಕಾಣುವ ಸಾಧ್ಯತೆಗಳಿವೆ ಎಂದು ಮಿಡ್ ವೇ ವರದಿ ಮಾಡಿತ್ತು. 47ರ ಹರೆಯದ ಅಜರುದ್ದೀನ್ ಅವರು ಶೀಘ್ರದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಸಿದ್ದತೆಯಲ್ಲಿದ್ದಾರೆ.

26 ವರ್ಷದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಅವರೊಂದಿಗೆ ಅಜರುದ್ಧೀನ್ ಡೇಟಿಂಗ್ ನಡೆಸುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಅಜರುದ್ದೀನ್ ಹೈದರಾಬಾದ್ ನಲ್ಲಿದ್ದರೆ, ಪುಲ್ಲೇಲು ಗೋಪಿಚಂದ್ ಅವರ ತರಬೇತಿ ಬಳಿ ಠಿಕಾಣಿ ಹೂಡುತ್ತಾರೆ ಎಂಬ ಗುಲ್ಲು ದೇಶದ ತುಂಬೆಲ್ಲಾ ಹರಿದಾಡಿತ್ತು. ತರಬೇತಿ ಕೇಂದ್ರದಲ್ಲಿ ಜ್ವಾಲಾ ಗುಟ್ಟಾ ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X