ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಗಣಿಗಾರಿಕೆ : ಸರಕಾರಕ್ಕೆ ಲೋಕಾಯುಕ್ತರ ಪತ್ರ

By Mrutyunjaya Kalmat
|
Google Oneindia Kannada News

Santosh Hegde
ಬೆಂಗಳೂರು, ಆ. 5 : ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಟೊಂಕ ಕಟ್ಟಿ ನಿಂತಿರುವ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ರಾಜ್ಯದಿಂದ ಆಂಧ್ರದ ಬಂದರುಗಳ ಮೂಲಕ ಅಕ್ರಮವಾಗಿ ರಫ್ತಾಗಿರುವ ಅದಿರು ಬಗ್ಗೆ ಮಾಹಿತಿ ಸಂಗ್ರಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕರ್ನಾಟಕದಿಂದ ನೆರೆಯ ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಕೃಷ್ಣಪಟ್ಟಣ ಸೇರಿದಂತೆ ವಿವಿಧ ಬಂದರುಗಳಿಂದ ರಫ್ತಾಗಿರುವ ಅದಿರಿನ ಬಗ್ಗೆ ಮಾಹಿತಿ ಪಡೆಯಲು ಕೋರಿ ಲೋಕಾಯುಕ್ತ ಸಂತೋಷ ಹೆಗ್ಡೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯದಿಂದ ಕೋಟ್ಯಂತರ ರುಪಾಯಿ ಮೌಲ್ಯದ ಅದಿರು ನೆರೆ ರಾಜ್ಯದ ಬಂದರುಗಳಿಂದ ರಫ್ತಾಗುತ್ತದೆ. ಈ ಬಗ್ಗೆ ಆಂಧ್ರದಿಂದ ಮಾಹಿತಿ ಪಡೆಯುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದೆ.

ಆದರೆ, ಈವರೆಗೊ ಉತ್ತರ ಬಂದಿಲ್ಲ. ಸರಕಾರದಿಂದ ಉತ್ತರ ಬರಲಿ, ಬರದೇ ಇರಲಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗುವುದು ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು. ಅಕ್ರಮ ಗಣಿಗಾರಿಕೆಯ ಎರಡನೇ ವರದಿ ಸಲ್ಲಿಸಲು ಸಿದ್ಧತೆ ನಡೆದಿದೆ. ಅಕ್ರಮ ಗಣಿಗಾರಿಕೆಯನ್ನು ಸರಕಾರ ಲೋಕಾಯುಕ್ತ ಇಲಾಖೆಗೆ ಒಪ್ಪಿಸಿದ್ದರಿಂದ ಸುಮ್ಮನಿದ್ದೇನೆ. ಈ ಅಕ್ರಮದಲ್ಲಿ ಗಣಿ ಮಾಲೀಕರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಎರಡನೇ ವರದಿ ಬೆಳಕು ಚೆಲ್ಲಲಿದೆ ಎಂದು ಹೆಗ್ಡೆ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X