ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಜೊತೆ ಕಾರ್ಪ್ ಬ್ಯಾಂಕ್ ಒಪ್ಪಂದ

By Mahesh
|
Google Oneindia Kannada News

Corporation Bank signs MoU with UIDAI
ಬೆಂಗಳೂರು, ಆ,5: ಮಂಗಳೂರು ಮೂಲದ ಕಾರ್ಪೊರೇಷನ್ ಬ್ಯಾಂಕ್ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(UIDAI)ದೊಂದಿಗೆ ಒಡಂಬಡಿಕೆ(MoU)ಗೆ ಸಹಿ ಹಾಕಿರುವುದಾಗಿ ತಿಳಿಸಿದೆ. ಈ ಒಪ್ಪಂದದ ಪ್ರಕಾರ ಪ್ರಾಧಿಕಾರ ವಿತರಿಸಲಿರುವ 'ಆಧಾರ್' ಕಾರ್ಡುಗಳಿಗೆ ಬ್ಯಾಂಕು ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಲಿದೆ.

ಪ್ರಾಧಿಕಾರದ ನಿಯಮಾವಳಿಗಳ ಪ್ರಕಾರ 16 ಅಂಕಿಗಳ ವಿಶಿಷ್ಟ ಗುರುತು ಚೀಟಿಯನ್ನು ನೀಡಲು ಬ್ಯಾಂಕು ನಾಗರಿಕರನ್ನು ನೋಂದಾಯಿಸಲಿದ್ದು ಅವರ ಬಯೋಮೆಟ್ರಿಕ್ ಹಾಗೂ ಡೆಮೊಗ್ರಾಫಿಕ್ ಗುರುತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಕಾರ್ಪೊರೇಷನ್ ಬ್ಯಾಂಕ್ ಗೆ ನೀಡಲಾಗಿದೆ.

ಬ್ಯಾಂಕು, ಬ್ಯಾಂಕಿಂಗ್ ಸೇವೆಯನ್ನು ದೇಶಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಪೋರೇಷನ್ ಬ್ಯಾಂಕ್ ಒದಗಿಸುತ್ತಿದೆ. ಈ ಮೊದಲು UIDAIಗೆ ರಿಜಿಸ್ಟ್ರಾರ್ ಆಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಆಯ್ಕೆಯಾಗಿತ್ತು. ಆಧಾರ್ ಎಂಬ ಈ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮುಖ್ಯಸ್ಥರಾಗಿ ನಂದನ್ ನಿಲೇಕಣಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X