ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರಗುತ್ತಿಗೆ ತಡೆದಿದ್ದರಿಂದ ಅಮೆರಿಕ ಬಚಾವ್

By Mrutyunjaya Kalmat
|
Google Oneindia Kannada News

Barack Obama
ವಾಷಿಂಗ್ ಟನ್, ಆ. 4 : ಭಾರತ ಮತ್ತು ಚೀನಾಕ್ಕೆ ಅಮೆರಿಕದ ಹೊಸ ಉದ್ಯಮ ಮತ್ತು ಹೊರಗುತ್ತಿಗೆ ಉದ್ಯೋಗಗಳು ಹೆಚ್ಚಿನ ಸಂಖ್ಯೆಯಲ್ಲಿ ವರ್ಗಾವಣೆಯಾಗದಂತೆ ನೋಡಿಕೊಂಡಿರುವುದರಿಂದ ಅಮೆರಿಕದ ಆರ್ಥಿಕತೆ ಮತ್ತೆ ಹಳಿಗೆ ಬರತೊಡಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಅಟ್ಲಾಂಟಾದದಲ್ಲಿ ಡೆಮಾಕ್ರಟಿಕ್ ಪಕ್ಷದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 80ಲಕ್ಷಕ್ಕೂ ಅಧಿಕ ಉದ್ಯೋಗಗಳು ಆರ್ಥಿಕ ಹಿಂಜರಿತದ ಪರಿಣಾಮ ನಷ್ಟವಾಗಿತ್ತು ಎಂದರು. ಅತ್ಯಂತ ಕಠಿಣ ಪರಿಶ್ರಮ ಮತ್ತು ಜವಾಬ್ದಾರಿಯಿಂದ ಹೊಸ ಆರ್ಥಿಕ ನೀತಿಯನ್ನು ರೂಪಿಸಲಾಗಿದೆ.

ನಮ್ಮ ಮಧ್ಯಮವರ್ಗದ ಜನರಿಗೆ ಹೆಚ್ಚಿನ ಸುರಕ್ಷಿತೆ, ಉದ್ಯೋಗ ಭದ್ರತೆಯನ್ನು ನೀಡಬೇಕಾಗಿದೆ. ಅಮೆರಿಕ ದೂರದೃಷ್ಟಿಯಿಂದ ಮತ್ತಷ್ಟು ಸ್ಪರ್ಧಾತ್ಮಕತೆಯನ್ನು ರೂಡಿಸಿಕೊಳ್ಳಬೇಕು. ಚೀನಾ ಮತ್ತು ಭಾರತದ ಪಾಲಾಗುತ್ತಿರುವ ಉದ್ದಿಮೆ ಹಾಗೂ ಉದ್ಯೋಗಗಳನ್ನು ತಡೆಯಬೇಕು. ನಮ್ಮ ಸರಕಾರ ಬಂದ ನಂತರ ಕೈಗೊಂಡ ಕಾರ್ಯಕ್ರಮಗಳು ಯಸಸ್ವಿಯಾಗಿದ್ದು, ಅಮೆರಿಕ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯವಾಯಿತು ಎಂದು ಒಬಾಮಾ ಪ್ರಶಂಸಿಸಿಕೊಂಡಿದ್ದಾರೆ.

2009ರ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಡಿದ ಅಧ್ಯಕ್ಷೀಯ ಭಾಷಣದಲ್ಲಿ ಒಬಾಮಾ ಪ್ರತಿಪಕ್ಷ ರಿಪಬ್ಲಿಕನ್ನರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಸುಮಾರು ಒಂದು ದಶಕಗಳ ಕಾಲ ಅಮೆರಿಕದ ಆರ್ಥಿಕ ನೀತಿಯು ಅಸಮರ್ಪಕವಾಗಿದ್ದರಿಂದ ಆದಾಯ ಕುಸಿತ ಕಂಡಿದೆ. ಆರ್ಥಿಕ ಕೊರತೆ ತೀವ್ರವಾಗಿದೆ ಎಂದು ಟೀಕಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X