ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪೆನಿಗಳ ನೇಮಕಾತಿಯಲ್ಲಿ ಶೇ.30 ಹೆಚ್ಚಳ

By Mahesh
|
Google Oneindia Kannada News

Indian cos' hiring activity to rise 30pc this year: Kelly
ಬೆಂಗಳೂರು, ಆ.4: ಈ ವರ್ಷ ದೇಶದ ಕಂಪೆನಿಗಳ ನೇಮಕಾತಿಯಲ್ಲಿ ಶೇ 30 ರಷ್ಟು ಹೆಚ್ಚಳ ಆಗಲಿದೆ ಎಂದು ನೌಕರರ ಸಂಪರ್ಕ ಸೇವೆ ಒದಗಿಸುವ ಕೆಲ್ಲಿ ಸರ್ವಿಸಸ್ ಹೇಳಿದೆ.

ದೇಶದ ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ ಮತ್ತು ಶೀಘ್ರ ಮಾರಾಟ ಗ್ರಾಹಕ ವಸ್ತು ಉದ್ಯಮದಲ್ಲಿ ನೇಮಕಾತಿಯಲ್ಲಿ ಏರಿಕೆ ದಾಖಲಿಸಲಿದೆ ಎಂದು ಸಂಸ್ಥೆ ಹೇಳಿದೆ. ಕಂಪೆನಿಗಳ ವಿಸ್ತರಣಾ ಯೋಜನೆಗಳಿಂದ ಮುಂದಿನ ಆರು ತಿಂಗಳಿನಲ್ಲಿ ನೇಮಕಾತಿ ಹೆಚ್ಚಲಿದೆ .

ಕೆಲಸದ ಸ್ಥಿತಿ ಗತಿ, ವಿವಿಧ ಉದ್ಯಮಗಳ ಸಂಬಳ ಹಾಗೂ ಕಂಪೆನಿಗಳು ತಮ್ಮ ನೌಕರರ ನೇಮಕಾತಿ ಯೋಜನೆಯ ಕುರಿತು ಅದ್ಯಯನ ವರದಿಯನ್ನು ಬುಧವಾರ ಪ್ರಕಟಿಸಿದ ಕೆಲ್ಲಿ ಸರ್ವಿಸಸ್ ನೇಮಕಾತಿಯಲ್ಲಿ ಪ್ರತಿಭಾವಂತ, ಮದ್ಯಮ ವರ್ಗದ ಹಾಗೂ ಹೊಸ ಕೆಲಸಗಾರರಿಗೆ ಬೇಡಿಕೆ ಹೆಚ್ಚಲಿದೆ ಎಂದು ಹೇಳಿದೆ.

ಬ್ಯಾಂಕಿಂಗ್ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ನೇಮಕಾತಿ ಈ ವರ್ಷ ಶೇ 40 ರಿಂದ 50 ರಷ್ಟು ಹೆಚ್ಚಿದರೆ, ಶೀಘ್ರ ಮಾರಾಟ ಗ್ರಾಹಕ ಉತ್ಪನ್ನ ರಂಗದಲ್ಲಿ ಶೇ 20-30ರಷ್ಟು ಹೆಚ್ಚಲಿದೆ ಎಂದು ಸಂಸ್ಥೆ ಹೇಳಿದೆ.

ಟೆಲಿಕಾಮ್, ಇಂಜಿನಿಯರಿಂಗ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಹೆಚ್ಚಿನ ನೇಮಕಾತಿ ಆಗಲಿದೆ. ಬ್ಯಾಂಕಿಂಗ್ ಹಾಗೂ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಈ ವರ್ಷ ಕೆಲಸ ಬಿಡುವವರ ಸಂಖ್ಯೆ ಶೇ.15 ರಿಂದ 16 ರಷ್ಟು ಇರಲಿದೆ ಎಂದು ಕೆಲ್ಲಿ ಸರ್ವೀಸಸ್ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X