ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಬೆಳಗಾವಿ ಗಡಿ ಗದ್ದಲ

By Mahesh
|
Google Oneindia Kannada News

Lok Sabha adjourned for forty minutes on Belgaum issue
ನವದೆಹಲಿ, ಆ.3:ಬೆಳಗಾವಿ ಗಡಿ ವಿವಾದವನ್ನು ಇಂದು ಲೋಕಸಭೆಯಲ್ಲಿ ಕೆಣಕಿದ ಶಿವಸೇನೆಗೆ ರಾಜ್ಯದ ಸಂಸದರು ಒಗ್ಗೂಟಿ ತಕ್ಕ ಉತ್ತರ ನೀಡಿದರು. ಗಡಿವಿವಾದದ ಚರ್ಚೆಗೆ ಅವಕಾಶ ನೀಡಬೇಕು ಎಂದು ಶಿವಸೇನೆ ಸದಸ್ಯರು ಇಂದು ಪಟ್ಟು ಹಿಡಿದಿದ್ದರು.

ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಕುರಿತು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣ ಪತ್ರದ ಬಗ್ಗೆ ಶಿವ ಸೇನೆ ಸದಸ್ಯರು ಪ್ರಸ್ತಾಪಿಸಿದಾಗ, ಕರ್ನಾಟಕದ ಸಂಸದರು ಆಕ್ಷೇಪಿಸಿದರು. ಮಹಾರಾಷ್ಟ್ರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ವಿಷಯದ ಚರ್ಚೆಗೆ ಆಸ್ಪದ ನೀಡಬಾರದು ಎಂದು ರಾಜ್ಯದ ಸಂಸದರು ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಶಿವಸೇನೆಯ ಆನಂದರಾವ್ ಅತ್ಸಲ್ ಸೇರಿದಂತೆ ಕೆಲವರು 'ಬೆಳಗಾಂ ಹಮಾರಾ ಹೈ' ಎಂದು ಘೋಷಣೆ ಕೂಗಿದರು. ಇದಕ್ಕೆ ಎನ್ ಸಿಪಿ ಹಾಗೂ ಕಾಂಗ್ರೆಸ್ಸಿಗರು ಕೈ ಜೋಡಿಸಿದರು. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಎಲ್ಲಾ ಪಕ್ಷಗಳ ಸಂಸದರು ಚರ್ಚೆಗೆ ಅವಕಾಶ ನೀಡಬಾರದು ಎಂದು ಪ್ರತಿಯಾಗಿ ಕೂಗಿದರು.

ಚರ್ಚೆಗೆ ಅವಕಾಶ ನೀಡಬಾರದು ಎಂದು ಸ್ಪೀಕರ್ ಮೀರಾಕುಮಾರ್ ಅವರಿಗೆ ಮನವಿ ಮಾಡಿದ ಕೇಂದ್ರ ರೈಲ್ವೇ ಸಹಾಯಕ ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ಬಿಜೆಪಿ ಸಂಸಾದ್ ಅನಂತ ಕುಮಾರ್ ಅವರು ಗಡಿ ವಿವಾದ ವಿಷಯದಲ್ಲಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X