ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಲಿದೆ ಟಾಟಾ ಪೆಪ್ಸಿ ಮಿನರಲ್ ನೀರು

By Mahesh
|
Google Oneindia Kannada News

Tata-Pepsi JV to first focus on affordable packaged water
ನವದೆಹಲಿ, ಆ.2: ಕಳೆದ ಏಪ್ರಿಲ್ ನಲ್ಲಿ ಪ್ರಕಟಿಸಲಾದ ಟಾಟಾ ಗ್ಲೋಬಲ್ ಬ್ರಿವರೇಜಸ್ (ಹಿಂದೆ ಟಾಟಾ ಟೀ) ಮತ್ತು ಪೆಪ್ಸಿ ಸಹಯೋಗ ಕಡಿಮೆ ವೆಚ್ಚದಲ್ಲಿ ಖನಿಜಯುಕ್ತ ನೀರನ್ನು ಮಾರಾಟ ಮಾಡಲು ಮುಂದಾಗಿದೆ.

ಮೂಲಗಳ ಪ್ರಕಾರ ಒಂದು ಲೀಟರ್ ನೀರಿನ ಮಾರಾಟ ದರ ರೂ 10ಕ್ಕಿಂತ ಕಡಿಮೆ ಆಗಲಿದ್ದು 5 ರೂಪಾಯಿ ಆಗುವ ಸಾದ್ಯತೆಗಳೂ ಇವೆ ಎನ್ನಲಾಗಿದೆ. ಈ ಸಹಯೋಗ ಕಡಿಮೆ ವೆಚ್ಚದ ಪಾನೀಯಗಳನ್ನು ಬಿಡುಗಡೆ ಮಾಡುವ ಸಾದ್ಯತೆಗಳಿವೆ.

ದೇಶದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಬ್ರಾಂಡ್ ಗಳಾದ ಕಿನ್ಲೆ , ಅಕ್ವ ಫಿನಾ ಮತ್ತು ಬಿಸ್ಲೇರಿ ನೀರಿನ ಬೆಲೆ ಲೀಟರಿಗೆ ರೂ 15ರ ದರದಲ್ಲಿ ಮಾರಾಟವಾಗುತಿದ್ದು ಟಾಟಾದ ಹಿಮಾಲಯನ್ ನೀರಿನ ಬೆಲೆ ಲೀಟರಿಗೆ ರೂ 20 ಆಗಿದೆ. ಈ ಸಹಯೋಗ ಟೀ ಮಾರಾಟಕ್ಕೆ ಮುಂದಾಗುವುದಿಲ್ಲ.

ಏಕೆಂದರೆ ಪೆಪ್ಸಿ ಈಗಾಗಲೇ ಟೀ ಮಾರಾಟಕ್ಕೆ ಹಿಂದುಸ್ಥಾನ್ ಯೂನಿಲೀವರ್ ಜತೆ ಸಹಯೋಗ ಮಾಡಿಕೊಂಡಿದೆ. ಆದರೆ ಸಹಯೋಗ ಭಾರತದಲ್ಲಷ್ಟೇ ಅಲ್ಲದೆ ವಿದೇಶೀ ಮಾರುಕಟ್ಟೆಯಲ್ಲೂ ನೀರಿನ ಮಾರಾಟಕ್ಕೆ ಮುಂದಾಗಲಿದೆ. ಈ ಅಗ್ಗದ ನೀರಿನ ಮಾರಾಟದ ಕುರಿತು ಪ್ರತಿಕ್ರಿಯಿಸಲು ಟಾಟಾ ಸಮೂಹದ ಮುಖ್ಯ ಹಣಕಾಸು ಅಧಿಕಾರಿ ಎಲ್ ಕೆ ಕೃಷ್ಣ ಕುಮಾರ್ ನಿರಾಕರಿಸಿದ್ದು ಇದಿನ್ನೂ ಪ್ರಾರಂಭಿಕ ಹಂತ ಎಂದು ಹೇಳಿದರು.

ಮಾರುಕಟ್ಟೆ ಮೂಲಗಳ ಪ್ರಕಾರ ದೇಶದ ಪ್ಯಾಕ್ ಮಾಡಲಾದ ಕುಡಿಯುವ ನೀರಿನ ಮಾರುಕಟ್ಟೆ ಒಟ್ಟು ಪಾನೀಯ ಮಾರುಕಟ್ಟೆಯ ಶೇ15 ರಿಂದ 20 ರಷ್ಟಿದ್ದು 1500 ರಿಂದ 2000 ಕೋಟಿ ರುಪಾಯಿಗಳಾಗಿದೆ. ಎಲ್ಲಾ ಪ್ಯಾಕ್ ಮಾಡಲಾದ ಒಟ್ಟು ಪಾನೀಯಗಳ ಮಾರುಕಟ್ಟೆ 12,000 ಕೋಟಿ ರೂಪಾಯಿಗಳಾಗಿವೆ.

ನೀರಿನ ಮಾರುಕಟ್ಟೆ ವಾರ್ಷಿಕ ಶೇ.20ರಷ್ಟು ಬೆಳವಣಿಗೆ ದಾಖಲಿಸುತ್ತಿದ್ದು, ಲಾಭ ಕಡಿಮೆ ಇದೆ ಕಳೆದ ವರ್ಷ ಟಾಟಾ ಸ್ವಚ್ ಎಂಬ ವಿಶ್ವದ ಅತೀ ಕಡಿಮೆ ದರದ ನೀರಿನ ಶುದ್ದೀಕರಣ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಕುಟುಂಬವೊಂದಕ್ಕೆ ತಿಂಗಳಿಗೆ ಕೇವಲ ರೂ 30ರ ವೆಚ್ಚದಲ್ಲಿ ಸ್ವಚ್ಚ ಕುಡಿಯುವ ನೀರಿನ ಪೂರೈಕೆಯ ಗುರಿ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X