ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಮತ್ತೊಂದು ಆರ್ಥಿಕ ಹಿಂಜರಿತ?

By Mrutyunjaya Kalmat
|
Google Oneindia Kannada News

American Flag
ವಾಷಿಂಗ್ ಟನ್, ಆ. 2 : ಅಮೆರಿಕದಲ್ಲಿ ಮತ್ತೊಂದು ಆರ್ಥಿಕ ಹಿಂಜರಿತದ ಲಕ್ಷಣ ಕಾಣಿಸಿದೆ. ಸರಕಾದ ವರದಿಯ ಪ್ರಕಾರ ಎರಡನೇ ತ್ರೈಮಾಸಿಕದಲ್ಲಿ ಅಭಿವೃದ್ಧಿ ಮಂದಗತಿಯಲ್ಲಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಕೂಡ ಅಮೆರಿಕದ ಆರ್ಥಿಕ ಪರಿಸ್ಥಿತಿ ಇನ್ನೂ ಅನಿಶ್ಚಿತತೆಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಅಮೆರಿಕದ ಜಿಡಿಪಿಯು ಎರಡನೇ ತ್ರೈಮಾಸಿಕದಲ್ಲಿ ಕೂಡ ನಿರೀಕ್ಷಿತ ಬೆಳವಣಿಗೆಗಿಂತ ಮಂದಗತಿಯಲ್ಲಿದೆ. ಜೂನ್ 30 ಕ್ಕೆ ಅಂತ್ಯವಾದ ತ್ರೈಮಾಸಿಕ ಅವಧಿಯಲ್ಲಿ ಶೇ.2.4 ರ ಜಿಡಿಪಿ ದಾಖಲಾಗಿತ್ತು. ಇದು ನಿರೀಕ್ಷಿತ ಅಂದಾಜಿಗಿಂತ ಕಡಿಮೆಯಾಗಿದೆ ಎಂದು ವಾಣಿಜ್ಯ ಇಲಾಖೆ ಹೇಳಿದೆ. ಮೊದಲ ತ್ರೈಮಾಸಿಕದಲ್ಲಿ ಶೇ.3.7ರ ಪ್ರಗತಿ ನಿರೀಕ್ಷಿಸಲಾಗಿತ್ತು.

ಐಎಎಫ್ ತನ್ನ ಪ್ರತ್ಯೇಕ ವರದಿಯಲ್ಲಿ ಅಮೆರಿಕದ ಬ್ಯಾಂಕಿಂಗ್ ಸ್ಥಿರವಾಗಿದೆ. ಆದರೂ ಪರಿಸ್ಥಿತಿ ಇನ್ನೂ ಸುಧಾರಿಸಬೇಕಾಗಿದೆ. ಹೆಚ್ಚುವರಿಯಾಗಿ 76 ಶತಕೋಟಿ ಡಾಲರ್ ಬಂಡವಾಳದ ಅಗತ್ಯವನ್ನು ಬ್ಯಾಂಕಿಂಗ್ ಎದುರಿಸುತ್ತಿದೆ ಎಂದು ಹೇಳಿದೆ. 2007ರ ಡಿಸೆಂಬರ್ ನಲ್ಲಿ ಆರ್ಥಿಕ ಕುಸಿತ ಆರಂಭವಾಗಿತ್ತು. 2009ರ ಮಧ್ಯಭಾಗದಲ್ಲಿ ಕೊನೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕಳೆದ ಶುಕ್ರವಾರ ಬಿಡುಗಡೆಯಾದ ಅಂಕಿಅಂಶಗಳು ಆರ್ಥಿಕ ಸ್ಥಿತಿಯಿನ್ನೂ ಆತಂಕದಲ್ಲಿದೆ ಎಂದು ಬಿಂಬಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X