ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸಿ ಕ್ರಮಾಂಕದಲ್ಲಿ ಸಂಗಕ್ಕಾರ ಫಸ್ಟ್

By Mrutyunjaya Kalmat
|
Google Oneindia Kannada News

Kumar Sangakkara
ದುಬೈ, ಆ. 2 : ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೀಲಂಕಾ ತಂಡದ ನಾಯಕ ಕುಮಾರ ಸಂಗಕ್ಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಟೆಸ್ಟ್ ಕ್ರಮಾಂಕದಲ್ಲಿ ಅಗ್ರಸ್ಥಾನಕ್ಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ನಂಬರ್ ಒನ್ ಸ್ಥಾನದಲ್ಲಿದ್ದ ವಿರೇಂದ್ರ ಸೆಹವಾಗ್ ಅವರನ್ನು ಹಿಂದಿಕ್ಕಿದ್ದಾರೆ.

ಭಾರತದ ವಿರುದ್ಧದ ಟೆಸ್ಟ್ ನಲ್ಲಿ ಸಂಗಕ್ಕಾರ 219 ಮತ್ತು ಅಜೇಯ 42 ರನ್ ಗಳಿಸಿದ್ದು. ಸೆಹವಾಗ್ ನಂಬರ್ ಒನ್ ಸ್ಥಾನ ಕಳೆದುಕೊಳ್ಳಲು ಕಾರಣವಾಯಿತು. ಇದರಿಂದ ಸಂಗಕ್ಕಾರ 2009ರ ನಂತರ ಮೊದಲ ಬಾರಿಗೆ ನಂಬರ್ ಒನ್ ಸ್ಥಾನ ಪಡೆದುಕೊಂಡರು. ಲಂಕಾ ವಿರುದ್ದದ ಎರಡನೇ ಟೆಸ್ಟ್ ನಲ್ಲಿ 99 ರನ್ ಗಳಿಸಿದ ಸೆಹವಾಗ್ ಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವ ಅವಕಾಶ ದೊರೆಯಲಿಲ್ಲ. 2 ನೇ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿತು.

ಮಹೇಲ ಜಯವರ್ದನೆ ಮೂರನೇ ಸ್ಥಾನ, ಸಚಿನ್ ತೆಂಡೂಲ್ಕರ್ ನಾಲ್ಕು ಮತ್ತು ಮೈಕೆಲ್ ಕ್ಲಾರ್ಕ್ ಐದನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ನಂಬರ್ ಒನ್ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ಆಸೀಫ್, ಲಂಕಾದ ಮುರಳೀಧರನ್ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X