ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಬಸ್ಸುಗಳ ಮೇಲೆ ಕನ್ನಡದ ತೇರು

By Mrutyunjaya Kalmat
|
Google Oneindia Kannada News

R Ashok
ಬೆಂಗಳೂರು, ಆ. 2 : ಆರು ಸಾವಿರ ಬಿಎಂಟಿಸಿ ಬಸ್ ಗಳೂ ಸೇರಿದಂತೆ ಎಲ್ಲ 22 ಸಾವಿರ ಸರಕಾರಿ ಬಸ್ ಗಳಲ್ಲೂ ಕನ್ನಡದ ಬರಹಗಳನ್ನು ಬರೆಸುವುದಾಗಿ ಸಾರಿಗೆ ಸಚಿವ ಆರ್ ಅಶೋಕ್ ಭರವಸೆ ನೀಡಿದರು.

ಸುಚಿತ್ರ ಕಲಾಕೇಂದ್ರದ ಸಹಯೋಗದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಸಂಸದ ಅನಂತಕುಮಾರ್ ಮಾಡಿದ ಸಲಹೆಗೆ ಸಚಿವ ಅಶೋಕ್ ಸಮ್ಮತಿಸಿದರು. ಕನ್ನಡಕ್ಕಾಗಿ ದುಡಿದು ಹಿರಿಯ ಚೇತನಗಳ ಭಾವಚಿತ್ರಗಳನ್ನು ಬಸ್ಸುಗಳ ಮೇಲೆ ಬರೆಸುವುದಾಗಿ ಅವರು ಹೇಳಿದರು.

ಇಂಗ್ಲಿಷ್ ವ್ಯಾಮೋಹ ಕನ್ನಡಕ್ಕೆ ಕುತ್ತು

ರಾಜ್ಯದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ನಮ್ಮ ಉಳಿವು ಸಾಧ್ಯ ಎಂದು ಸಾರಿಗೆ ಸಚಿವ ಅಶೋಕ್ ಹೇಳಿದ್ದಾರೆ.

ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ ಏರ್ಪಡಿಸಿದ್ದ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಭಾಷೆ ಸಂಸ್ಕೃತಿ ಮರೆತರೆ ನಮಗೆ ಉಳಿಗಾಲವಿಲ್ಲ ಎಂದರು. ರಾಜ್ಯದಲ್ಲಿ ಕನ್ನಡಕ್ಕೆ ಆಧ್ಯತೆ ಸಿಗಬೇಕು. ದೈನಂದಿನ ಜೀವನದಲ್ಲಿ, ಆಡಳಿತದಲ್ಲಿ ಕನ್ನಡ ಬಳಕೆಯಾಗಬೇಕು. ಇದರ ಜೊತೆಗೆ ಬದಲಾದ ಸನ್ನಿವೇಶದಲ್ಲಿ ಗಣಕಯಂತ್ರದ ಮೂಲಕವೂ ಕನ್ನಡ ಪರಿಪೂರ್ಣವಾಗಿ ಬಳಸುವಂತಾಗಬೇಕು. ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಸಾಕಷ್ಟು ಕಾರ್ಯಕ್ರಮ ರೂಪಿಸಿವೆ ಎಂದರು.

ಇಂಗ್ಲಿಷ್ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಎಂಬ ವರ್ಗೀಕರಣವೇ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾದುದು. 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ದೊರೆಯುಂತಾಗಬೇಕು. ಅಗತ್ಯಕ್ಕೆ ತಕ್ಕಷ್ಟು ಬೇರೆ ಭಾಷೆಯನ್ನು ಕಲಿಯಬೇಕು. ಆದರೆ, ಜಾಗತೀಕರಣದಿಂದ ಇಂಗ್ಲಿಷ್ ಅತ್ಯಹತ್ಯ ಭಾಷೆಯಾಗಿ ಮಾರ್ಪಟ್ಟಿದೆ. ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಕನ್ನಡ ನಲುಗುವಂತಾಗಿದೆ ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X