• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತ್ರಿಕೋನ ಸರಣಿಗೆ ಸಚಿನ್ , ಹರ್ಭಜನ್ ಇಲ್ಲ

By Mahesh
|

ಕೊಲಂಬೋ, ಜು.31: ಇಲ್ಲಿನ ನಡೆಯಲಿರುವ ತ್ರಿಕೋನ ಏಕದಿನ ಪಂದ್ಯಗಳ ಸರಣಿಗೆ ಸಚಿನ್ ತೆಂಡೂಲ್ಕರ್ ,ಹರ್ಭಜನ್ ಸಿಂಗ್ ಹಾಗೂ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಆಯ್ಕೆಗೆ ಪರಿಗಣಿಸಿಲ್ಲ ಎಂದು ಬಿಸಿಸಿಐ ಹೇಳಿದೆ.

ಫೆ.24 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವಾಡಿದ್ದ ಸಚಿನ್ ,200 ರನ್ ಗಡಿ ದಾಟಿ ದಾಖಲೆ ಮೆರೆದಿದ್ದರು. ಶ್ರೀಲಂಕಾ, ಭಾರತ ಹಾಗೂ ನ್ಯೂಜಿಲ್ಯಾಂಡ್ ತ್ರಿಕೋನ ಸರಣಿಯಲ್ಲಿ ಆಡಲಿರುವ ತಂಡಗಳಾಗಿವೆ. ಉಳಿದಂತೆ, ಸೌರವ್ ತಿವಾರಿ ಹಾಗೂ ಆರ್ ಅಶ್ವಿನ್ ತಂಡದಲ್ಲಿ ಸ್ಥಾನಪಡೆದಿದ್ದು, ಯುವರಾಜ್ ಸಿಂಗ್ ತಂಡಕ್ಕೆ ಮರಳಿದ್ದಾರೆ.

ತಂಡ ಇಂತಿದೆ: ಎಂಎಸ್ ಧೋನಿ(ನಾಯಕ/ವಿಕೆಟ್ ಕೀಪರ್), ವಿರೇಂದ್ರ ಸೆಹ್ವಾಗ್ (ಉಪ ನಾಯಕ), ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮಾ, ಯುವರಾಜ್ ಸಿಂಗ್, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಆರ್ ಆಶ್ವಿನ್, ಪ್ರವೀಣ್ ಕುಮಾರ್, ಇಶಾಂತ್ ಶರ್ಮಾ, ಅಭಿಮನ್ಯು ಮಿಥುನ್, ಆಶೀಶ್ ನೆಹ್ರಾ, ಪ್ರಜ್ಞಾನ್ ಓಝಾ, ಸೌರವ್ ತಿವಾರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X