ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಮೆಡಿಕ್ಲೇಮ್ ಪಾಲಿಸಿ ಗೊಂದಲ ನಿವಾರಣೆ

By Mahesh
|
Google Oneindia Kannada News

Cashless facility for mediclaim to be restored in 10 days
ನವದೆಹಲಿ, ಜು.31:ಖಾಸಗಿ ಹೈ ಟೆಕ್ ಆಸ್ಪತ್ರೆಗಳ ದುಬಾರಿ ಬಿಲ್ ಭರಿಸಲಾಗದೇ ಸರ್ಕಾರದ ನಾಲ್ಕು ವಿಮಾ ಕಂಪೆನಿಗಳು ಈ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆಯನ್ನು ರದ್ದು ಪಡಿಸಿದ್ದು, ಈ ಕುರಿತು ಸಂಧಾನ ನಡೆಸುತ್ತಿರುವ ಸಮಿತಿಯ ಸದಸ್ಯ ಹೃದಯ ತಜ್ಞ ಹಾಗೂ ಮೆಡಿಸಿಟಿ ಸಂಸ್ಥೆಯ ಮುಖ್ಯಸ್ಥ ನರೇಶ್ ಟ್ರೆಹಾನ್ ಈ ವಿವಾದ ಮುಂದಿನ 10 ದಿನಗಳಲ್ಲಿ ಬಗೆಹರಿಯಲಿದೆ ಎಂದು ಹೇಳಿದ್ದಾರೆ.

ಈ ಕುರಿತು ಆಸ್ಪತ್ರೆಗಳು ಹಾಗೂ ವಿಮಾ ಕಂಪೆನಿಗಳು ಮಾತುಕತೆ ನಡೆಸುತ್ತಿದ್ದು ನಗದು ರಹಿತ ಸೇವೆ ಶೀಘ್ರ ಆರಂಭ ಗೊಳ್ಳಲಿದೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಸರ್ಕಾರಿ ವಿಮಾ ಕಂಪೆನಿಗಳಾದ ನ್ಯೂ ಇಂಡಿಯಾ ಅಶುರೆನ್ಸ್, ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್, ನ್ಯಾಷನಲ್ ಇನ್ಷೂರೆನ್ಸ್ ಹಾಗೂ ಒರಿಯೆಂಟಲ್ ಇನ್ಷೂರೆನ್ಸ್ ಕಂಪೆನಿಗಳ ಪ್ರತಿನಿಧಿಗಳು ಮಾತುಕತೆಯಲ್ಲಿ ಪಾಲ್ಗೊಂಡಿದ್ಧಾರೆ ಎಂದು ಹೇಳಿದರು.

ಪಟ್ಟಿಯಿಂದ ತೆಗೆಯಲಾಗಿದ್ದ 150 ಖಾಸಗಿ ಆಸ್ಪತ್ರೆಗಳು ತುರ್ತು,ತೀವ್ರ ನಿಗಾ ಘಟಕ, ಹೃದಯ ರಕ್ಷಾ ಹಾಗೂ ಗಾಯಗಳ ಚಿಕಿತ್ಸೆಯನ್ನು ಈಗ ಆರಂಭಿಸಿವೆ ಎಂದು ಅವರು ಹೇಳಿದರು. ಐಆರ್‌ಡಿಏ ಅದ್ಯಕ್ಷ ಜೆ ಹರಿನಾರಾಯಣ್ ಅವರು ಈ ವಿವಾದ ಶೀಘ್ರ ಬಗೆಹರಿಯಲಿದೆ ಎಂದು ಹೇಳಿದ್ದರು.

ಈ ಕುರಿತು ರಚಿಸಲಾದ ಸಂಧಾನ ಸಮಿತಿಯಲ್ಲಿ ಅಪೋಲೋ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ಸಿ ರೆಡ್ಡಿ, ಫೋರ್ಟಿಸ್ ನ ಮುಖ್ಯಸ್ಥ ಶಿವಿಂದರ್ ಮೋಹನ್ ಸಿಂಗ್, ಮ್ಯಾಕ್ಸ್ ಹೆಲ್ತ್ ಕೇರ್ ನ ಪರ್ವೇಜ್ ಅಹ್ಮದ್, ಮೆಡಿಸಿಟಿ ಮುಖ್ಯಸ್ಥ ನರೇಶ್ ಅವರಿದ್ದಾರೆ.

ವಿಮಾ ಕಂಪೆನಿಗಳ ಪರವಾಗಿ ಮೂರನೇ ವ್ಯಕ್ತಿ ಆಡಳಿತಗಾರ ಪವನ್ ಭಲ್ಲಾ ಅವರಿದ್ದಾರೆ . ಕಳೆದ ಜುಲೈ 1 ರಿಂದ 4 ವಿಮಾ ಕಂಪೆನಿಗಳು ಖಾಸಗೀ ಅಸ್ಪತ್ರೆಗಳ ನಗದು ರಹಿತ ಸೇವೆಯನ್ನು ರದ್ದುಪಡಿಸಿದ್ದವು . ಕೆಲವೊಂದು ಸಂದರ್ಬದಲ್ಲಿ ಆಸ್ಪತ್ರೆಗಳು ಅಧಿಕ ಬಿಲ್ ನೀಡಿವೆ ಎಂದ ನರೇಶ್ ಅವರು ವಿಮಾ ಕಂಪೆನಿಗಳ ಕಳವಳ ಕಾನೂನು ಮಿತಿಯಲ್ಲಿಯೆ ಇದೆ ಎಂದರು .

ಆರೋಗ್ಯ ವಿಮೆ ಪಾಲಿಸಿಗಳಲ್ಲಿ ವಿಮಾ ಕಂಪೆನಿಗಳು ನಷ್ಟ ಅನುಭವಿಸುತ್ತಿವೆ . ಸಂಗ್ರಹಿಸಲಾದ ಪ್ರತೀ ನೂರು ರುಪಾಯಿಗಳ ಪ್ರೀಮಿಯಂ ಗೆ 130 ರುಪಾಯಿಗಳ ಕ್ಲೇಮ್ ಬರುತ್ತಿದೆ ಎನ್ನಲಾಗಿದೆ . ದೇಶದಲ್ಲಿ 8 ಕೋಟಿ ಆರೋಗ್ಯ ವಿಮೆ ಪಾಲಿಸಿದಾರರಿದ್ದಾರೆ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X