ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿಡಗಳಿಗೂ ಹುಟ್ಟುಹಬ್ಬ,ಶಾಲೆ ಮಕ್ಕಳ ಪರಿಸರಪ್ರೇಮ

By Mahesh
|
Google Oneindia Kannada News

Van Mahotsav at Chamarajanar govt schol
ಚಾಮರಾಜನಗರ, ಜು.31: ಕಾಟಾಚಾರಕ್ಕೆ ಗಿಡನೆಟ್ಟು ಕ್ಯಾಮರಾ ಮುಂದೆ ಪೋಸ್ ನೀಡಿ ಪ್ರಚಾರ ಪಡೆದು ಮತ್ತೆ ಅತ್ತ ತಿರುಗಿ ನೋಡದ ಜನರ ನಡುವೆ ಶಾಲೆ ಆವರಣದಲ್ಲಿ ಗಿಡನೆಟ್ಟು ಅವುಗಳನ್ನು ಪೋಷಿಸಿ, ಬೆಳೆಸಿ ಅವುಗಳಿಗೆ ಹುಟ್ಟು ಹಬ್ಬ ಆಚರಿಸುವ ಮೂಲಕ ಪರಿಸರ ಕಾಳಜಿ ತೋರುತ್ತಿರುವ ಚಾಮರಾಜನಗರದ ಚನ್ನಿಪುರಮೋಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಇತರರಿಗೆ ಮಾದರಿಯಾಗಿದ್ದಾರೆ.

ಶಾಲೆಯ ಆವರಣದಲ್ಲಿ ಕಳೆದ ವರ್ಷ ನ್ಯಾಯಾಧೀಶರಾದ ಮಲ್ಲಪ್ಪ ಸಮಾಜ ಸೇವಕ ಎಲ್. ಸುರೇಶ್ ಕೊಡುಗೆಯಾಗಿ ನೀಡಿದ್ದ ಗಿಡಗಳನ್ನು ನೆಟ್ಟಿದ್ದರು. ಆ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿದ್ದರು. ಪ್ರತಿಯೊಂದು ಗಿಡಕ್ಕೂ ದೇಶದ ಮಹಾನ್ ನಾಯಕರ ಹೆಸರು ಇಡಲಾಗಿತ್ತು.

ಆದರೆ ವಿದ್ಯಾರ್ಥಿಗಳು ಗಿಡ ನೆಟ್ಟ ನಂತರ ಪ್ರತಿ ದಿನವೂ ಅವುಗಳಿಗೆ ನೀರು, ಗೊಬ್ಬರ ಹಾಕಿ ಪ್ರೀತಿ ಯಿಂದ ಬೆಳೆಸಿದ್ದರು. ಇದೀಗ ಗಿಡಗಳಿಗೆ ವರ್ಷ ತುಂಬಿದ್ದರಿಂದ ಹುಟ್ಟುಹಬ್ಬ ಆಚರಣೆಯ ಸಂಭ್ರಮ. ಶಾಲೆಯಲ್ಲಿ ಎಲ್ಲಿ ನೋಡಿದರಲ್ಲಿ ಹಬ್ಬದ ವಾತಾವರಣ...

ವಿದ್ಯಾರ್ಥಿಗಳಲ್ಲಿ ಏನೋ ಉತ್ಸಾಹ... ಗಿಡಗಳಿಗೆ ಹಸಿರು ತೋರಣ ಕಟ್ಟಿ ಹೂವಿನಿಂದ ಸಿಂಗರಿಸಿ... ಕೇಕ್ ಕತ್ತರಿಸಿ ಎಲ್ಲರಿಗೂ ಹಂಚುವ ಮೂಲಕ ಗಿಡಗಳಿಗೆ ನೀರು ಹಾಕಿದರು. ಶಾಲೆ ಮಕ್ಕಳ ಈ ಕಾಳಜಿ ಎಲ್ಲರಲ್ಲೂ ಮೂಡಿದ್ದೇ ಆದರೆ ವನಮಹೋತ್ಸವ ಆಚರಣೆಗೆ ಖಂಡಿತಾ ಅರ್ಥ ಬರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X