ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಷಾಢ ನಂತರ ಶೋಭಾ, ಸೋಮಣ್ಣಗೆ ಶುಭವಾರ್ತೆ

By Mahesh
|
Google Oneindia Kannada News

Yeddyurappa indicates cabinet expansion
ಬೆಂಗಳೂರು, ಜು.29: ಗಣಿಗದ್ದಲ, ಪಾದಯಾತ್ರೆಯ ನಡುವೆಯೂ ಸಂಪುಟ ವಿಸ್ತರಣೆ ವಿಷಯ ಇನ್ನೂ ಬಿಜೆಪಿಯಲ್ಲಿ ಜೀವಂತವಾಗಿದೆ. ಆದರೆ, ಆಷಾಢ ಮುಗಿಯುವವರೆಗೂ ಕಾಯಬೇಕು ಎನ್ನುತ್ತಾರೆ ಸಿಎಂ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸಂಪುಟಕ್ಕೆ ಶೋಭಾ ಹಾಗೂ ಸೋಮಣ್ಣ ಅವರನ್ನು ಸೇರಿಸಿಕೊಳ್ಳುವುದು ಗ್ಯಾರಂಟಿ ಎಂಬುದು ಬಲ್ಲಸತ್ಯ.

ಆದರೆ, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದರ ನಿರ್ಧಾರವನ್ನು ಪಕ್ಷದ ವರಿಷ್ಠರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಒಟ್ಟಿನಲ್ಲಿ ಆಷಾಢ ಕಳೆದ ನಂತರ ಒಳ್ಳೆ ಮಹೂರ್ತದಲ್ಲಿ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಜ್ಜಾಗಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಹೇಳಿದರು.

ಅಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ಸಚಿವರಾದರೂ ಉಪಚುನಾವಣೆಯಲ್ಲಿ ಕಿರಿಯ ಪ್ರತಿಸ್ಪರ್ಧಿ ಪ್ರಿಯಕೃಷ್ಣ ವಿರುದ್ಧ ಸೋಲುಂಡ ಸೋಮಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಇದೇ ರೀತಿ ಬಿಜೆಪಿಯಲ್ಲಿ ಎದ್ದ ಬಂಡಾಯದ ಬಿಸಿಗೆ ಸಚಿವ ಸ್ಥಾನ ಕಳೆದುಕೊಂಡಿದ್ದ ಶೋಭಾ ಕರಂದ್ಲಾಜೆ ಅವರನ್ನು ಕೂಡಾ ಮತ್ತೆ ಸಚಿವ ಸ್ಥಾನದಲ್ಲಿ ಕೂರಿಸಲಾಗುವುದು ಎಂದು ಆರೆಸ್ಸೆಸ್ ನ ಹಿರಿಯರು ಹೇಳಿದ್ದಾರೆ.

ಪಾದಯಾತ್ರೆ Vs ಸಮಾವೇಶ: ಚಾಲ್ತಿಯಲ್ಲಿರುವ ಬಳ್ಳಾರಿ ಚಲೋ ಕಾಂಗ್ರೆಸ್ ಪಾದಯಾತ್ರೆಗೆ ಸಡ್ಡು ಹೊಡೆಯಲು ರಾಜ್ಯದ ನಾಲ್ಕು ಪ್ರಮುಖ ನಗರಗಳಲ್ಲಿ ಬಿಜೆಪಿ ಸಮಾವೇಶ ನಡೆಸಲಿದೆ. ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ಪೂರಕವಾಗಿ ಅ.2:ದಾವಣಗೆರೆ, ಅ.5:ಗುಲ್ಭರ್ಗಾ, ಅ.12:ಮೈಸೂರು, ಅ:20:ಬಳ್ಳಾರಿಯಲ್ಲಿ ಬೃಹತ್ ಸಮಾವೇಶಗಳನ್ನು ಆಯೋಜಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X