ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭ ಸುದ್ದಿ: ಬ್ಯಾಂಕ್ ಠೇವಣಿ ಬಡ್ಡಿ ದರ ಹೆಚ್ಚಳ

By Mahesh
|
Google Oneindia Kannada News

Banks hike deposit rates to lure funds
ನವದೆಹಲಿ, ಜು.29:ರಿಸರ್ವ್ ಬ್ಯಾಂಕು ರೆಪೋ ಹಾಗೂ ರಿವರ್ಸ್ ರೆಪೋ ದರಗಳನ್ನು ಹೆಚ್ಚಿಸಿದ ಬೆನ್ನಲ್ಲೇ ವಿವಿಧ ಬ್ಯಾಂಕುಗಳು ಠೇವಣಿದಾರರಿಗೆ ನೀಡುವ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಹೆಚ್ ಡಿ ಎಫ್ ಸಿ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಲಕ್ಷ್ಮಿ ವಿಲಾಸ್ ಬ್ಯಾಂಕ್ ತಮ್ಮ ಠೇವಣಿದಾರರಿಗೆ ಬಡ್ಡಿ ದರವನ್ನು ಹೆಚ್ಚಿಸಿವೆ.

ಬ್ಯಾಂಕ್ ಆಫ್ ಇಂಡಿಯಾ ತನ್ನ ಬಡ್ಡಿ ದರವನ್ನು ಶೇ.0.25 ರಿಂದ ಶೇ0.50 ರ ವರೆಗೆ ಹೆಚ್ಚಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಪೊರೇಷನ್ ಬ್ಯಾಂಕಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೆಎಮ್ ಗಾರ್ಗ್, ಬ್ಯಾಂಕು ಶೀಘ್ರದಲ್ಲಿ ಬಡ್ಡಿ ದರಗಳನ್ನು ಹೆಚ್ಚಿಸುವುದಾಗಿ ಹೇಳಿದರು.

ಎಕ್ಸಿಸ್ ಬ್ಯಾಂಕ್ ಕೂಡ ಬಡ್ಡಿ ದರಗಳನ್ನು ಪರಿಷ್ಕರಿಸುವುದಾಗಿ ಹೇಳಿದೆ. ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಅಧ್ಯಕ್ಷ ಒಪಿ ಭಟ್ ಬ್ಯಾಂಕು ಮುಂದಿನ ತಿಂಗಳು ಬಡ್ಡಿ ದರಗಳನ್ನು ಹೆಚ್ಚಿಸಲಿರುವುದಾಗಿ ಹೇಳಿದರು.

ದೇಶದ ಎರಡನೇ ಅತೀ ದೊಡ್ಡ ಖಾಸಗೀ ಬ್ಯಾಂಕ್ ಆಗಿರುವ ಹೆಚ್ ಡಿ ಎಫ್ ಸಿ ಬ್ಯಾಂಕ್ ಜುಲೈ 30 ರಿಂದ ಜಾರಿಯಾಗುವಂತೆ ಬಡ್ಡಿ ದರಗಳನ್ನು ಶೇ0.25 ರಿಂದ ಶೇ0.75 ರ ವರೆಗೆ ಹೆಚ್ಚಿಸಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಬಡ್ಡಿ ದರಗಳನ್ನು 25 ರಿಂದ 50 ಮೂಲ ಅಂಶಗಳಷ್ಟು ಹೆಚ್ಚಿಸಿದೆ.

ಈ ಹಣಕಾಸು ವರ್ಷದ ಆರಂಭದಿಂದ ಬ್ಯಾಂಕುಗಳ ಠೇವಣಿಯಲ್ಲಿ ಕುಸಿತವಾಗಿದ್ದು ಮತ್ತೊಂದೆಡೆ ಸಾಲ ಮಾರುಕಟ್ಟೆ ಬೆಳೆಯುತ್ತಿದೆ. ಜುಲೈ ತಿಂಗಳ 15 ರ ವರೆಗೆ ಠೇವಣಿದಾರರು 40,867 ಕೋಟಿ ರೂಪಾಯಿಗಳಷ್ಟು ಠೇವಣಿಯನ್ನು ಬ್ಯಾಂಕ್ ಗಳಿಂದ ಹಿಂದೆ ಪಡೆದಿದ್ದು, ವಾರ್ಷಿಕವಾಗಿ ಠೇವಣಿಗಳ ಬೆಳವಣಿಗೆ ಶೇ 14.55ಕ್ಕೆ ಕುಸಿದಿದೆ.

ಠೇವಣಿಗಳಲ್ಲಿ ಕುಸಿತವಾಗಿರುವದಕ್ಕೆ ಆತಂಕ ವ್ಯಕ್ತಪಡಿಸಿರುವ ರಿಸರ್ವ್ ಬ್ಯಾಂಕು ಬ್ಯಾಂಕುಗಳು ಠೇವಣಿಗಳನ್ನು ಹೆಚ್ಚಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುವಂತೆ ಬ್ಯಾಂಕ್ ಗಳಿಗೆ ಸೂಚಿಸಿದೆ.

ಸಾರ್ವಜನಿಕ ರಂಗದ ತೈಲ ಕಂಪೆನಿಗಳು ಹಾಗೂ ಮ್ಯೂಚುವಲ್ ಫಂಡ್ ಗಳು ಠೇವಣಿಗಳನ್ನು ಹಿಂದಕ್ಕೆ ಪಡೆಯುತಿದ್ದು ಸಾರ್ವಜನಿಕರು ಠೇವಣಿಗಳನ್ನು ಹಿಂಪಡೆದಿದ್ದು ಕಾದುನೋಡುತ್ತಿದ್ದಾರೆ ಎಂದ ರಿಸರ್ವ್ ಬ್ಯಾಂಕ್ ಗವರ್ನರ್ ಡಿ ಸುಬ್ಬರಾವ್ ಅವರು ಠೇವಣಿಗಳ ಬೆಳವಣಿಗೆ ಶೇ18 ರಷ್ಟಾಗಬೇಕಿದೆ ಎಂದು ಹೇಳಿದರು. ಬ್ಯಾಂಕ್ ಗಳು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದರಿಂದ ಸಹಜವಾಗೇ ಠೇವಣಿಗಳು ಹೆಚ್ಚಾಗಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X