ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಸೆನ್ನೆಲ್ ನಲ್ಲಿ10 ಸಾವಿರ ನೌಕರರ ನೇಮಕ

By Mahesh
|
Google Oneindia Kannada News

BSNL
ನವದೆಹಲಿ, ಜು. 27: ಸರ್ಕಾರೀ ಸ್ವಾಮ್ಯದ ನಷ್ಟದಲ್ಲಿರುವ ದೂರಸಂಪರ್ಕ ಸೇವಾ ಕಂಪೆನಿ ಬಿಎಸ್‌ಎನ್‌ಎಲ್ ಮುಂದಿನ ಎರಡು ವರ್ಷಗಳಲ್ಲಿ ತನ್ನ ಮಾರುಕಟ್ಟೆ ಹಾಗೂ ಮಾರಾಟ ವಿಭಾಗಕ್ಕೆ 10,000 ನೌಕರರನ್ನು ನೇಮಕ ಮಾಡಿಕೊಳ್ಳಲಿದೆ ಎಂದು ನಿಗಮದ ಅದ್ಯಕ್ಷ ಕುಲ್ ದೀಪ್ ಗೋಯೆಲ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಇದರಿಂದ ಕಂಪೆನಿಯ ಮಾರಾಟ ಹಾಗೂ ಮಾರುಕಟ್ಟೆ ವಿಭಾಗದ ನೌಕರರ ಒಟ್ಟು ಸಂಖ್ಯೆ 25,000 ತಲುಪಲಿದೆ ಎಂದು ಹೇಳಿದರು.

ನಷ್ಟದಲ್ಲಿರುವ ನಿಗಮದ ಪುನರುಜ್ಜೀವನಕ್ಕೆ ತಜ್ಞ ಸ್ಯಾಮ್ ಪಿತ್ರೋಡ ನೇತೃತ್ವದ ಸಮಿತಿಯು ನಿಗಮದ 1 ಲಕ್ಷ ನೌಕರರನ್ನು ನಿವೃತ್ತಿ ನೀಡಿ ಮನೆಗೆ ಕಳಿಸುವಂತೆ ಶಿಫಾರಸು ಮಾಡಿತ್ತು. ಆದರೆ ಕೆಲಸಗಾರರ ಸಂಖಯನ್ನು ಕಡಿತಗೊಳಿಸಿದರೆ ವಿವಿದ ನೌಕರರ ಸಂಘಟನೆಗಳು ಮುಷ್ಕರದ ಬೆದರಿಕೆಯನ್ನು ಹಾಕಿದ್ದವು.

ನಿಗಮ ಪ್ರಸ್ತುತ 3.5 ಲಕ್ಷ ನೌಕರರನ್ನು ಹೊಂದಿದೆ. ನಿಗಮ 400 ಕೋಟಿ ರೂ ಹೂಡಿಕೆಯ ಮೂಲಕ ತನ್ನ ಹಣಕಾಸು, ಸಿಬ್ಬಂದಿ, ಮಾರುಕಟ್ಟೆ, ರಿಯಲ್ ಎಸ್ಟೇಟ್ ಮತ್ತು ಇತರ ವಿಭಾಗಗಳನ್ನು ಪುನರುಜ್ಜೀವಗೊಳಿಸುತ್ತಿದೆ ಎಂದು ಗೋಯೆಲ್ ತಿಳಿಸಿದರು.

ಇದೇ ಮೊದಲ ಬಾರಿಗೆ ನಿಗಮ ತನ್ನ ಮಾರಾಟ ವಿಭಾಗವನ್ನು ಸ್ಥಾಪಿಸಿದ್ದು, ಉತ್ತಮ ಬೆಳವಣಿಗೆ ದಾಖಲಿಸಿದ ಸಿಬ್ಬಂದಿಗಳಿಗೆ ಭತ್ಯೆಯನ್ನೂ ನೀಡುತ್ತಿದೆ. ಖಾಸಗಿ ಕಂಪೆನಿಗಳು 3ಜಿ ಮಾರುಕಟ್ಟೆ ಪ್ರವೇಶಿಸುವದಕ್ಕೂ ಮುನ್ನವೇ ದೇಶದ 3ಜಿ ಮಾರುಕಟ್ಟೆ ಹಾಗೂ ಬ್ರಾಡ್ ಬ್ಯಾಂಡ್ ನಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಭದ್ರಗೊಳಿಸಲು ನಿಗಮ ಯೋಜನೆ ಹಾಕಿಕೊಂಡಿದೆ.

ನಿಗಮ 3ಜಿ ಸೇವೆಯನ್ನು ಈಗಾಗಲೇ ೪೫೦ ನಗರಗಳಲ್ಲಿ ನೀಡಿದ್ದು ಇದನ್ನು ಶೀಘ್ರ 750 ನಗರಗಳಿಗೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ಅಲ್ಲದೆ ಈಗಿನ 3ಜಿ ಗ್ರಾಹಕರ ಸಂಖೆಯನ್ನು 1.3 ಮಿಲಿಯ ದಿಂದ 4 ಮಿಲಿಯನ್ ಗಳಿಗೇರಿಸಲೂ ಯೋಜನೆ ಹಾಕಿಕೊಂಡಿದೆ.

ದೂರ ಸಂಪರ್ಕ ಮಾರುಕಟ್ಟೆಯಲ್ಲಿ ಹೆಚ್ಚಿದ ಪೈಪೋಟಿಯಿಂದಾಗಿ ನಿಗಮದ ಮಾರುಕಟ್ಟೆ ಪಾಲು ಶೇ12 ಕ್ಕೆ ಕುಸಿದಿದ್ದು, ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನಿಗಮ ತಾನು 3ಜಿ ಹಾಗೂ ನಿಸ್ತಂತು ಬ್ರಾಡ್ ಬ್ಯಾಂಡ್ ತರಂಗಾಂತರ ಪರವಾನಗಿ ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸಿರುವ ರೂ 18,500 ಕೋಟಿ ರೂಪಾಯಿಗಳನ್ನು ವಾಪಸ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X