ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ಬ್ರಿಟನ್ ಹೊರಗುತ್ತಿಗೆ ಕೇಂದ್ರ ನಿರ್ಮಾಣ

By Prasad
|
Google Oneindia Kannada News

David Cameron
ಬೆಂಗಳೂರು, ಜು. 27 : ಭಾರತಕ್ಕೆ ಪ್ರಥಮ ಬಾರಿಗೆ ಭೇಟಿ ನೀಡುತ್ತಿರುವ ಬ್ರಿಟಿಷ್ ಪ್ರಧಾನಿ ಡೆವಿಡ್ ಕ್ಯಾಮರಾನ್ ಅವರು ಜು.28ರಂದು ಬುಧವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

ಎರಡು ದಿನಗಳ ಮಟ್ಟಿಗೆ ಭೇಟಿ ನೀಡಲಿರುವ ಡೆವಿಡ್, ಇಂದು ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯಪಾಲ ಎಚ್ಆರ್ ಭಾರದ್ವಾಜ್, ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಕಂಪನಿ ಇನ್ಫೋಸಿಸ್ ಮತ್ತು ಎಚ್ಎಎಲ್ ಗಳಿಗೆ ಭೇಟಿ ನೀಡಲಿದ್ದಾರೆ.

ಶಿವಮೊಗ್ಗದ ವಿಶೇಷ ವಿತ್ತ ವಲಯದಲ್ಲಿ ಹೊರಗುತ್ತಿಗೆ ಕೇಂದ್ರವನ್ನು ವಿಸ್ತರಿಸಿಕೊಳ್ಳುತ್ತಿರುವ ಬ್ರಿಟನ್ ಕಂಪನಿ ಎಕ್ಸ್ ಚೇಂಜಿಂಗ್ ಬ್ರಿಟಿಷ್ ಪ್ರಧಾನಿ ಡೆವಿಡ್ ಕ್ಯಾಮರಾನ್ ಮತ್ತು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಕರ್ನಾಟಕ ಸರಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರ ತವರು ಜಿಲ್ಲೆಯಲ್ಲಿಯೇ ಹೊರಗುತ್ತಿಗೆ ಕೇಂದ್ರ ನಿರ್ಮಿತವಾಗುತ್ತಿರುವುದರಿಂದ ಈ ಒಪ್ಪಂದಕ್ಕೆ ಹೆಚ್ಚಿನ ಮಹತ್ವ ದೊರೆತಿದೆ. 2008ರಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ 300 ಉದ್ಯೋಗಿಗಳಿರುವ ಹೊರಗುತ್ತಿಗೆ ಕಂಪನಿ 2000 ಉದ್ಯೋಗಿಗಳಿಗೆ ಕೆಲಸದ ಅವಕಾಶ ಕಲ್ಪಿಸಲಿದೆ.

2010ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಆಗಮಿಸುತ್ತಿರುವ ಡೆವಿಡ್ ಕ್ಯಾಮರಾನ್ ಅವರನ್ನೊಳಗೊಂಡ 50 ಸದಸ್ಯರ ಉನ್ನತ ಮಟ್ಟದ ನಿಯೋಗ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X