ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾನ್ಸ್ ಜೆಂಡರ್ ಗಳಿಗೆ ಪಿಜಿ ಸೀಟು ಮೀಸಲು

By Mrutyunjaya Kalmat
|
Google Oneindia Kannada News

Transgenders
ಬೆಂಗಳೂರು, ಜು. 27 : ಲೈಂಗಿಕ ಅಲ್ಪಸಂಖ್ಯಾತರಿಗೆ(ಟ್ರಾನ್ಸ್ ಜೆಂಡರ್) ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯ ಮಹತ್ವದ ನಿರ್ಧಾರ ಕೈಗೊಂಡಿದ್ದು, ಟ್ರಾನ್ಸ್ ಜೆಂಡರ್ ರಿಗೆ ಸ್ನಾತಕೋತ್ತರ ಪದವಿಯ ಪ್ರತಿ ಕೋರ್ಸ್ ನಲ್ಲೂ ಒಂದು ಸೀಟು ಮೀಸಲಿಡಲು ಶೈಕ್ಷಣಿಕ ಪರಿಷತ್ ತೀರ್ಮಾನಿಸಿದೆ.

ಲೈಂಗಿಕ ಅಲ್ಪಸಂಖ್ಯಾತರಿಗೂ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಆಶಯದಿಂದ ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಂಗಳೂರು ವಿವಿ ಈ ನಿರ್ಣಯ ತೆಗೆದುಕೊಂಡಿದೆ.

ವಿಶೇಷ ಕೋಟಾದಡಿ ಪ್ರತಿ ಪಿಜಿ ಕೋರ್ಸ್ ನಲ್ಲೂ ಒಂದು ಸೀಟು ಮೀಸಲಿಡುವ ಪ್ರಸ್ತಾವನೆಗೆ ಸರ್ವಾನುಮತದ ಒಪ್ಪಿಗೆ ನೀಡಿದ ಶೈಕ್ಷಣಿಕ ಮಂಡಳಿ, ಈ ರೀತಿ ಪ್ರವೇಶ ಪಡೆದ ಬಳಿಕ ಲೈಂಗಿಕ ಅಲ್ಪಸಂಖ್ಯಾತರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುವುದು ಶಿಕ್ಷಾರ್ಹವಾಗಿದೆ. ಇಂತಹ ಪ್ರಕರಣಗಳಿಗೆ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರನ್ನೇ ಹೊಣೆಗಾರರಾಗಿಸಲು ಮಂಡಳಿ ನಿರ್ಧರಿಸಿತು.

ಪಿಜಿ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ಟ್ರಾನ್ಸ್ ಜೆಂಡರ್ ಗಳಿಗೆ ಪ್ರತ್ಯಾಕ ವಿರಾಮ ಕೊಠಡಿ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಲಾಗುವುದು ಎಂದು ಬೆಂಗಳೂರು ವಿವಿ ಕುಲಪತಿ ಎನ್ ಪ್ರಭುದೇವ ತಿಳಿಸಿದ್ದಾರೆ.

ವಿವಿ ಕಳೆದ ವರ್ಷದಿಂದ ಜಾರಿ ಮಾಡಿರುವ ಕೇಂದ್ರಿಕೃತ ಸ್ನಾತಕೋತ್ತರ ಪದವಿ ಪ್ರವೇಶ ಸಂಬಂಧದ ಅರ್ಜಿಯಲ್ಲಿ ಲಿಂಗ ಎಂಬ ಕಲಂನಲ್ಲಿ ಪುರುಷ, ಮಹಿಳೆ ಅಥವಾ ಇತರೆ ಎಂದು ನಮೂದಿಸಲು ಅವಕಾಶ ಕಲ್ಪಿಸಿದೆ. ಮುಂದುವರಿದ ಪ್ರಯತ್ನವಾಗಿ ಪ್ರವೇಶದಲ್ಲಿ ಈ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಲಾಗುತ್ತಿದೆ ಎಂದು ಕುಲಪತಿ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X