ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮೀಜಿಗಳನ್ನು ನಪುಂಸಕರನ್ನಾಗಿ ಮಾಡಿ

By Mrutyunjaya Kalmat
|
Google Oneindia Kannada News

Karnataka-Bangalore Map
ದಾವಣಗೆರೆ, ಜು. 26 : ಅಜನ್ಮ ಬ್ರಹ್ಮಚರ್ಯ ಎನ್ನುವುದು ಶುದ್ಧ ಸುಳ್ಳು. ವೈಜ್ಞಾನಿಕ ಮತ್ತು ಅಪ್ರಾಕೃತಿಕ. ಯಾವುದೇ ಆರೋಗ್ಯವಂತ ವ್ಯಕ್ತಿಯೂ ಜೀವನಪರ್ಯಂತ ಬ್ರಹ್ಮಚರ್ಯ ಪಾಲಿಸುವುದು ಅಸಾಧ್ಯ. ತಮ್ಮ ಮಠ ಸೇರಿದಂತೆ ಯಾವ ಮಠ, ಅಶ್ರಮದಲ್ಲೂ ಅಜನ್ಮ ಬ್ರಹ್ಮಚರ್ಯ ಎಂಬುದು ಉಳಿದಿದೆಯೇ ? ಹೀಗೆ ನೇರವಾಗಿ ವಿವಾದಾಸ್ಪದ ಪ್ರಶ್ನೆ ಕೇಳಿದ್ದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ.

ದಾವಣಗೆರೆಯ ಅಭಿನವ ರೇಣುಕಾಚಾರ್ಯ ಮಂದಿರದಲ್ಲಿ ನಡೆದ ಶ್ರೀ ಜಗದ್ಗುರು ಚನ್ನಬಸವ ರಾಜದೇಶಿಕೇಂದ್ರ ಸ್ವಾಮೀಜಿಗಳು ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಹುಟ್ಟಿನಿಂದ ಸಾಯುವವರೆಗೆ ಬ್ರಹ್ಮಚರ್ಯ ಅಸಾಧ್ಯ. ಸ್ವಾಮೀಜಿಗಳು ಬ್ರಹ್ಮಚರ್ಯವನ್ನು ಪಾಲಿಸುವುದು ಕಡ್ಡಾಯವಾದರೆ ಸ್ವಾಮೀಜಿ ಸ್ಥಾನಕ್ಕೆ ನೇಮಕಗೊಳ್ಳುವವರನ್ನು ಮೊದಲು ನಪುಂಸಕರನ್ನಾಗಿ ಮಾಡಬೇಕು ಎಂದು ಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.

ಹೊಟ್ಟೆಯಲ್ಲಿರುವ ಮಲ-ಮೂತ್ರದಂತೆ ದೇಹದ ಕೊಳೆಯಾದ ಅಂಡಾಣು-ವಿರ್ಯಾಣುವನ್ನು ಹೊರಹಾಕಲೇಬೇಕು. ಹಿಮಾಲಯದ ಗವಿಗಳಲ್ಲಿ ತಪಸ್ಸಿಗೆ ಕೂತವರಿಗೆ ಹೊಯ್ದಾಟ, ದ್ವಂದ್ವತೆ ಇರುವಾಗ ವೈಭೋಗದಲ್ಲಿರುವ ಮಠಾಧೀಶರಿಂದ ಬ್ರಹ್ಮಚರ್ಯ ನಿರೀಕ್ಷೀಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X