ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾತಕಿ ಅಬು ಸಲೇಂ ಮತ್ತೊಂದು ಜೈಲಿಗೆ ಶಿಫ್ಟ್

By Mahesh
|
Google Oneindia Kannada News

ಮುಂಬೈ, ಜು.25: ಶನಿವಾರ ನಡೆದ ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾಗಿದ್ದ ಭೂಗತ ಪಾತಕಿ ಅಬುಸಲೇಂರನ್ನು ಅರ್ಥರ್ ರೋಡ್ ಜೈಲಿನಿಂದ ತಲೋಜಾ ಸೆಂಟ್ರಲ್ ಜೈಲಿಗೆ ವರ್ಗಾಯಿಸಲಾಗಿದೆ ಎಂದು ಸಲೇಂ ಪರ ವಕೀಲ ಸಾಬಾ ಖುರೇಷಿ ಹೇಳಿದ್ದಾರೆ.

ಭೂಗತ ಅಪರಾಧಿಗಳ ಕಾರಸ್ಥಾನವೆಂದೆ ಕುಖ್ಯಾತಿ ಪಡೆದಿರುವ ಅರ್ಥರ್ ರೋಡ್ ಜೈಲು ಶನಿವಾರ ಕುಖ್ಯಾತ ಭೂಗತ
ಪಾತಕಿಗ ಅಬುಸಲೇಂ(42)ರನ್ನು ಗುರಿಯಾಗಿಸಿಕೊಂಡು ದಾವೂದ್ ಬಂಟ ಮುಸ್ತಾಫಾ ಮಜ್ನು ನಡೆಸಿದ ದಾಳಿಯಿಂದಾಗಿ ಸಲೇಂ ಸ್ವಲ್ಪದರಲ್ಲೇ ಪಾರಾದನಾದರೂ ಗಾಯಗೊಂಡಿದ್ದನು.

Abu Salem
ಪ್ರಾಥಮಿಕ ಮಾಹಿತಿಗಳ ಪ್ರಕಾರ ಅಬುಸಲೇಂ ಮುಂಜಾನೆ ಉಪಹಾರಕ್ಕೆ ತೆರಳುತ್ತಿದ್ದ ವೇಳೆ ಹರಿತವಾದ ಬ್ಲೇಡ್‌ನಿಂದ ದಾಳಿ ನಡೆದಿದೆ. ಘಟನೆಯಲ್ಲಿ ಸಲೇಂ ತೀವ್ರವಾಗಿ ಗಾಯಗೊಂಡಿದ್ದನು. ದಾಳಿ ಸುದ್ದಿ ತಿಳಿಯುತ್ತಿದ್ದಂತೆಯೇ, ಆಸ್ಪತ್ರೆಯ ಆವರಣದಲ್ಲಿದ್ದ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದರು.

ಈಗ ತಲೆಮರೆಸಿಕೊಂಡಿರುವ ಇನ್ನೋರ್ವ ಪಾತಕಿ ಟೈಗರ್ ಮೆಮನ್‌ನ ನಿಕಟವರ್ತಿಯಾಗಿದ್ದ ದೊಸ್ಸಾ ಮೊದಲಿನಿಂದಲೂ ಸಲೇಂ ವಿರುದ್ಧಕಿಡಿಕಾರುತ್ತಿದ್ದ. ಮೆಮನ್ ಮೇಲೆ ಟಾಡಾ ಕಾಯ್ದೆ ಹಾಗೂ ಪೋರ್‌ಬಂದರ್, ಜಾಮ್‌ನಗರ್ ಹಾಗೂ ವಾಲ್ಸಾದ್ ಶಸ್ತ್ರಾಸ್ತ್ರ ಕಳ್ಳಸಾಗಾಟ ಮಾಡಿದ ಪ್ರಕರಣ ದಾಖಲಾಗಿದೆ.

ಅಬು ಸಲೇಂ 93ರ ಬಾಂಬ್ ಸ್ಫೋ ಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದು, 2005ರಲ್ಲಿ ಪೋರ್ಚುಗಲ್‌ನಿಂದ ಗಡೀಪಾರಾಗಿ ಇದೀಗ ಟಾಡಾ ಕಾನೂನಿನಡಿಯಲ್ಲಿ ಬಂಧಿಯಾಗಿದ್ದಾನೆ. ಇದಲ್ಲದೇ ಲಖನೌ ಹಾಗೂ ಹೈದ್ರಾಬಾದ್‌ನಲ್ಲಿ ಪಾಸ್‌ಪೋರ್ಟ್ ಪೋರ್ಜರಿ ನಡೆಸಿದ ಆರೋಪ ಕೂಡ ಸಲೇಂ ಮೇಲಿದೆ.

ದೇಶದ ಕುಖ್ಯಾತ ಗ್ಯಾಂಗ್‌ಸ್ಟಾರ್‌ಗಳು ಬಂಧಿಯಾಗಿರುವ ಅರ್ಥರ್ ರೋಡ್ ಜೈಲಿನಲ್ಲಿ ಮುಂಬೈ ದಾಳಿಯಲ್ಲಿ ಬದುಕುಳಿದ ಜೀವಂತ ಆರೋಪಿ ಅಜ್ಮಲ್ ಕಸಬ್‌ನನ್ನೂ ಬಂಧಿಸಿಡಲಾಗಿದೆ. ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವುದರಿಂದ ಸಾಕಷ್ಟು ಭದ್ರತೆ ಒದಗಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X