ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಕ ದಾಟಿದ ಅಮೆರಿಕದ ದಿವಾಳಿ ಬ್ಯಾಂಕುಗಳ ಸಂಖ್ಯೆ

By Mahesh
|
Google Oneindia Kannada News

103 US banks collapse in under 7 months
ವಾಷಿಂಗ್ಟನ್, ಜು.25: ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಇದೀಗಷ್ಟೇ ಚೇತರಿಸಿಕೊಳ್ಳುತ್ತಿರುವ ಅಮೆರಿಕದಲ್ಲಿ ಜುಲೈ23ರ ಶುಕ್ರವಾರದವರಗೆ ಈ ವರ್ಷ 103ಬ್ಯಾಂಕುಗಳು ಮುಚ್ಚಿವೆ.

ಶುಕ್ರವಾರ ಅಧಿಕಾರಿಗಳು 7 ಬ್ಯಾಂಕ್ ಗಳನ್ನು ಮುಚ್ಚಿಸಿದ್ದಾರೆ. ಫ್ಲೋರಿಡಾದ ಸ್ಟರ್ಲಿಂಗ್ ಬ್ಯಾಂಕ್ ಆಫ್ ಲಾಂಟಾನ, ಜಾರ್ಜಿಯಾದ ಕ್ರೆಸೆಂಟ್ ಬ್ಯಾಂಕ್ ಮತ್ತು ಟ್ರಸ್ಟ್ ಕಂಪೆನಿ ಆಫ್ ಜಾಸ್ಪರ್, ದಕ್ಷಿಣ ಕೆರೊಲಿನಾದ ವಿಲಿಯಮ್ಸ್ ಬರ್ಗ್ ಫರ್ಸ್ಟ್ ನ್ಯಾಷನಲ್ ಬ್ಯಾಂಕ್ ಆಫ್ ಕಿಂಗ್ಸ್ಟ್ರೀ, ಕನಾಸ್ ನ ಥಂಡರ್ ಬ್ಯಾಂಕ್ ಆಪ್ ಸಿಲ್ವನ್ ಗ್ರೋವ್ ಹಾಗೂ

ಮಿನ್ನೆಸೋಟಾದ ಕಮ್ಯುನಿಟಿ ಸೆಕ್ಯುರಿಟಿ ಬ್ಯಾಂಕ್ ಆಫ್ ನ್ಯೂ ಪೆರುಗ್ವೇ, ಲಾಸ್ ವೆಗಾಸ್ ನ ಸವತ್ ವೆಸ್ಟ್ ಯುಎಸ್ಎ ಬ್ಯಾಂಕ್ ಆಫ್ ಲಾಸ್ ವೆಗಾಸ್, ಒರೆಗಾನ್ ನ ನೆವಡಾ ಅಂಡ್ ಹೋಮ್ ವ್ಯಾಲಿ ಬ್ಯಾಂಕ್ ಆಪ್ ಕೇವ್ ಜಂಕ್ಷನ್ ನ್ನು ಮುಚ್ಚಿಸಲಾಗಿದೆ ಎಂದು ಫೆಡರಲ್ ಡೆಪಾಸಿಟ್ ಇನ್ಸುರೆನ್ಸ್ ಕಾರ್ಪೊರೇಷನ್ (FDIC)ತಿಳಿಸಿದೆ.

ಈ ಬ್ಯಾಂಕುಗಳಲ್ಲಿ ಕ್ರೆಸೆಂಟ್ ಬ್ಯಾಂಕು ಅತೀ ದೊಡ್ಡದಾಗಿದ್ದು 11 ಶಾಖೆಗಳನ್ನು ಹೊಂದಿದ್ದು 1.01ಬಿಲಿಯನ್ ಡಾಲರ್ ಆಸ್ತಿ ಹಾಗೂ 965ಮಿಲಿಯ ಡಾಲರ್ ಠೇವಣಿಗಳನ್ನು ಹೊಂದಿತ್ತು. ಅತಿ ಚಿಕ್ಕ ಬ್ಯಾಂಕ್ ಆದ ಥಂಡರ್ ಬ್ಯಾಂಕ್ ಎರಡು ಶಾಖೆಗಳನ್ನೂ 32.6 ಮಿಲಿಯನ್ ಡಾಲರ್ ಆಸ್ತಿ ಹಾಗೂ 28.5 ಮಿಲಿಯ ಡಾಲರ್ ಠೇವಣಿಗಳನ್ನೂ ಹೊಂದಿತ್ತು.

ಕಾರ್ಪೊರೇಷನ್ ಪ್ರಕಾರ ಈ 7ಬ್ಯಾಂಕುಗಳ ಮುಚ್ಚುವಿಕೆಯಿಂದ ಇನ್ಸೂರೆನ್ಸ್ ನಿಧಿಗೆ 431ಮಿಲಿಯನ್ ಡಾಲರ್ ಗಳಷ್ಟು ನಷ್ಟವಾಗಿದೆ. ಕಾರ್ಪೊರೇಷನ್ ಪ್ರತಿ ವ್ಯಕ್ತಿಗತ ಠೇವಣಿಗಳಿಗೆ 2,50,000 ಡಾಲರ್ ಗಳ ವರೆಗೆ ವಿಮಾ ರಕ್ಷೆ ಒದಗಿಸಿದ್ದು, 2010 ರಿಂದ 2014 ರ ವರೆಗೆ ಬ್ಯಾಂಕ್ ಗಳ ವಿಫಲತೆಯಿಂದ 60 ಬಿಲಿಯನ್ ಡಾಲರ್ ಗಳಷ್ಟು ನಷ್ಟ ಆಗಲಿದೆ ಎಂದು ಅಂದಾಜಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X