ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮಾಟಿಪುರದ ಕೊಂಪೆಯಿಂದ ಮರಳಿದ ಯುವತಿ

By Mrutyunjaya Kalmat
|
Google Oneindia Kannada News

Sex Worker
ಕೋಲಾರ, ಜು. 24 : ಮುಂಬೈಯ ಕಾಮಾಟಿಪುರ ಜಾಲ ಕೋಲಾರ ಜಿಲ್ಲೆಯಲ್ಲೂ ಸಕ್ರಿಯವಾಗಿರುವ ಸಂಗತಿ ಹೊರಬಿದ್ದಿದೆ. ವೈಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ತಾಲ್ಲೂಕಿನ ಶಿಂಗೂಂಡಹಳ್ಳಿ ಯುವತಿಯನ್ನು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಮಾರ್ಚ್ ನಲ್ಲಿ 19 ವರ್ಷದ ಯುವತಿ ಕಾಣೆಯಾಗಿರುವ ಕುರಿತು ಆಕೆಯ ಪೋಷಕರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರಿಗೆ ಬಾತ್ಮಿದಾರನೊಬ್ಬ ಮಾಹಿತಿ ನೀಡಿ ಕಾಣೆಯಾಗಿರುವ ಯುವತಿ ಮುಂಬೈನ ಕಾಮಾಟಿಪುರ ಸೇರಿದ್ದಾಳೆಂದು ಖಚಿತಪಡಿಸಿದ್ದ.

ಮಾಹಿತಿಯ ಜಾಡು ಹಿಡಿದು ಕಾರ್ಯಾಚರಣೆ ಮುಂದುವರೆಸಿದ್ದ ಠಾಣೆ ಸಬ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಮುಂಬೈಗೆ ತೆರಳಿ ಕಾಮಾಟಿಪುರದ ಮಾಲೀಕರ ವಿರೋಧದ ನಡುವೆಯೂ ಶಿಂಗೊಂಡಹಳ್ಳಿಯ ಯುವತಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಇದೇ ಜಿಲ್ಲೆಯ ಅನೇಕ ಠಾಣೆಯಲ್ಲಿ ಯುವತಿಯ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X