ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಿವಿಂಕ್ ಶಾಸ್ತ್ರಿ ಆಸ್ತಿ ಕಡಿಮೆ ಬೆಲೆಗೆ ಹರಾಜು

By Mahesh
|
Google Oneindia Kannada News

ViniVinc Sastry
ಹೊಸಕೋಟೆ, ಜು.23:ವಿನಿವಿಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಕೋಟೆ ಸಮೀಪದಲ್ಲಿರುವ ಜಮೀನು ಹರಾಜು ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಇಂದು ಮಾರುಕಟ್ಟೆ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಸೈಟು ಮಾರಾಟವಾಗಿದೆ.

ಹೊಸಕೋಟೆ ತಾಲೂಕಿನ ಏಕರಾಜಪುರ ಸಮೀಪದ 26 ಎಕರೆ ಭೂಮಿಯನ್ನು ಬೆಂಗಳೂರಿನ ಜಿಂದಾಲ್ ಸ್ಟೀಲ್ ಕಂಪೆನಿ 4.15 ಕೋಟಿ ರು.ಗೆ ಹರಾಜು ಕೂಗಿದೆ. ಯಲಹಂಕ ಸಮೀಪದ ಕೋಗಿಲು ಗೇಟ್ ಬಳಿಯ 36 ನಿವೇಶನಗಳ ಹರಾಜು ನಡೆಸಲಾಯಿತು. ಪ್ರತಿ ನಿವೇಶನಕ್ಕೂ ಸರಾಸರಿ 18 ಲಕ್ಷ ರು ಸಿಕ್ಕಿದೆ.

ವಿನಿವಿಂಕ್ ಶಾಸ್ತ್ರಿ ಒಡೆತನದ ಹೊಸಕೋಟೆಯ 26 ಎಕರೆ ಪ್ರದೇಶವನ್ನು 23 ಕೋಟಿ ರು ನಿಗದಿ ಮಾಡಿ ಹರಾಜ್ ಬಿಡ್ ಕೂಗಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ತಾಲೂಕು ಕಚೇರಿ ಆವರಣದಲ್ಲಿ ನಡೆದ ಬಿಡ್ಡಿಂಗ್ ನಲ್ಲಿ ಜಿಂದಾಲ್ ಸಂಸ್ಥೆ ಸೇರಿದಂತೆ 5 ಪ್ರಮುಖ ಕಂಪೆನಿಗಳು ಭಾಗವಹಿಸಿದ್ದವು.

ಈ ಭಾಗದ ಪ್ರತಿ ಎಕರೆ ಭೂಮಿಗೆ 35 ರಿಂದ 45 ಲಕ್ಷ ರು ಮಾರುಕಟ್ಟೆ ಬೆಲೆ ಇದೆ. ಆದರೆ, ಇಂದು ನಡೆದ ಹರಾಜಿನಲ್ಲಿ ಪ್ರತಿ ಎಕರೆಗೆ 6.26 ಲಕ್ಷರುಗೆ ಬಿಡ್ ನಡೆಸಲಾಯಿತು. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶಿವಪ್ರಸಾದ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್ .ಕೆ ರಾಜು ನೇತೃತ್ವದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಯಿತು.

ಹರಾಜು ಪ್ರಕ್ರಿಯೆಗೆ ತಡೆಕೋರಿ ಸತೀಶ್ ಪೈ ಹಗೂ ಕೃಷ್ಣಮೂರ್ತಿ ಎಂಬುವರು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು . ಆದರೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X