ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರೀಯ ವಿವಿ : ಜು.25ಕ್ಕೆ ಸಿಇಟಿ

By Mrutyunjaya Kalmat
|
Google Oneindia Kannada News

Gulbarga Map
ಗುಲ್ಬರ್ಗಾ, ಜು. 23 : ವಿವಿಧ ಕೋರ್ಸ್ ಗಳ ಪ್ರವೇಶಕ್ಕಾಗಿ ಗುಲ್ಬರ್ಗಾದಲ್ಲಿರುವ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯ ಇದೇ ತಿಂಗಳ 25 ರಂದು ಗುಲ್ಬರ್ಗಾ, ಮೈಸೂರು, ಬೆಂಗಳೂರು, ಧಾರವಾಡ ಮತ್ತು ಬೆಳಗಾವಿಯಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸಲಿದೆ.

ವಿಶ್ವವಿದ್ಯಾಲಯದ ವೆಬ್ ಸೈಟ್ ನಲ್ಲಿ ವೇಳಾಪಟ್ಟಿ ಮತ್ತಿತರ ವಿವರಗಳ ಲಭ್ಯವಿದೆ. ಯಾರಿಗಾದರೂ ಪ್ರವೇಶ ತಲುಪದೆ ಇದ್ದರೆ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ವಿವಿ ಪ್ರಕಟಣೆ ತಿಳಿಸಿದೆ. ಬಿಎ(ಆನರ್ಸ್) ಇಂಟಗ್ರೇಟಿಡ್ ಕೋರ್ಸ್ ಗಳಿಗೆ ಮತ್ತು ಎಂಎಸ್ಸಿ(ಪ್ರಾದೇಶಿಕ ಅಭಿವೃದ್ಧಿಯಲ್ಲಿ ಭೂಬಳಕೆ) ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ಇರುವುದಿಲ್ಲ.

ಈ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸುವವರು ಮತ್ತು ಸಿಇಟಿ ಪರೀಕ್ಷೆ ತೆಗೆದುಕೊಂಡರುವವರು ಇದೇ ತಿಂಗಳ 29 ರಂದು ವಿಶ್ವವಿದ್ಯಾಲಯಗಳಲ್ಲಿ ಕೌನ್ಸ್ ಲಿಂಗ್ ಗೆ ಹಾಜರಾಗಬೇಕು. ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 3ರಂದು ಪ್ರಕಟಿಸಲಾಗುತ್ತದೆ. ಮಾಹಿತಿಗೆ ಮೊಬೈಲ್ ಸಂಖ್ಯೆ 94816 36302 ಸಂಪರ್ಕಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X