• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸೆರೆ

By * ಕೆ.ಆರ್ ಸೋಮನಾಥ್, ಶಿವಮೊಗ್ಗ
|

ಶಿವಮೊಗ್ಗ, ಜು.23: ತಾನು ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಂದು ಹೇಳಿಕೊಂಡು ಮಹಿಳಾ ಅಧಿಕಾರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಲಕ್ಕವಳ್ಳಿ ಮೂಲದ ಸಿವಿಲ್ ಕಾಂಟ್ರ್ಯಾಕ್ಟರ್ ಶ್ರೀನಿವಾಸ್ ಎಂಬಾತನನ್ನು ಕೋಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವಸಂತ್‌ಕುಮಾರ್ ಇಂದು ಬೇಟೆಯಾಡಿದ್ದಾರೆ.

ತಾನು ಲೋಕಾಯುಕ್ತ ಇನ್ಸ್‌ಪೆಕ್ಟರ್. ಕಳೆದ ನಾಲ್ಕೈದು ದಿನದಿಂದ ನಿಮ್ಮ ಮೇಲೆ ನಿಗಾ ಇಟ್ಟಿದ್ದೇನೆ. ನಿಮಗೆ ನಾಲ್ಕೈದು ಮನೆಗಳಿವೆ. ನಾಳೆ ಬೆಂಗಳೂರಿನಿಂದ ಲೋಕಾಯುಕ್ತ ದಾಳಿ ತಂಡ ಬಂದು ದಾಳಿ ಮಾಡಲಿದೆ.

ಇದನ್ನು ತಪ್ಪಿಸಬೇಕಾದರೆ ನಾಲ್ಕು ಬಾಕ್ಸ್ ಸ್ಕಾಚ್ ವಿಸ್ಕಿ ನೀಡಬೇಕು ಹಾಗೂ50 ಸಾವಿರ ರು. ನಗದು ಹಣವನ್ನು ಕೊಡಬೇಕೆಂದು ಮೂಲತಃ ಸಿವಿಲ್ ಕಂಟ್ರಾಕ್ಟರ್ ಆಗಿರುವ ಶ್ರೀನಿವಾಸ್ ಅಬಕಾರಿ ಇಲಾಖೆಯ ಪ್ರಭಾರ ಮ್ಯಾನೇಜರ್ ರಾಧಾಬಾಯಿಯವರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ.

ಅನುಮಾನ ಬಂದ ಮಹಿಳಾ ಅಧಿಕಾರಿ ರಾಧಾಬಾಯಿ ಕೋಟೆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವಸಂತ್‌ಕುಮಾರ್‌ರವರಿಗೆ ಮಾಹಿತಿ ನೀಡಿದರು. ಇವರ ನಿರ್ದೇಶನದಂತೆ ನಕಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಶ್ರೀನಿವಾಸ್‌ನನ್ನು ರಾಧಾಬಾಯಿಯವರು ನೆಹರು ಕ್ರೀಡಾಂಗಣಕ್ಕೆ ಬರಲು ತಿಳಿಸಿದ್ದಾರೆ.

ಅಲ್ಲಿ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಭರವಸೆಯನ್ನು ಪಡೆದುಕೊಂಡ ನಕಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೆಹರು ಕ್ರೀಡಾಂಗಣಕ್ಕೆ ಬಂದು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೆಚ್ಚಿನ ತನಿಖೆ ಮುಂದುವರೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X