ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಿಂಕರ ಶಿಕಾರಿಪುರ ಹರಿಹರೇಶ್ವರ ಇನ್ನಿಲ್ಲ

By * ಶಾಮಿ
|
Google Oneindia Kannada News

Shikaripura Harihareshwara is nomore
ಮೈಸೂರು, ಜು.22: ಮೈಸೂರು, ಜು.22: ಕನ್ನಡ ಕಿಂಕರ, ಕನ್ನಡಿಗರ ಬಂಧು ಶಿಕಾರಿಪುರ ಹರಿಹರೇಶ್ವರ ಇನ್ನಿಲ್ಲ. ಗುರುವಾರ ರಾತ್ರಿ ಮೈಸೂರಿನ ಅವರ ಮನೆಯಲ್ಲಿ ರಾತ್ರಿ 9 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನಹೊಂದಿದರು.

ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ ನಾಗಲಕ್ಷ್ಮಿ ಹರಿಹರೇಶ್ವರ ಹಾಗೂ ಅಮೆರಿಕಾದಲ್ಲಿ ನೆಲೆಯಾಗಿರುವ ಪುತ್ರಿಯರಾದ ನಂದಿನಿ ಮತ್ತು ಸುಮನಾ ಅವರನ್ನು ಹರಿಹರೇಶ್ವರ ಅವರು ಅಗಲಿದ್ದಾರೆ.

ಅಮೆರಿಕಾದಲ್ಲಿ 20 ವರ್ಷಗಳ ಕಾಲ ವಾಸವಾಗಿದ್ದ ಅವರು ಆರು ವರ್ಷಗಳ ಹಿಂದಷ್ಟೆ ತವರೂರು ಕರ್ನಾಟಕಕ್ಕೆ ಪತ್ನಿ ಸಮೇತ ಮರಳಿದ್ದರು. ಮೈಸೂರಿನ ಸರಸ್ವತಿಪುರಂನಲ್ಲಿ ವಾಸವಾಗಿದ್ದರು. ಅವರ ಹಠಾತ್ ಅಗಲಿಕೆ ಜಗತ್ತಿನಾದ್ಯಂತ ಇರುವ ಅವರ ಅಪಾರ ಅಭಿಮಾನಿಗಳನ್ನು ಶೋಕ ಸಾಗರಕ್ಕೆ ದೂಡಿದೆ.

ಅಮೆರಿಕಾದಲ್ಲಿದ್ದು ಕನ್ನಡಿಗರೇ ನಿತ್ಯ ಕನ್ನಡವೇ ಸತ್ಯ ಎಂದು ಬಾಳಿಬದುಕಿದ್ದ ವಿರಳಲ್ಲಿ ವಿರಳ ಕನ್ನಡಿಗ ಎಂಬ ಗೌರವಕ್ಕೆ ಹರಿಹರೇಶ್ವರ ಅವರು ಪಾತ್ರರಾಗಿದ್ದರು. ಕೆಲಕಾಲ ಅಮೆರಿಕದಲ್ಲಿ 'ಅಮೆರಿಕನ್ನಡ' ಎಂಬ ಪತ್ರಿಕೆಯನ್ನು ನಡೆಸಿದ್ದರು. ಸುಮಾರು ಇಪ್ಪತ್ತು ಕೃತಿಗಳನ್ನು ರಚಿಸಿರುವುದಲ್ಲದೆ ಅಸಂಖ್ಯಾತ ಬರಹಗಾರರಿಗೆ ಪ್ರೋತ್ಸಾಹ, ಮಾರ್ಗದರ್ಶನ ಮಾಡುತ್ತಿದ್ದ ಹರಿ ಕನ್ನಡಿಗರ ಆಸ್ತಿ ಎನಿಸಿದ್ದರು.

2000ನೇ ಇಸವಿಯಲ್ಲಿ ದಟ್ಸ್ ಕನ್ನಡ ಆರಂಭವಾದಾಗ ವಾಹಿನಿಯ ಪ್ರಥಮ ಅಂಕಣ ಹೊಂಬೆಳಕ ಹೊನಲು ನಿಭಾಯಿಸುತ್ತಿದ್ದ ಅವರು ನೂರಾರು ಲೇಖನಗಳನ್ನು ಬರೆದಿದ್ದರು. ಹರಿ ಅವರ ನಿಧನಕ್ಕೆ ದಟ್ಸ್ ಕನ್ನಡ ಸಿಬ್ಬಂದಿ, ಆಡಳಿತ ವರ್ಗ ಅತೀವ ಸಂತಾಪ ವ್ಯಕ್ತಪಡಿಸಿದೆ.

ಹರಿ ಅವರ ಇಚ್ಛೆಯಂತ ಅವರ ದೇಹವನ್ನು ಮೈಸೂರಿನ ಜೆಎಸ್ಎಸ್ ಕಾಲೇಜಿಗೆ ದಾನ ಮಾಡಲಾಗಿದೆ. ಶುಕ್ರವಾರ 2 ಗಂಟೆಯವರೆಗೆ ಅಂತಿಮ ದರ್ಶನಕ್ಕಾಗಿ ಅವರ ದೇಹವನ್ನು ಸರಸ್ವತೀಪುರಂನಲ್ಲಿರುವ ಅವರ ಮನೆಯಲ್ಲಿ ಇಟ್ಟಿರಲಾಗುತ್ತಿದೆ.

ಹಲವು ಹತ್ತು ಪುರಸ್ಕಾರಗಳಿಗೆ ಭಾಜನರಾಗಿದ್ದ ಹರಿ ರಾಜ್ಯೋತ್ಸವ ಗೌರವಕ್ಕೆ ಪಾತ್ರರಾದ ಮೊದಲ ಅಮೆರಿಕನ್ನಡಿಗರಾಗಿದ್ದರು. ದಟ್ಸ್ ಕನ್ನಡ ಅಂತರ್ಜಾಲ ತಾಣದ ಮೊದಲ ಓದುಗ ಹಾಗೂ ಮೊಟ್ಟಮೊದಲ ತಜ್ಞ ಬರಹಗಾರ ಎಂಬ ನಮ್ಮಗಳ ಪ್ರೀತಿಗೆ ಪಾತ್ರರಾದವರು ಶಿಕಾರಿಪುರ ಹರಿಹರೇಶ್ವರ.

ಇಸವಿ 2000ದಲ್ಲಿ ನಮ್ಮ ಪತ್ರಿಕೆ ಅಂತರ್ಜಾಲದಲ್ಲಿ ರಂಗಪ್ರವೇಶ ಮಾಡಿದಾಗ ಜೋಗುಳ ಹಾಡಿ ಬರಮಾಡಿಕೊಂಡವರು ಅವರು. ಒಟ್ಟು ಇಪ್ಪತ್ತೇಳು ವರ್ಷದ ವಿದೇಶ ವಾಸಕ್ಕೆ ಗುಡ್ ಬೈ ಹೇಳಿ ಮೈಸೂರಿಗೆ ಹಿಂತಿರುಗಿದ ಸಂದರ್ಭದಲ್ಲಿ ಕೊಂಚಕಾಲ ಮಧ್ಯಂತರ ಪಡೆದುದ ಹೊರತುಪಡಿಸಿದರೆ ಅವರ ಲೇಖನಿಗೂ ದಟ್ಸ್ ಕನ್ನಡ ವಾಚಕವರ್ಗಕ್ಕೂ ಬಿಡಿಸಲಾಗದ ನಂಟು. ನಾನಿನ್ನು ಹೋಗಿಬರಲೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X