ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂ ಹಗರಣ : ರಾಮ ರಾಜು ಇತರರಿಗೆ ಜಾಮೀನು

By Prasad
|
Google Oneindia Kannada News

Andhra high court, Hyderabad
ಹೈದರಾಬಾದ್, ಜು. 20 : ಸತ್ಯಂ ಹಗರಣದ ಸಹ ಆರೋಪಿ ಬಿ ರಾಮ ರಾಜು ಅವರಿಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ಜಾಮೀನು ನೀಡಿದೆ. ರಾಮ ರಾಜು ಅವರು ಹಗರಣದ ಪ್ರಮುಖ ಪಾಲುದಾರ ಬಿ ರಾಮಲಿಂಗ ರಾಜು ಅವರ ಸಹೋದರ.

ಇದೇ ಹಗರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಾದ ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್, ಹಣಕಾಸು ವಿಭಾಗದ ಇಬ್ಬರು ಉದ್ಯೋಗಿಗಳಾದ ಶ್ರೀಶೈಲಂ ಮತ್ತು ವೆಂಕಟಪತಿ ರಾಜು, ಹಾಗು ಇತರ ಮೂವರು ಮಾಜಿ ಉದ್ಯೋಗಿಗಳಿಗೆ ಕೂಡ ಜುಲೈ 20ರಂದು ಆಂಧ್ರ ಹೈಕೋರ್ಟ್ ಜಾಮೀನು ನೀಡಿದೆ.

ಈ ಆರೋಪಿಗಳಿಗೆಲ್ಲ ಜಾಮೀನು ದೊರೆತರೆ ಎಲ್ಲ ದಾಖಲೆಗಳನ್ನು ನಾಶ ಮಾಡಬಹುದೆಂದು ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಗೋಪಾಲ ಸುಬ್ರಮಣಿಯಂ ಅವರು ವಾದಿಸಿದರೂ ಹೈಕೋರ್ಟ್ ಎಲ್ಲರಿಗೂ ಜಾಮೀನು ನೀಡಿದೆ.

ಬಿ ರಾಮಲಿಂಗ ರಾಜು ಅವರು ಸುಳ್ಳು ಲೆಕ್ಕಪತ್ರ ತೋರಿಸಿ ಏಳು ಸಾವಿರ ಕೋಟಿ ರು.ಗಳಷ್ಟು ಹಣವನ್ನು ಗುಳುಂ ಮಾಡಿ ತಾನೇ ಕಟ್ಟಿದ ಕಂಪನಿಗೆ ಮೋಸ ಮಾಡಿದ್ದರು. ಭಾರತದ ಇತಿಹಾಸದಲ್ಲೇ ಇಷ್ಟು ದೊಡ್ಡ ಮೋಸ ಕಾರ್ಪೋರೇಟ್ ವಲಯದಲ್ಲಿ ನಡೆದಿರಲಿಲ್ಲ. ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿ ರಾಮ ರಾಜುವನ್ನು, ರಾಮಲಿಂಗ ರಾಜು ತನ್ನೆಲ್ಲ ತಪ್ಪುಗಳನ್ನು ಒಪ್ಪಿಕೊಂಡ ಮೇಲೆ 2009ರಲ್ಲಿ ಬಂಧಿಸಲಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X