ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋಗೆ ಗುಡ್ ಬೈ;ವೆಲ್ ಕಮ್ ಟು ನ್ಯಾನೋ

By Mahesh
|
Google Oneindia Kannada News

Tata Nano cars to replace autorickshaws in Bangalore
ಬೆಂಗಳೂರು, ಜು.19:ಆಟೋ ಮೀಟರ್ ದರ ಏರಿಕೆಗೆ ಒತ್ತಾಯಿಸಿ,ಡ್ರೈವರ್ ಗಳು ಆಟೋ ಓಡಿಸೋದು ಬಿಟ್ಟು ಇಂದು ಪ್ರತಿಭಟನೆಗೆ ಇಳಿದಿರುವ ಬೆನ್ನಲ್ಲೇ ಬೆಂಗಳೂರಿನ ಆಟೋ ಸಮಸ್ಯೆ ನಿವಾರಣೆಗೆ ಬಿಎಂಟಿಸಿ ಒಂದು ಮಾಸ್ಟರ್ ಪ್ಲಾನ್ ಮಾಡಿದೆ. ಆಟೋರಿಕ್ಷಾವನ್ನು ಬದಲಿಸಿ, ಟಾಟಾ ನ್ಯಾನೋವನ್ನು ಸಿಟಿ ಟ್ಯಾಕ್ಸಿ ಮಾದರಿಯಲ್ಲಿ ರಸ್ತೆಗಿಳಿಸಲು ಯೋಜನೆ ಹಾಕಿಕೊಂಡಿದೆ.

ಈ ಬಗ್ಗೆ ಸಾರಿಗೆ ಸಚಿವ ಆರ್ ಅಶೋಕ ಅವರನ್ನು ಪ್ರಶ್ನಿಸಿದಾಗ, ಹೌದು, ಈ ಸಂಬಂಧ ಮಾತುಕತೆ ನಡೆದಿದೆ. ಸುಮಾರು 10 ಸಾವಿರ ಟಾಟಾ ನ್ಯಾನೋ ಕಾರುಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿದ್ದ್ದು ಸಿಟಿ ಟ್ಯಾಕ್ಸಿಯಂತೆ ಬಳಕೆಯಾಗಲಿದೆ ಎಂದರು.

ಬೆಂಗಳೂರು ಹೇಗೆ ಬೆಳೆದರೂ ನಮ್ಮ ಜನಕ್ಕೆ ಇನ್ನೂ ಟ್ಯಾಕ್ಸಿ ಸಂಸ್ಕೃತಿ ಒಗ್ಗಿಲ್ಲ. ದೆಹಲಿ, ಕೋಲ್ಕತ್ತಾ ಮುಂತಾದ ಮಹಾನಗರಗಳಲ್ಲಿನ ಸಿಟಿ ಟ್ಯಾಕ್ಸಿಗಳಂತೆ ಇಲ್ಲಿ ಕೂಡಾ ಟ್ಯಾಕ್ಸಿ ಸರ್ವೀಸ್ ಇದ್ದರೂ ನಮ್ಮ ಜನ ಆಟೋ ಹತ್ತಿ ಮನೆ ತಲುಪಲು ಇಷ್ಟಪಡುತ್ತಾರೆ.

ಈ ಹೊಸ ಟ್ಯಾಕ್ಸಿಗಳ ಮೀಟರ್ ರೇಟ್ ನಿಗದಿ ಮಾಡುವ ಹೊಣೆ ಬಿಎಂಟಿಸಿ ಹೊರಲಿದೆ. ಸದ್ಯಕ್ಕೆ ಈ ಬಗ್ಗೆ ಏನೂ ನಿರ್ಣಯ ಕೈಗೊಂಡಿಲ್ಲ. ಎಲ್ಲಾ ವಿಭಾಗಗಳೊಡನೆ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ನಂತರ ಕಾರ್ಯಗತಗೊಳಿಸುತ್ತೇವೆ ಎಂದು ಅಶೋಕ್ ಹೇಳಿದರು.

ಆಟೋ ಚಾಲಕರ ಗತಿಯೇನು? : ಆಟೋರಿಕ್ಷಾ ಚಾಲಕರು ಟಾಟಾ ನ್ಯಾನೋವನ್ನು ಬಾಡಿಗೆಗೆ ಪಡೆದು ಟ್ಯಾಕ್ಸಿ ಚಾಲಕರಾಗಿ ಸುತ್ತಬಹುದು. ನ್ಯಾನೋ ಬಳಸುವುದರಿಂದ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯತಡೆಗಟ್ಟಲು ಸಹಕಾರಿ ಎಂಬುದು ಅಶೋಕ್ ಯೋಚನೆ.

ಈ ಯೋಜನೆ ಬಗ್ಗೆ ಸಾರ್ವಜನಿಕರು ಕೂಡಾ ಸಹಮತ ವ್ಯಕ್ತಪಡಿಸುತ್ತಾರೆ. ಆಟೋರಿಕ್ಷಾಗಿಂತ ನ್ಯಾನೋ ಬೆಟರ್, ಮಾಲಿನ್ಯ ತಡೆಗಟ್ಟಬಹುದು. ಎಲ್ ಪಿಜಿ ಆಟೋ ಇದ್ದರೂ ಅಷ್ಟು ಜನಪ್ರಿಯವಾಗಿಲ್ಲ. ಸಿಮೇಎಣ್ಣೆ ಬೆರೆಸಿದ ಇಂಧನ ಬಳಸುವುದು ಇಂದಿಗೂ ತಪ್ಪಿಲ್ಲ. ದಟ್ಟ ಹೊಗೆ ಉಗುಳುವ ರಿಕ್ಷಾ ಇನ್ನಾದರೂ ಕೊನೆಗೊಳ್ಳಲಿ ಎಂಬುದು ಜನರ ಅಭಿಪ್ರಾಯ.

ಎಲ್ ಪಿಜಿ ಆಟೋಗೆ ಹೋಲಿಸಿದರೆ ನ್ಯಾನೋ ಕೂಡಾ ಸೋಲುತ್ತದೆ. ಸೋ, ನ್ಯಾನೋಗೆ ಎಲ್ ಪಿಜಿ ಅಳವಡಿಸಿ ಬೆಂಗಳೂರು ರಸ್ತೆಗೆ ಬಿಡಿ. ಆಗ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ಖ್ಯಾತ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ.

ಆಟೋ V/s ನ್ಯಾನೋ

* ಬೆಲೆ: ಆಟೋ ಹಾಗೂ ನ್ಯಾನೋ ಎರಡೂ ಸೇರಿ ಸುಮಾರು 1.3 ಲಕ್ಷ ರು ತಗುಲುತ್ತದೆ (ವ್ಯಾಟ್ ,ರಸ್ತೆ ತೆರಿಗೆ,ವಿಮೆ ಸೇರಿಸಿ).
* ಮೈಲೇಜ್: ನ್ಯಾನೋ ಪ್ರತಿ ಲೀಟರ್ ಗೆ 20 ಕಿ.ಮೀ ನೀಡಿದರೆ, ಆಟೋ ಲೀಟರ್ ಗೆ 25 ಕಿ.ಮೀ ನೀಡುತ್ತದೆ.
* ಡೀಸೆಲ್ ಬಳಸುವ ನ್ಯಾನೋ ಪ್ರತಿ ಲೀಟರ್ ಗೆ 2.7ಕೆಜಿ ಕಾರ್ಬನ್ ಡೈ ಆಕ್ಸೈಡ್ ಹೊರಹಾಕುತ್ತದೆ.
* ಪೆಟ್ರೋಲ್ ನ್ಯಾನೋಪ್ರತಿ ಲೀಟರ್ ಗೆ 2.3ಕೆಜಿ ಕಾರ್ಬನ್ ಡೈ ಆಕ್ಸೈಡ್ ಹೊರಹಾಕುತ್ತದೆ.
* ಎಲ್ ಪಿಜಿ ಆಟೋ ಇದಕ್ಕಿಂತ ಅರ್ಧದಷ್ಟು ಮಾತ್ರ ವಿಷಾನಿಲ ಹೊರಹಾಕುತ್ತದೆ

ಇನ್ನೂ ಕೆಲವರು ನ್ಯಾನೋ ಬದಲು ರೇವಾ ಎಲೆಕ್ಟ್ರಿಕ್ ಕಾರು ಬಳಸಿ, ಇದರಿಂದ ಸ್ಥಳೀಯ ಬ್ರಾಂಡ್ ವೊಂದಕ್ಕೆ ಪ್ರಚಾರ ಸಿಕ್ಕಿದ್ದಂತಾಗುತ್ತದೆ ಎಂದಿದ್ದಾರೆ. ಮಾಲಿನ್ಯ ತಡೆಗಟ್ಟುವಲ್ಲಿ ನ್ಯಾನೋ ಹಾಗೂ ಆಟೋಗಿಂತ ರೇವಾ ಸಮರ್ಥವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ನಿರ್ಧಾರ ಇನ್ನೂ ಸಾರಿಗೆ ಇಲಾಖೆಯ ಕೈಲಿದೆ. ಬೆಂಗಳೂರಿಗರು ಮೇಲ್ಗಡೆ ಮೆಟ್ರೋ ಕೆಳಗಡೆ ನ್ಯಾನೋದಲ್ಲಿ ಜೂಮ್ ಅಂಥಾ ಓಡಾಡುವ ಕಾಲ ಸನ್ನಿಹಿತವಾಗಬಹುದು. ಕಾದು ನೋಡೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X