ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಬಚ್ಚೇಗೌಡ್ರ ಇಲಾಖೆಯ ಅದ್ಭುತ ಕೆಲ್ಸ!

By Mahesh
|
Google Oneindia Kannada News

Job fair for Disabled, Bangalore
ಬೆಂಗಳೂರು, ಜು.19: ಅತ್ತ ಕರ್ನಾಟಕದ ಸಮಸ್ತ ರಾಜಕೀಯ ಧುರೀಣರು, ಪುಢಾರಿಗಳು ಗಣಿಗದ್ದಲ, ನಿದ್ರೆ ಪ್ರತಿಭಟನೆ, ಪಾದಯಾತ್ರೆಯಲ್ಲಿ ತೊಡಗಿದ್ದರೆ, ಇತ್ತ ಬಚ್ಚೇಗೌಡರ ಇಲಾಖೆ ಸದ್ದಿಲ್ಲದೆ ಅದ್ಭುತ ಕೆಲಸ ಮಾಡಿದೆ. ವಿಶೇಷವಾಗಿ ಅಂಗವಿಕಲ ಅಭ್ಯರ್ಥಿಗಳಿಗಾಗಿ 'ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಮೇಳ'ವನ್ನು ಆಯೋಜಿಸಿ ಸೈ ಎನಿಸಿಕೊಂಡಿದೆ.

ನಗರದ ಹೊಸೂರು ರಸ್ತೆಯಲ್ಲಿರುವ ಕ್ರೈಸ್ಟ್ ಕಾಲೇಜು ಆವರಣ ಹಾಗೂ ಧರ್ಮಾರಾಂ ಕಾಲೇಜು ಆವರಣದಲ್ಲಿ ಜು.17 ಹಾಗೂ ಜು.18 ರಂದು ನಡೆದ ಈ ಉದ್ಯೋಗಮೇಳದಲ್ಲಿ ಸಾವಿರಾರು ಜನ ಅಭ್ಯರ್ಥಿಗಳು ನೆರೆದಿದ್ದರು.

ಶಾಲೆ ತೊರೆದವರು, ಎಸ್ ಎಸ್ ಎಲ್ ಸಿಗಿಂತ ಕಡಿಮೆ ವಿದ್ಯಾರ್ಹತೆ ಉಳ್ಳವರು, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ ಪಡೆದವರಲ್ಲದೆ ಪದವಿದರದು, ಇಂಜಿನಿಯರಿಂಗ್ ಪದವೀಧರರು, ಸ್ನಾತ್ತಕೋತ್ತರ ಪದವೀಧರರು ಹೀಗೆ ಎಲ್ಲಾ ಸ್ತರದ ಅಭ್ಯರ್ಥಿಗಳಿಗೆ ಈ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಟಿವಿಎಸ್ , ಶೆಲ್ , ಏಜಿಎಸ್, ಇ4 ಇ, ಗೋಲ್ಡ್ ಮನ್ ಸ್ಯಾಚ್, ಥಾಮ್ಸನ್ ರೈಟರ್ಸ್ ಸೇರಿದಂತೆ ಸುಮಾರು 50 ಕ್ಕೂ ಉದ್ದಿಮೆದಾರರಿಂದ ಸ್ಥಳದಲ್ಲೇ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉದ್ಯೋಗ ಪತ್ರವನ್ನು ಪಡೆದು ವಿತರಿಸಲಾಯಿತು. ಈ ಮಹತ್ವದ ಕೆಲಸವನ್ನು ಮಾನ್ಯ ಮಂತ್ರಿಗಳಾದ ಬಚ್ಚೇಗೌಡ ಹಾಗೂ ನರೇಂದ್ರ ಸ್ವಾಮಿ ಅವರು ಸಂತೋಷದಿಂದ ನೇರವೇರಿಸಿದರು.

ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳ ಕೌಶಲ್ಯ ಮೌಲ್ಯಾಂಕನ ಮಾಡಿ ತರಬೇತಿ ಅಗತ್ಯವಿದ್ದಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಿ ಪ್ರಮಾಣಪತ್ರ ನೀಡಿ, ಸೂಕ್ತವಾದ ಉದ್ಯೋಗ ಕಲ್ಪಿಸಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಸಚಿವ ಬಚ್ಚೇಗೌಡ ಹೇಳಿದರು.

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗದ ಅಭ್ಯರ್ಥಿಗಳ ಗಮನಕ್ಕೆ:
Helpline : 080-40621191/2/3/4
E-mail:[email protected]
Website: www.koushalyasiri.in/www.jobraiser.com
ಮುಖಾಂತರ ನೋಂದಾಯಿಸಿಕೊಂಡು ಉದ್ಯೋಗ ಪಡೆಯಬಹುದು.

ಟಿಪ್ಪಣಿ: ರಾಜ್ಯ ಕೌಶಲ್ಯ ಆಯೋಗಕ್ಕೆ ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಮುಂದಿನ 5 ವರ್ಷಗಳಲ್ಲಿ ಹತ್ತು ಲಕ್ಷ ಜನರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ನೀಡುವುದು ಆಯೋಗದ ಗುರಿ.

2008-09ನೇ ಮತ್ತು 2009-10 ನೇ ಸಾಲಿನಲ್ಲಿ 16 ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. ಒಟ್ಟು 2008 ಉದ್ದಿಮೆದಾರರು ಹಾಗು ಒಟ್ಟು 2,56,554 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

ಉದ್ಯೋಗಮೇಳ ಮತ್ತು ತರಬೇತಿಯ ಮುಖಾಂತರ ಒಟ್ಟು 1,29,722 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಒದಗಿಸಲಾಗಿದೆ. ಎಂ.ಇ.ಎಸ್. ಯೋಜನೆಯ ಮುಖಾಂತರ ಒಟ್ಟು 2,08,289ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.

ಕ್ರೈಸ್ಟ್ ಕಾಲೇಜಿನಲ್ಲಿ ನಡೆದ ಮೇಳಕ್ಕೆ ಎಡುಕ್ಯುಟಿ ಸಂಸ್ಥೆ, ಎಪಿಡಿ, ಎನೇಬಲ್ ಇಂಡಿಯಾ, ಸಮರ್ಥನಂ ಹಾಗು ಶೆಶೈರ್ ಲೈವ್ಲಿಹುಡ್ ರಿಸೋರ್ಸ್ ಸೆಂಟರ್ ಸಂಸ್ಥೆಗಳು ಸಹಕಾರ ನೀಡಿದವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X