ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಠುಸ್ ಎಂದ ಎಂಇಎಸ್ ಬೆಳಗಾವಿ ಬಂದ್

By Mahesh
|
Google Oneindia Kannada News

Belagavi City Corporation
ಬೆಳಗಾವಿ, ಜು.19: ಕನ್ನಡಪರ ಸಂಘಟನೆಗಳು ಭಗವಾಧ್ವಜಕ್ಕೆ ಅವಮಾನ ಎಸಗಿವೆ ಎಂದು ಆರೋಪಿಸಿ ಎಂಇಎಸ್ ಕರೆ ನೀಡಿದ್ದ ಬೆಳಗಾವಿ ಬಂದ್‌ಗೆ ಭಾನುವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಜಾ ದಿನವಾಗಿದ್ದರಿಂದ ಸರಕಾರಿ ಕಚೇರಿ, ಬ್ಯಾಂಕ್, ಶಾಲಾ ಕಾಲೇಜು ಮುಚ್ಚಿದ್ದವು. ಬಂದ್ ಜನಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುವಲ್ಲಿ ವಿಫಲಗೊಂಡಿತು. ಈ ಮೂಲಕ ಎಂಇಎಸ್ ಪುಂಡರಿಗೆ ಭಾರಿ ಮುಖಭಂಗವಾಗಿದೆ.

ವಾಹನ ಸಂಚಾರ ಸುಗಮ:
ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಖಡೇಬಜಾರ್, ಕಾಲೇಜು ರಸ್ತೆ, ಮಾರ್ಕೆಟ್ ಪ್ರದೇಶದಲ್ಲಿ ಕೆಲ ಅಂಗಡಿ ಮುಂಗಟ್ಟು ಮುಚ್ಚಿದ್ದನ್ನು ಹೊರತುಪಡಿಸಿದರೆ ಇತರೆಡೆ ವ್ಯಾಪಾರ ವಹಿವಾಟು ಎಂದಿನಂತೆ ಸಾಗಿತ್ತು. ಕೆಲವು ಪ್ರದೇಶಗಳಲ್ಲಿ ವ್ಯಾಪಾರಿಗಳು ಬಂದ್ ಭಯದಲ್ಲಿ ಅಂಗಡಿಗಳನ್ನು ಸ್ವಲ್ಪ ತಡವಾಗಿ ತೆರೆದರು. ಬಸ್, ವಾಹನ ಸಂಚಾರ ಸುಗಮವಾಗಿ ನಡೆಯಿತು. ಆಟೊ ಸಂಚಾರಕ್ಕೂ ಭಂಗ ಬರಲಿಲ್ಲ.

ನಿಷೇಧಾಜ್ಞೆ ಜಾರಿ: ಬಂದ್ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದ ಅನ್ವಯವಾಗುವಂತೆ ಜು. 21ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶ ಗಳಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಬಂದ್‌ಗೆ ಭಾರಿ ಪ್ರತಿಕ್ರಿಯೆ ದೊರೆಯದೆ ಮರಾಠಿಗರಿಂದಲೇ ಎಂಇಎಸ್ ಮುಖಭಂಗಕ್ಕೆ ಒಳಗಾಗುವಂತಾಯಿತು.

ಕೆಲವು ಮರಾಠಿ ಯುವಕ ಮಂಡಳಗಳ ಬೋರ್ಡ್‌ಗಳಲ್ಲಿ ಜು.18ರಂದು ಬೆಳಗಾವಿ ಬಂದ್ ಎಂದು ಎಂಇಎಸ್ ಮುಂಚಿತವಾಗಿಯೇ ಕರಪತ್ರಗಳನ್ನು ಅಂಟಿಸಿತ್ತು. ಜತೆಗೆ ಮರಾಠಿ ಮಾಧ್ಯಮಗಳು ಬಂದ್ ಆಚರಿಸಬೇಕು ಎಂದು ಕರೆ ನೀಡಿದ್ದರಿಂದ ವ್ಯಾಪಾರಿಗಳು ಸಂಭವಿಸಬಹುದಾದ ಕಷ್ಟ ನಷ್ಟಕ್ಕೆ ಹೆದರಿ ಅಂಗಡಿ ತೆರೆಯದಿರುವುದು ಕಂಡು ಬಂತು.ಎಂಇಎಸ್ ಕರೆ ನೀಡಿದ್ದ ಬಂದ್‌ಗೆ ಹಿಂದೂಪರ ಸಂಘಟನೆಗಳು ಬೆಂಬಲ ನೀಡಿರಲಿಲ್ಲ.

ಕೇಂದ್ರ ಬಸ್ ನಿಲ್ದಾಣ ಬಳಿಯ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಚಲನಚಿತ್ರ ಪ್ರದರ್ಶನ ಎಂದಿನಂತೆ ಸಾಗಿತ್ತು. ವಿದ್ಯಾರ್ಥಿಗಳು ಕ್ರಿಕೆಟ್, ಫುಟ್ಬಾಲ್ ಆಟದಲ್ಲಿ ದಿನ ಕಳೆದು ಸಂತಸಪಟ್ಟರು. ವ್ಯಾಪಾರ ವಹಿವಾಟು ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂದುಕೊಂಡ ಎಂಇಎಸ್ ಭಾನುವಾರದ ಬಂದ್ ಕರೆಯಿಂದ ಅವಮಾನಗೊಂಡಿದೆ.

ನಿಷೇಧಾಜ್ಞೆ ಪರಿಣಾಮವಾಗಿ ಎಂಇಎಸ್ ಪುಂಡರು ಬೀದಿಗಿಳಿದು ಪುಂಡಾಟಿಕೆ ನಡೆಸುವ ಹುಚ್ಚು ಧೈರ್ಯ ತೋರಿಸಲಿಲ್ಲ. ಸಂಜೆವರೆಗೂ ವ್ಯಾಪಾರ ವಹಿವಾಟು ಎಂದಿನಂತೆ ಸುಲಲಿತವಾಗಿ ಸಾಗಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X