ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹೆಚ್ ಇಎಲ್ ಗೆ ಪ್ರತಿಸ್ಪರ್ಧಿಯಾದ ಎಲ್ ಅಂಡ್ ಟಿ

By Mahesh
|
Google Oneindia Kannada News

L & T ends BHEL Monopoly
ನವದೆಹಲಿ, ಜು.18: ದೇಶದ ಪ್ರಮುಖ ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪೆನಿ ಲಾರ್ಸನ್ ಅಂಡ್ ಟಬ್ರೋ ಗುಜರಾತ್ ನ ಹಾಝಿರಾ ಘಟಕದಲ್ಲಿ ಬಾಯ್ಲರ್, ಟರ್ಬೈನ್ ಹಾಗೂ ಜನರೇಟರ್ ಉಪಕರಣಗಳ ತಯಾರಿಕೆಗೆ ಶನಿವಾರ ಚಾಲನೆ ನೀಡಿದೆ.

ಈ ವರೆಗೆ ದೇಶದಲ್ಲಿ ಈ ಭಾರೀ ವಿದ್ಯುತ್ ಉಪಕರಣಗಳನ್ನು ಸರ್ಕಾರೀ ಸ್ವಾಮ್ಯದ ಬಿಹೆಚ್ಇಎಲ್ ಮಾತ್ರ ತಯಾರಿಸುತ್ತಿದ್ದು, ಇದೀಗ ಈ ರಂಗ ಪ್ರವೇಶಿಸಿರುವ ಎರಡನೇ ಕಂಪೆನಿ ಎಲ್ ಅಂಡ್ ಟಿ ಆಗಿದ್ದು ಸರ್ಕಾರಿ ಕಂಪೆನಿಗೆ ಪೈಪೋಟಿ ನೀಡಲಿದೆ.

ಕಂಪೆನಿ ಈಗಾಗಲೇ 6500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಉಪಕರಣಗಳನ್ನು ಸರಬರಾಜು ಮಾಡಲು ಗುತ್ತಿಗೆ ಪಡೆದಿದೆ. ಎಲ್ ಅಂಡ್ ಟಿ ತನ್ನ ಮೊದಲ ಟರ್ಬೈನನ್ನು ಆಂಧ್ರಪ್ರದೇಶ ಪವರ್ ಜನರೇಷನ್ ಕಾರ್ಪೊರೇಷನ್ ಗೆ ಸರಬರಾಜು ಮಾಡಲಿದೆ.

ಕಾರ್ಪೊರೇಷನ್ ಕೃಷ್ಣಪಟ್ಣಂ ಯೋಜನೆಯನ್ನು ಮುಂದಿನ ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಲಿದ್ದು ಇದಕ್ಕೆ ಕಂಪೆನಿ ತಲಾ 800 ಮೆಗಾ ವ್ಯಾಟ್ ಗಳ ಎರಡು ಉಪಕರಣಗಳನ್ನು ಪೂರೈಸಲಿದೆ ಎಂದು ಎಲ್ ಅಂಡ್ ಟಿ ಪವರ್ ನ ವ್ಯವಸ್ಥಾಪಕ ನಿರ್ದೇಶಕ ರವಿ ಉಪ್ಪಳ್ ತಿಳಿಸಿದರು.

ಮೊದಲ ಟರ್ಬೈನ್ ಸರಬರಾಜು ಮಾಡಿದ 3-4 ತಿಂಗಳ ನಂತರ ಇತರ ಗುತ್ತಿಗೆಗಳನ್ನು ಪೂರೈಸಲಾಗುವುದು ಎಂದು ಅವರು ಹೇಳಿದರು.

ಆಂಧ್ರಪ್ರದೇಶದ ಗುತ್ತಿಗೆ ಮೌಲ್ಯ 1557 ಕೋಟಿ ರುಪಾಯಿಗಳಾಗಿದ್ದು, ಕಂಪೆನಿ ಮಹಾರಾಷ್ಟ್ರ ಸ್ಟೇಟ್ ಪವರ್ ಜನರೇಷನ್ ಕಂಪೆನಿಯಿಂದ 6897 ಕೋಟಿ ರೂಪಾಯಿ ಮೌಲ್ಯದ ತಲಾ 660 ಮೆಗಾ ವ್ಯಾಟ್ ಗಳ ಮೂರು ಟರ್ಬೈನ್ ಗಳನ್ನು ಸರಬರಾಜು ಮಾಡಲು ಗುತ್ತಿಗೆ ಪಡೆದಿದೆ.

ಕಂಪೆನಿ ಜೆಪಿ ಇಂಡಸ್ಟ್ರೀಸ್‌ಗೆ 4,000 ಕೋಟಿ ರುಪಾಯಿ ಮೌಲ್ಯದ ವಿದ್ಯುತ್ ಉಪಕರಣಗಳನ್ನೂ ಮಧ್ಯಪ್ರದೇಶದ ಪವರ್ ಜನರೇಷನ್ ಕಂಪೆನಿಗೆ 1635 ಕೋಟಿ ರೂಪಾಯಿಗಳ 1200 ಮೆಗಾ ವ್ಯಾಟ್ ಸಾಮರ್ಥ್ಯದ ಉತ್ಪಾದನಾ ಉಪಕರಣಗಳನ್ನು ಸರಬರಾಜು ಮಾಡಲು ಗುತ್ತಿಗೆ ಪಡೆದಿದೆ.

ಕಂಪೆನಿ 2012-13ಕ್ಕೆ ಉತ್ಪಾದನಾ ಸಾಮರ್ಥ್ಯವನ್ನು 6000 ಮೆಗಾ ವ್ಯಾಟ್ ಗಳಿಗೇರಿಸಲಿದ್ದು, ಈಗಿರುವ ಗುತ್ತಿಗೆಗಳನ್ನು 2014ರೊಳಗೆ ಸರಬರಾಜು ಮಾಡುವುದಾಗಿ ಉಪ್ಪಳ್ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X