ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಹಠಾವೋ ತುಂಗಭದ್ರಾ ಬಚಾವೋ ಆಂದೋಲನ

By Prasad
|
Google Oneindia Kannada News

Sooryanarayana Reddy
ಬಳ್ಳಾರಿ, ಜು. 17 : ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡುತ್ತಿರುವ ಬಳ್ಳಾರಿಯ ರೆಡ್ಡಿ ಸಹೋದರರು ಶ್ರಾವಣದಲ್ಲಿ ಜೈಲು ಕಂಬಿ ಎಣಿಸುವುದು ಖಚಿತ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮತ್ತು ಮಾಜಿ ಶಾಸಕ ಎನ್. ಸೂರ್ಯನಾರಾಯಣ ರೆಡ್ಡಿ ಹೇಳಿದ್ದಾರೆ.

ಜೆಡಿಎಸ್(ಎಸ್‌ಸಿ/ಎಸ್‌ಟಿ) ಘಟಕದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿದ ನಂತರ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಅಕ್ರಮ ಇವರು ಕೇವಲ ಭ್ರಷ್ಟರಲ್ಲ, ಸ್ವಾರ್ಥಪರರು, ಅಸಮರ್ಥರು ಎಂದು ಟೀಕಿಸಿದರು. ಗಣಿಗಾರಿಕೆಯನ್ನು ಸಿಬಿಐಗೆ ವಹಿಸಲೇಬೇಕು ಎಂದು ಅವರು ಆಗ್ರಹಿಸಿದರು.

ತುಂಗಭದ್ರಾ ಜಲಾಶಯದ ನೀರನ್ನು ಕಾರ್ಖಾನೆಗಳಿಗೆ ಬಳಸಲು ಅನುಮತಿ ನೀಡಿ ಸರಕಾರ ರೈತರಿಗೆ ಮೋಸ ಮಾಡಿದೆ. ಕೈಗಾರೀಕರಣದಿಂದ ಜಿಲ್ಲೆಯ ಜನತೆ ಮಲಿನ ನೀರನ್ನೂ ಕೂಡ ಕುಡಿಯಬೇಕಾಗುತ್ತದೆ ಎಂದು ಸೂರ್ಯನಾರಾಯಣ ಆತಂಕ ವ್ಯಕ್ತಪಡಿಸಿದರು.

ಈ ಎರಡೂ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 15ರಿಂದ ಹೂವಿನಹಡಗಲಿಯಿಂದ ಸಿರುಗುಪ್ಪದ ಹಚ್ಚೊಳ್ಳಿ ಗ್ರಾಮದವರೆಗೆ ತುಂಗಭಧ್ರ ಉಳಿಸಿ - ಬಳ್ಳಾರಿ ಬಚಾವೋ ; ಬಿಜೆಪಿ ಹಠಾವೋ' ಆಂದೋಲನವನ್ನು ಜಿಲ್ಲಾ ಜೆಡಿಎಸ್ ಹಮ್ಮಿಕೊಳ್ಳಲಿದೆ.

ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಸಂಸದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಸಿಬಿಐ ತನಿಖೆಗೆ ಅಕ್ರಮ ಗಣಿಗಾರಿಕೆಯನ್ನು ಒಪ್ಪಿಸುವವರೆಗೆ ಸುಮ್ಮನಿರುವುದಿಲ್ಲ ಎಂದು ಅವರು ಹೇಳಿದರು.

ರಾಜ್ಯ ಜೆಡಿಎಸ್ ಎಸ್ಸಿ/ಎಸ್ಟಿ ವಿಭಾಗದ ಅಧ್ಯಕ್ಷ, ಮಾಜಿ ಶಾಸಕ ಡಾ. ಕೆ. ಅನ್ನದಾನಿ ಅವರು ಮಾತನಾಡಿ, ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X