ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಬಳಕೆದಾರರ ಸಂಖ್ಯೆ 660 ಮಿಲಿಯನ್ ಗೆ ಏರಿಕೆ

By Mahesh
|
Google Oneindia Kannada News

India mobile users to cross 660 mn in 2010: Gartner
ನವದೆಹಲಿ, ಜು.16:ದೇಶದ ಮೊಬೈಲ್ ದೂರವಾಣಿ ಬಳಕೆದಾರರ ಸಂಖ್ಯೆ 2010ರಲ್ಲಿ 660 ಮಿಲಿಯನ್ ಗಳಿಗೇರಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಗಾರ್ಟ್ನರ್ ಹೇಳಿದೆ.

ಅಲ್ಲದೆ ಮೊಬೈಲ್ ಸೇವಾ ಉದ್ಯಮದ ಆದಾಯ ಈ ವರ್ಷಾಂತ್ಯಕ್ಕೆ 19.7 ಬಿಲಿಯನ್ ಡಾಲರ್ ಗಳಿಗೇರಲಿರಿದೆ. ಇದು ಕಳೆದ ವರ್ಷಕ್ಕಿಂತ ಶೇ 19.7 ಅಧಿಕ ಎಂದು ಸಂಸ್ಥೆ ಹೇಳಿದೆ.

2009ರಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಶೇ.44.5 ಹೆಚ್ಚಳವಾಗಿದ್ದು ಈ ವರ್ಷ ಇದು ಶೇ.55.9ಕ್ಕೇರಲಿದೆ ಎಂದೂ ಸಂಸ್ಥೆ ಹೇಳಿದೆ. ದೇಶದ ಮೊಬೈಲ್ ಉದ್ಯಮ 2012ರ ವರೆಗೂ ಎರಡಂಕಿಗಳ ಬೆಳವಣಿಗೆ ದಾಖಲಿಸಲಿದೆ.

2012ರಲ್ಲಿ ಮೊಬೈಲ್ ಸಂಪರ್ಕಗಳಲ್ಲಿ ಶೇ.72.5 ಹಾಗೂ 2014 ರಲ್ಲಿ ಶೇ.82 ರಷ್ಟು ಹೆಚ್ಚಲಿದೆ. ಮೊಬೈಲ್ ಕಂಪೆನಿಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿಸಿರುವ ಗಮನ ಹಾಗೂ ಹ್ಯಾಂಡ್ ಸೆಟ್ ಗಳ ಬೆಲೆಯಲ್ಲಿ ಕಡಿತದಿಂದ ಈ ಏರಿಕೆ ಆಗಲಿದೆ ಎಂದು ಗಾರ್ಟ್ನರ್ ಹೇಳಿದೆ.

2014ರ ಅಂತ್ಯಕ್ಕೆ ಮೊಬೈಲ್ ಸೇವೆಯ ಆದಾಯ 23 ಬಿಲಿಯನ್ ಡಾಲರ್ ತಲುಪಲಿದೆ. ಈ ಬೆಳವಣಿಗೆಯಾದರೆ ಭಾರತ ಚೀನಾದ ನಂತರ ಎರಡನೇ ಅತೀ ದೊಡ್ಡ ನಿಸ್ತಂತು ಮಾರುಕಟ್ಟೆ ಆಗಲಿದೆ. ಹೊಸ ಮೊಬೈಲ್ ಸೇವಾ ಕಂಪೆನಿಗಳ ಪ್ರವೇಶದಿಂದ ಉದ್ಯಮದಲ್ಲಿ ಸರ್ದಾತ್ಮಕತೆ ಹೆಚ್ಚುತ್ತಿದ್ದು ದರ ಕಡಿಮೆಯಾಗುತ್ತಿದೆ ಎಂದೂ ಸಂಸ್ಥೆ ತಿಳಿಸಿದೆ.

ಇತ್ತೀಚೆಗಿನ 3ಜಿ ಹಾಗೂ ನಿಸ್ತಂತು ತರಂಗಾಂತರ ಹರಾಜಿನಿಂದ ಕಂಪೆನಿಗಳು ಹೆಚ್ಚಿನ ಹೂಡಿಕೆ ಮಾಡಬೇಕಿದ್ದರೂ, ಏರಿಕೆಯಾಗಲಿರುವ ಗ್ರಾಹಕರ ಸಂಖ್ಯೆ ವೆಚ್ಚವನ್ನು ಭರ್ತಿ ಮಾಡಿಕೊಡಲಿದೆ.

ಹೆಚ್ಚುತ್ತಿರುವ ಸ್ಪರ್ಧೆಯಿಂದ ಕಂಪೆನಿಗಳು ಪ್ರತೀ ಕರೆಗೆ ಪಡೆಯುವ ಆದಾಯದಲ್ಲಿ ಕುಸಿತವಾಗಲಿದ್ದು , 2010 ರಿಂದ 2014ರವರೆಗೂ ಈ ರೀತಿ ಆಗಲಿದ್ದು ಡಾಟಾ ವರ್ಗಾವಣೆಯ ಆದಾಯ ಹಾಗೂ ಗ್ರಾಮೀಣ ಭಾಗದ ಆದಾಯ ಹೆಚ್ಚಲಿದೆ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X