ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಳಿ ಮೊದಲೊ? ಮೊಟ್ಟೆ ಮೊದಲೊ? ಇಲ್ಲಿದೆ ಉತ್ತರ

By Mahesh
|
Google Oneindia Kannada News

ಎಡಿನ್ ಬರ್ಗ್ ,ಜು.16: ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬುದು ಬಹು ಕಾಲದಿಂದ ಯಾರು ಒಡೆಯಲಾಗದ ಚಿದಂಬರ ರಹಸ್ಯವಾಗಿ ಉಳಿದಿತ್ತು. ಆದರೆ ಇದಕ್ಕೆ ಅಮೆರಿಕದ ವಿಜ್ಞಾನಿಗಳು ಉತ್ತರ ಕಂಡು ಹಿಡಿದಿದ್ದು, ಮೊಟ್ಟೆ ಹಾಗೂ ಕೋಳಿಯಲ್ಲಿ ಕೋಳಿಯೇ ಮೊದಲು ಎಂದು ಸಂಶೋಧನೆಯಿಂದ ತಿಳಿದಿದೆ ಎಂದಿದ್ದಾರೆ.

ಅಮೆರಿಕದ ಶೆಫೆಲ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮೊಟ್ಟೆ ರೂಪುಗೊಳ್ಳಲು ಅವಶ್ಯವಾದ ಚಿಪ್ಪು ತಯಾರಿಕೆಗೆ ಒಒಕ್ಲೆಡಿನ್ (ovocledidin-17, or OC-17)ಪ್ರೊಟೀನ್ ಅವಶ್ಯಕ. ಇದು ಕೋಳಿಯ ಗರ್ಭದಲ್ಲಿ ಉತ್ಪತ್ತಿಯಾಗಿ ಹೊರ ಕವಚ ಉತ್ಪತ್ತಿಗೆ ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಹಾಗಾಗಿ, ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಕೋಳಿ ಎನ್ನುತ್ತಾರೆ ವಿಜ್ಞಾನಿಗಳು.

Which Came First -- The Chicken or the Egg?

ಆದರೆ, ಪ್ರೊಟೀನ್ ಉತ್ಪಾದಿಸುವ ಕೋಳಿ ಭೂಮಿಗೆ ಹೇಗೆ ಬಂತು ಎಂದು ಈ ವಿಜ್ಞಾನಿಗಳು ಹೇಳಿಲ್ಲ. ತೊಗಟೆಯ ಸೂಕ್ಷ್ಮ ಸಂರಚನೆ ಅರಿತುಕೊಳ್ಳಲು ಈ ವಿಜ್ಞಾನಿಗಳು ಎಡಿನ್ ಬರ್ಗ್ ನ ಅತ್ಯಾಧುನಿಕ ತಂತ್ರಜ್ಞಾನದ ಹೆಕ್ಟರ್ ಕಂಪ್ಯೂಟರ್ (HECToR) ಬಳಸಿದ್ದಾರೆ. ಈ ಮೂಲಕ ಒಒಕ್ಲೆಡಿನ್ ಕೋಳಿಯ ದೇಹದಲ್ಲಿ ಕಾರ್ಬೋನೇಟ್ ಘನೀಕೃತ ಚಿಪ್‌ಆಗಿ ಪರಿವರ್ತನೆಗೊಳ್ಳುವ ಕಾರ್ಯಕ್ಕೆ ಚಾಲನೆ ನೀಡುತ್ತದೆ ಎಂದು ಪತ್ತೆ ಹಚ್ಚಿದ್ದಾರೆ.

ಇದೇ ಮುಂದೆ ಮೊಟ್ಟೆಯೊಳಗಿನ ದ್ರವ ಪದಾರ್ಥದ ರಕ್ಷಾ ಕವಚವಾಗಿ ಮಾರ್ಪಡುತ್ತದೆ. ವಿಜ್ಞಾನಿಗಳ ತಂಡದ ನಾಯಕ ಡಾ. ಕಾಲಿನ್ ಫ್ರೀಮ್ಮನ್, ಈ ಹಿಂದೆ ಮೊಟ್ಟೆಯೇ ಕೋಳಿಗಿಂತ ಮೊದಲು ಭೂಮಿಗೆ ಬಂದಿದೆ ಎಂದು ಬಹಳ ಕಾಲದಿಂದ ನಂಬಲಾಗಿತ್ತು.

ಆದರೆ, ಈಗ ನಾವು ಕೋಳಿಯೇ ಮೊದಲು ಜಗತ್ತಿಗೆ ಬಂದಿದ್ದು ಎಂದು ಖಾತ್ರಿಪಡಿಸಿದ್ದೇವೆ ಎಂದು ಹೇಳಿದ್ದಾರೆ. ಮೊಟ್ಟೆಯ ಕವಚದಲ್ಲಿ ಪ್ರೊಟೀನ್ ಇದೆ ಎಂಬುದನ್ನು ಬಹಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಆದರೆ, ಇದು ಹೇಗೆ ಮೊಟ್ಟೆ ತಯಾರಿಕೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ತೀರ ಸಮೀಪದಿಂದ ತಾವು ತಿಳಿದುಕೊಂಡಿದ್ದಾಗಿ ಅವರು ಹೇಳಿದರು.

ಆದರೆ, ಬೇರೆ ಬೇರೆ ಪಕ್ಷಿಗಳಲ್ಲಿ ಇದೇ ಉದ್ದೇಶಕ್ಕೆ ಪ್ರೊಟೀನ್‌ಗಳಲ್ಲಿ ಭಿನ್ನತೆ ಕಂಡುಬಂದಿದೆ.ಇದರ ಜೊತೆಗೆ, ಈ ವಸ್ತುವನ್ನು ಕೈಗಾರಿಕೆಯಲ್ಲಿ ಬೇರೆ ಉತ್ಪನ್ನಗಳ ತಯಾರಿಕೆಗೆ ಬಳಸಬಹುದು ಎಂದೂ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮೊಟ್ಟೆಯ ಕವಚದ ಅಂಶಗಳು ಎಲುಬುಗಳಲ್ಲೂ ಕಂಡುಬರುತ್ತದೆ.

ಆದರೆ, ಕೋಳಿಗಳಲ್ಲಿ ತಯಾರಾಗುವಷ್ಟು ವೇಗದಲ್ಲಿ ಇದು ಬೇರೆ ಪಕ್ಷಿಗಳಲ್ಲಿ ತಯಾರಾಗುವುದಿಲ್ಲ. ಅಂದರೆ, 24 ಗಂಟೆಗಳಲ್ಲಿ ಆರು ಗ್ರಾಂ(0.2 oz) ಇದು ಉತ್ಪತ್ತಿಯಾಗುತ್ತದೆ. ಈ ಕವಚ ತಯಾರಾದ ಬಳಿಕವೇ ಮೊಟ್ಟೆ ಸೃಷ್ಟಿ ಕಾರ್ಯ ನಡೆಯುತ್ತದೆ. ಮೊದಲು ಮೊಟ್ಟೆಯಲ್ಲ .

English summary
Which Came First -- The Chicken or the Egg?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X