ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡೂಟ ತಿಂದು ಮಲಗುವ ವೇದಿಕೆಯಲ್ಲ: ಈಶ್ವರಪ್ಪ

By Mahesh
|
Google Oneindia Kannada News

KS Eshwarappa
ಬೆಂಗಳೂರು, ಜು.15: ವಿಧಾನಸೌಧ ಜನ ಪ್ರತಿನಿಧಿಗಳು ಬಾಡೂಟ ತಿನ್ನುವ ವೇದಿಕೆಯಲ್ಲ. ಪ್ರತಿಭಟನೆ ಹೆಸರಲ್ಲಿ ಕುಡಿದು ತಿಂದು, ಹಾಡಿ ಕುಣಿದು ಹೊರಳಡಲು ಖಾಸಗಿ ಸ್ಥಳವಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಧಾನಸೌಧ ಇರುವುದು ನಾಡಿನ ಜನತೆಯ ಸಂಕಷ್ಟಕ್ಕೆ ಪರಿಹಾರ ನೀಡಲೇ ಹೊರತು, ಬಾಡೂಟ ತಿಂದು ಮಜಾ ಮಾಡಲು ಅಲ್ಲ ಎಂದಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಅಹೋರಾತ್ರಿ ಧರಣಿ ನಡೆಸುತ್ತಿರುವುದನ್ನು ಅವರು ಖಂಡಿಸಿದರು.

ಈ ವಿಚಾರ ಕುರಿತು ಸದನದಲ್ಲಿ ಸುದೀರ್ಘ ಚರ್ಚೆ ನಡೆದು ಸರ್ಕಾರ ಉತ್ತರವನ್ನೂ ನೀಡಿದ ನಂತರ ಧರಣಿ ಕೈಗೊಂಡಿರುವ ಪ್ರತಿಪಕ್ಷಗಳ ನಿರ್ಧಾರವೇ ಸರಿಯಲ್ಲ ಎಂದರು. ನಾಡಿನ ಸಮಸ್ಯೆ ಪರಿಹರಿಸಬೇಕೆಂಬ ನಿಜವಾದ ಕಾಳಜಿ ಇದ್ದರೆ ಒಣ ಪ್ರತಿಷ್ಠೆ ಬಿಟ್ಟು ಸದನದ ಕಲಾಪದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಸಲಹೆ-ಸೂಚನೆ ನೀಡಲಿ.

ಅದನ್ನು ಬಿಟ್ಟು ಪ್ರತಿಭಟನೆಯ ಹೆಸರಿನಲ್ಲಿ ವ್ಯರ್ಥವಾಗಿ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಲೋಕಾಯುಕ್ತ ತನಿಖೆಗೆ ಸಿಎಂ ಅವರು ಸೂಚಿಸಿರುವಾಗ ಸಿಬಿಐ ತನಿಖೆ ಯಾಕೆ ಎಂದು ಈಶ್ವರಪ್ಪ ಪ್ರಶ್ನಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X