ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂತಕಿ ಶುಭಾ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

By Mahesh
|
Google Oneindia Kannada News

Shubha and other 3 accussed get Life imprisonment
ಬೆಂಗಳೂರು, ಜು.14: 2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ನಡೆದಿದ್ದ ಬಿ.ವಿ ಗಿರೀಶ್ (27)ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ 17 ನೇ ತ್ವರಿತ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.

ಶುಭಾ ತನ್ನ ಪ್ರಿಯಕರ ಅರುಣ್ ನನ್ನು ವರಿಸಬೇಕಿದ್ದರೆ, ನಿಶ್ಚಿತಾರ್ಥ ನಂತರ ಭಾವಿಪತಿಗೆ ನನಗೆ ನೀವು ಇಷ್ಟವಿಲ್ಲ. ನಾನು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದೇನೆ ಎಂದು ಒಂದು ಮಾತು ಹೇಳಿದ್ದರೆ ಸಾಕಿತ್ತು. ಅಷ್ಟು ಸಲಿಗೆ ಶುಭಾ ಹಾಗೂ ಗಿರೀಶ್ ಮಧ್ಯೆ ಇತ್ತು. ಚಿಕ್ಕಂದಿನಿಂದ ಪರಸ್ಪರ ಪರಿಚಯವಿದ್ದಿದ್ದರಿಂದ ಶುಭಾಳ ಕೋರಿಕೆಗೆ ಸರಳ ಸ್ವಭಾವ ಗಿರೀಶ್ ಕೂಡಾ ಒಪ್ಪಿರುತ್ತಿದ್ದ.

ಆದರೆ, ದುಡುಕು ಸ್ವಭಾವ, ಕುರುಡು ಪ್ರೇಮದಲ್ಲಿ ಸಿಲುಕಿದ್ದ ಶುಭಾ, ನಿರ್ದೋಷಿ ಟೆಕ್ಕಿ ಗಿರೀಶ್ ಹತ್ಯೆ ಮಾಡಿಸಿ ಬಿಟ್ಟಳು. ಆಕೆ ಹಾಗೂ ಆಕೆಯ ಸಹಚರರು ಮಾಡಿದ ತಪ್ಪಿಗೆ ಇಂದು ಶಿಕ್ಷೆ ಪ್ರಕಟವಾಗಿದೆ. ಭಾರತೀಯ ದಂಡ ಸಂಹಿತೆ 301,320 ಹಾಗೂ 201 ರ ಅನ್ವಯ ಆರೋಪಿಗಳಿಗಳಿಗೆ ನ್ಯಾಯಾಧೀಶ ಒಂಟಿಗೋಡಿ ಅವರು ಶಿಕ್ಷೆ ಆದೇಶ ನೀಡಿದರು.

ನಿವೃತ್ತ ಯೋಧ ಥಾಮಸ್ ಸೇರಿದಂತೆ ಇಬ್ಬರ ಪ್ರತ್ಯಕ್ಷ ಸಾಕ್ಷಿ. ಶುಭಾ ಹಾಗೂ ಅರುಣ್ ನಡುವೆ ನಡೆದ ಮೊಬೈಲ್ ಸಂಭಾಷಣೆ, ಕೊಲೆಗೆ ಬಳಸಲಾದ ಕಬ್ಬಿಣದ ರಾಡ್ ಸಾಕ್ಷಿಯಾಗಿ ಪರಿಗಣಿಸಲಾಗಿದೆ ಎಂದು ತನಿಖಾಧಿಕಾರಿ ದಾವೂದ್ ಖಾನ್ ಹೇಳಿದರು.

ಶಿಕ್ಷೆ ಪ್ರಮಾಣ : ಅರುಣ ವರ್ಮಾಹಾಗೂ ದಿನೇಶ್ ಗೆ 50 ಸಾವಿರ ದಂಡ, ವೆಂಕಟೇಶ್ ಗೆ 1ಲಕ್ಷ ರು ದಂಡ, ಶುಭಾಳನ್ನು ನಾಲ್ಕನೆ ಅಪರಾಧಿಯಾಗಿ ಪರಿಗಣಿಸಲಾಗಿದ್ದು 75 ಸಾವಿರ ರು ದಂಡ ವಿಧಿಸಲಾಗಿದೆ. ನಾಲ್ವರಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ. ಶುಭಾಳಿಗೆ ಮಾತ್ರ ಹೆಚ್ಚುವರಿ 3 ವರ್ಷ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಬುದ್ಧಿಯ ಸಿವಿಲ್ ವಕೀಲೆ ಶುಭಾ, ಈವರೆಗೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಿಲ್ಲ. ಅಂದು ಮೊದಲ ಬಾರಿ ಬಂಧನಕ್ಕೊಳಗಾಗದ ಕೊಟ್ಟದ್ದು ಒಂದೇ ಉತ್ತರ 'ನೋ ಕಾಮೆಂಟ್ಸ್'. ಅಷ್ಟೇ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X