ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಕ್ ಪವರೆಡ್ ಗೆ ಎದುರಾಗಿ ಅಮುಲ್ ಸ್ಟಾಮಿನಾ

By Mahesh
|
Google Oneindia Kannada News

Amul to milk 'sports drink' demand
ನವದೆಹಲಿ, ಜು.14: ದೇಶದ ಅತೀ ದೊಡ್ಡ ಸಹಕಾರ ಹಾಲು ಉತ್ಪಾದಕ ಸಂಸ್ಥೆ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ 'ಸ್ಟಾಮಿನಾ' ಹೆಸರಿನ ಕ್ರೀಡಾ ಪೇಯವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಯೋಜನೆ ಹಾಕಿಕೊಂಡಿದೆ.

ಅಮುಲ್ ಬ್ರಾಂಡ್ ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಒಕ್ಕೂಟ ಮುಂದಿನ ಅಕ್ಟೋಬರ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೂ ಮೊದಲೆ ಈ ಪೇಯವನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದನ್ನು ಕ್ರೀಡಾಪಟುಗಳ ಮಾರುಕಟ್ಟೆಯನ್ನೇ ಗುರಿಯಾಗಿಸಿಕೊಂಡು ತಯಾರಿಸಲಾಗುವುದು ಎಂದು ಒಕ್ಕೂಟದ ವಕ್ತಾರರು ತಿಳಿಸಿದರು. ಸ್ಟಾಮಿನಾದ ಬೆಲೆ 200 ಮಿಲಿ ಗೆ 15 ರೂಪಾಯಿಗಳಾಗಿವೆ.

ಒಕ್ಕೂಟ ಈಗಾಗಲೇ ಈ ಪಾನೀಯವನ್ನು ಜಿಮ್ ಗಳು, ಕ್ರೀಡಾ ಕ್ಲಬ್ ಹಾಗೂ ಉತ್ತಮ ಮಾರಾಟ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದೆ. ಈ ಕ್ರೀಡಾ ಪಾನೀಯ ಬಹುರಾಷ್ಟ್ರೀಯ ಕಂಪೆನಿಯ ನೀರಿನ ಆಧಾರಿತ ಗೆಟೊರೇಡ್ ಗೆ ಸ್ಪರ್ಧೆ ನೀಡಲಿದೆ. ಹಾಲಿನ ಆಧಾರಿತ ಪೇಯವಾಗಿರುವದರಿಂದ ಉತ್ತಮ ಬೇಡಿಕೆ ಲಭಿಸಬಹುದು.

ಬಹುರಾಷ್ಟ್ರೀಯ ಕಂಪೆನಿ ಕೋಕ ಕೋಲ ಕಾಮನ್ ವೆಲ್ತ್ ಕ್ರೀಡಾ ಕೂಟಕ್ಕೆ ಪವರೇಡ್ ಎಂಬ ತನ್ನದೇ ಅಮದು ಕ್ರೀಡಾ ಪಾನೀಯವನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಆರೋಗ್ಯದ ದೃಷ್ಟಿ ಹಾಗೂ ಹಾಲಿನ ಆಧಾರಿತವಾದುದರಿಂದ ಇದು ವಿಶಿಷ್ಟ ಕ್ರೀಡಾ ಪಾನೀಯ ಆಗಲಿದೆ.

ಭಾರತದಲ್ಲಿ ಕ್ರೀಡಾ ಪಾನೀಯ ಮಾರುಕಟ್ಟೆ ವಾರ್ಷಿಕ 100 ಕೋಟಿ ರೂಪಾಯಿಗಳಷ್ಟಿದೆ. ಜನರಲ್ಲಿ ಹೆಚ್ಚುತ್ತಿರುವ ವ್ಯಾಯಾಮ ಆಕಾಂಕ್ಷೆ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ 2012ರಲ್ಲಿ ಕ್ರೀಡಾ ಪಾನೀಯ ಮಾರುಕಟ್ಟೆ 1000 ಕೋಟಿ ರೂಪಾಯಿ ತಲುಪಲಿದೆ ಎನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X