ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಪ್ರತಿನಿಧಿಗಳು ಸದನದಲ್ಲಿ ಏನ್ಮಾಡ್ತಿದ್ದಾರೆ?

By Mahesh
|
Google Oneindia Kannada News

Opposition to continue sleep protest in Assembly
ಬೆಂಗಳೂರು, ಜು.13: ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಸಾಧ್ಯವೇ ಇಲ್ಲ ಎಂದು ರಾಜ್ಯ ದ ಕಾನೂನು ಸಚಿವ ಸುರೇಶ್ ಕುಮಾರ್ ಖಡಾ ಖಂಡಿತವಾಗಿ ಹೇಳಿದ್ದಾರೆ. ಈ ನಡುವೆ ಸದನವನ್ನೇ ಮನೆ ಮಾಡಿಕೊಂಡಿದ್ದ ಶಾಸಕರುಗಳ ದೈನಂದಿನ ಕಾರ್ಯಗಳು ಸಹಾ ವಿಧಾನಸಭೆ ಆವರಣದಲ್ಲೇ ಸಾಂಗವಾಗಿ ನೆರವೇರಿದೆ.

ಪವಡಿಸು ಪರಮಾತ್ಮ:ಸಭಾಪತಿ ಕೆಜಿ ಬೋಪಯ್ಯ ಅವರು ಅಚ್ಚುಕಟ್ಟಾಗಿ ಹಾಸಿಗೆ, ಹೊದಿಕೆ ವ್ಯವಸ್ಥೆ ಮಾಡಿದ್ದರು. ರಕ್ತದೊತ್ತಡ, ಮಧುಮೇಹದಿಂದ ಬಳಲುವ ಶಾಸಕರಿಗೆ ಮಾತ್ರೆ ವ್ಯವಸ್ಥೆ ಕೂಡಾ ಇತ್ತು. ಎಸಿ ವ್ಯವಸ್ಥೆಯ ಕೋಣೆಯಲ್ಲಿ ಆರಾಮವಾಗಿ ನಿದ್ದೆ ಮಾಡಿದರು.

ರಾತ್ರಿ ಕಳೆಯಲು ಶಾಸಕರುಗಳು ಮಿಮಿಕ್ರಿ, ಹಾಡು ಹೇಳುವುದು, ಉಭಯ ಕುಶಲೋಪರಿ ಚರ್ಚೆ ನಡೆಸಿದರು ಎಂದು ಜೆಡಿಎಸ್ ನ ವೈಎಸ್ ವಿ ದತ್ತಾ ಹೇಳಿದರು.

ವಿಧಾನಸಭೆಯ ಆವರಣದಲ್ಲಿ ಮುಂಜಾನೆ ವಾಕಿಂಗ್ ಮುಗಿಸಿದ ಸಿದ್ದರಾಮಯ್ಯ ಅವರು, 'ಹೊಲ ಗದ್ದೆ ಬದಿಯಲ್ಲಿ ಮಲಗಿಕೊಂಡು ಅಭ್ಯಾಸವಿರುವ ನಮಗೆ ಎಸಿ ರೂಮ್ ನಲ್ಲಿ ಮಲಗೋಕೆ ಏನು ಕಷ್ಟ ಆಗಲಿಲ್ಲ' ಎಂದು ಪ್ರತಿಕ್ರಿಯಿಸಿದರು.

ಬಿರ್ಯಾನಿ ತಿಂದಿದ್ದಕ್ಕೆ ಸಿಎಂ ಆಕ್ಷೇಪ: ಸದನ ಒಂದು ಪವಿತ್ರ ದೇಗುಲ. ಅಲ್ಲಿ ಮಾಂಸಾಹಾರ ಸೇವಿಸಿ, ಶಾಸಕರು ಅಪವಿತ್ರ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವ್ಯಥೆಪಟ್ಟ ಬೆನ್ನಲ್ಲೇ ಆಡಳಿತ ಪಕ್ಷದ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಯಾಗಿ ' ವಾಂಟ್ ಬಿರಿಯಾನಿ' ಎಂದು ಪ್ರತಿಪಕ್ಷಗಳ ಶಾಸಕರುಗಳು ಘೋಷಣೆ ಕೂಗಲಾರಂಭಿಸಿದರು.ಕೊನೆಗೆ ಸಭಾಪತಿಗಳು ಕಲಾಪವನ್ನು ನಾಳೆಗೆ ಮುಂದೂಡಿದರು.

ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು, ಬಳ್ಳಾರಿ ಸಚಿವರು ಮತ್ತು ಶಾಸಕರನ್ನು ಅಮಾನತು ಮಾಡಬೇಕು. ನಾವು ಬಳ್ಳಾರಿ ಬಚಾವೋ ಆಂದೋಲನ' ಮೂಲಕ ಬಳ್ಳಾರಿಗೆ ಹೋಗಿ ಪ್ರತಿಭಟನೆ ಮಾಡುತ್ತೇವೆ ಅವರು ಏನು ಮಾಡುತ್ತಾರೋ ನೋಡೊಣ ಎಂದು ಡಿಕೆ ಶಿವಕುಮಾರ್ ಗುಡುಗಿದರು.

ಮಾಧ್ಯಮಕ್ಕೆ ನಿರ್ಬಂಧ: ಪರಿಷತ್ತಿನ ಕಲಾಪ ಚಿತ್ರೀಕರಿಸದಂತೆ ಮಾಧ್ಯಮದವರಿಗೆ ಸಭಾಪತಿಗಲು ತಾಕೀತು ಮಾಡಿದ ಘಟನೆ ಇಂದು ನಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X